ನಳಿನ್ ಕುಮಾರ್ ಮಹಾ ಜಾತಿವಾದಿ : ಸತ್ಯಜಿತ್ ಸುರತ್ಕಲ್ ಆರೋಪ

ನಾರಾಯಣ ಗುರು ನಿಗಮ ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭ ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟ ವಿಚಾರ ಸೇರಿದಂತೆ ಹಲವಾರು ವಿಷಯಗಳ ಕುರಿತಂತೆ ಬಿಲ್ಲವ ಸಮುದಾಯವನ್ನು ರಾಜ್ಯ ಸರಕಾರ ನಿರ್ಲಕ್ಷಿಸುತ್ತಿದೆ. ಈ ಬಗ್ಗೆ ಸ್ಥಳೀಯ ಸಮುದಾಯದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಅವರನ್ನು ಕೇಳಿದರೆ, ಸಿಎಂ ನಮ್ಮ ಮಾತು ಕೇಳುತ್ತಿಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ರಾಜೀನಾಮೆ ಕೊಟ್ಟು ಹೊರಬನ್ನಿ ಎಂದು ಅವರಿಗೆ . ಹೇಳಿದ್ದೇನೆ ಆದರೆ ಸ್ಪಂದನೆ ಸಿಗುತ್ತಿಲ್ಲ. ಬದಲಾಗಿ ಅವರು ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಸಮುದಾಯದ ಜನಪ್ರತಿನಿಧಿಗಳಾಗಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾ ಮಂಡಲದ ರಾಷ್ಟ್ರೀಯ ಅಧ್ಯಕ್ಷ, ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ ಗುಲ್ಬರ್ಗದ ಡಾ. ಪ್ರಣಾವನಂದ ಸ್ವಾಮೀಜಿ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್‍ರವರು ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭ ವಿವಿಧ ಸಮುದಾಯಗಳಿಗೆ ಆದ ನೋವಿನ ಬಗ್ಗೆ ಮೌನವಾಗಿದ್ದರು. ಸಿಎಂ ಜತೆ ಚರ್ಚಿಸಿ ನ್ಯಾಯ ಕೊಡಿಸುವ ಕೆಲಸ ಮಾಡಿಲ್ಲ. ಆದರೆ ಕಯ್ಯಾರ ಕಿಂಞಣ್ಣ ರೈ ಅವರ ವಿಷಯ ಪ್ರಸ್ತಾಪ ಆದಾಗ ಸಮುದಾಯದ ನಾಯಕರು ಧ್ವನಿ ಎತ್ತಿದಾಗ ಅವರ ಸಮುದಾಯದ ಮನೆಗೆ ತೆರಳಿ ಸಂತೈಸುವ ಕೆಲಸ ಮಾಡಿದ್ದಾರೆ. ಅವರು ಹಿಂದೂವಾದಿಯೋ, ಜಾತಿಯವಾದಿಯೋ ಎಂಬುದು ಇದರಲ್ಲೇ ಸಾಬೀತಾಗಿದೆ. ಅವರಿಗಿಂತ ಇನ್ನೋರ್ವ ಜಾತಿವಾದಿಯೇ ಇಲ್ಲ ಎಂದು ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದುತ್ವದ ಹೋರಾಟ ಕೇವಲ ಹಿಂದುಳಿದ ವರ್ಗ ಅಥವಾ ದಲಿತ ವರ್ಗಕ್ಕತೆ ಮಾತ್ರ ಸೀಮಿತವಾಗಿಲ್ಲ. ಆದರೆ ರಾಜಕಾರಣ ಹಿಂದುಳಿದ ವರ್ಗವನ್ನು ಹಿಂದುತ್ವಕ್ಕಾಗಿ ಬಳಸಿಕೊಂಡಿದೆ. ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ಉಳಿದ ವರ್ಗಗಳು ಸಾಮಾಜಿಕ , ರಾಜಕೀಯ ನ್ಯಾಯ ಪಡೆಯುವಲ್ಲಿ ಸಫಲರಾಗಿದ್ದಾರೆ. ಹಾಗಾಗಿ ಹಿಂದುಳಿದ ವರ್ಗ, ದಲಿತ ವರ್ಗವನ್ನು ತುಳಿಯಲು ಹೊರಟರೆ ಹಿಂದೂ ಸಮಾಜ ಸಾಯಲಿದೆ ಎಂದು ಅವರು ಹೇಳಿದರು.

Related Posts

Leave a Reply

Your email address will not be published.