ಮಂಗಳೂರು : ಎಸ್ ಸಿಡಿಸಿಸಿ ಬ್ಯಾಂಕ್ ಗೆ ಪ್ರತಿಷ್ಠಿತ “ಬ್ಯಾಂಕೊ ಬ್ಲೂ ರಿಬ್ಬನ್ ” ಪ್ರಶಸ್ತಿ

ಸಹಕಾರ ರಂಗದ ಅಗ್ರಮಾನ್ಯ ಬ್ಯಾಂಕ್ ಎನಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್)ಗೆ ಮಹಾರಾಷ್ಟ್ರದ ಅವಿಸ್ ಪಬ್ಲಿಕೇಶನ್ ನೀಡುವ ಪ್ರತಿಷ್ಠಿತ “ಬ್ಯಾಂಕೊ ಬ್ಲೂ ರಿಬ್ಬನ್ – 2023 ಪ್ರಶಸ್ತಿ”ಯನ್ನು ಮುಂಬಯಿಯಲ್ಲಿ ಪ್ರದಾನ ಮಾಡಲಾಯಿತು.

ದಮನ್ ನ ಡೆಲ್ಟಿನ್ ರೆಸಾರ್ಟ್ ಸಭಾಂಗಣದಲ್ಲಿ ಆಯೋಜಿಸಲಾದ ಮೂರು ದಿನಗಳ ವಾರ್ಷಿಕ ಶೃಂಗಸಭೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯ ಮಹಾಪ್ರಬಂಧಕರಾದ ಶ್ರೀ ಪಿ.ಕೆ.ಅರೋರಾ ಅವರಿಂದ “ಬ್ಯಾಂಕೊ ಬ್ಲೂ ರಿಬ್ಬನ್ – 2023 ” ಪ್ರಶಸ್ತಿಯನ್ನು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅವರು ಸ್ವೀಕರಿಸಿದರು.

ಪ್ರತಿಷ್ಠಿತ ‘ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ’ಗೆ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಹಕಾರ ಬ್ಯಾಂಕುಗಳ ಪ್ರತಿಕ್ರಿಯೆ ಮತ್ತು ಭಾಗವಹಿಸುವಿಕೆಯನ್ನು ಸ್ವೀಕರಿಸಿದ್ದು, ಅಖಿಲ ಭಾರತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ವಿಭಾಗದಲ್ಲಿ ಅಸಾಧಾರಣ ಸಾಧನೆಗೈದಿರುವ ಎಸ್ಸಿಡಿಸಿಸಿ ಬ್ಯಾಂಕ್ನ್ನು 2023ರ ‘ ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ’ ಗೆ ಆಯ್ಕೆ ಮಾಡಲಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಬ್ಯಾಂಕ್ ಮೂರನೇ ಬಾರಿಗೆ ಮುಡಿಗೇರಿಸಿಕೊಂಡಿದೆ.

ಜನಸ್ನೇಹಿ ಬ್ಯಾಂಕ್: ಸಹಕಾರಿ ರಂಗದಲ್ಲಿ ಹೊಸ ಅವಿಷ್ಕಾರದೊಂದಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಾ, ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಗುರುತಿಸಿಕೊಂಡಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 112 ಶಾಖೆಗಳ ಮೂಲಕ ಉತ್ಕೃಷ್ಟ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿರುವ ಎಸ್ಸಿಡಿಸಿಸಿ ಬ್ಯಾಂಕ್ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ ಸಮರ್ಥ ನಾಯಕತ್ವದಲ್ಲಿ ಕಾರ್ಯನಿರ್ವಹಿಸಿ,’ಜನಸ್ನೇಹಿ’ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ಸಿಡಿಸಿಸಿ ಬ್ಯಾಂಕ್ ಹಲವು ಸಾಧನೆಗಳನ್ನು ಗೈದಿದೆ. 21ಬಾರಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ , 18 ಬಾರಿ ನಬಾರ್ಡ್ ಪ್ರಶಸ್ತಿ ಹಾಗೂ 2 ಬಾರಿ ಬ್ಯಾಂಕಿಂಗ್ ಪ್ರಂಟಿಯರ್ಸ್ ಪ್ರಶಸ್ತಿ ಹಾಗೂ ‘ಎಪಿವೈ’ ರಾಷ್ಟ್ರೀಯ ಪ್ರಶಸ್ತಿಯೂ ಎಸ್ಸಿಡಿಸಿಸಿ ಬ್ಯಾಂಕಿಗೆ ಲಭಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಬ್ಯಾಂಕೊ” ಅವಿಸ್ ಪಬ್ಲಿಕೇಶನ್ ಮುಖ್ಯ ಸಂಪಾದಕರಾದ ಶ್ರೀ ಅವಿನಾಶ್ ಶಿಂತ್ರೆ ಗುಂಡೇಲ್, ಗ್ಯಾಲೆಕ್ಸಿ ಇನ್ನಾ ಪುಣೆ ಇದರ ನಿರ್ದೇಶಕರಾದ ಶ್ರೀ ಅಶೋಕ್ ನಾಯ್ಕ್ , ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಶ್ರೀ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು , ಶ್ರೀ ಶಶಿಕುಮಾರ್ ರೈ ಬಾಲ್ಯೊಟ್ಟು , ಹಾಗೂ ಜಯಪ್ರಕಾಶ್ ತುಂಬೆ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.