ಅಮೇರಿಕಾದಲ್ಲಿ ಕೋಟದ ಕುವರಿ ಅದಿತ್ರಿ ಪೈಯಿಂದ ಕಾಂತಾರ ಸಿನಿಮಾ ಹಾಡು

ಉಡುಪಿ ಜಿಲ್ಲೆ ಕೋಟ ಮೂಲದ 10 ವರ್ಷದ ಕುವರಿ ಅದಿತ್ರಿ ಪೈ ಅಮೇರಿಕಾದಲ್ಲಿ ಕಾರ್ಯಕ್ರಮವೊಂದರಲ್ಲಿ ಕಾಂತಾರ ಸಿನಿಮಾ ಹಾಡು ಹಾಡಿ ಜನಮೆಚ್ಚುಗೆ ಪಡೆದಿದ್ದಾಳೆ.
ಅಮೇರಿಕಾದ ಒಹಾಯೋ ರಾಜ್ಯದ ಲೈಮಾದಲ್ಲಿ ಮಲ್ಟಿ ಕಲ್ಚರಲ್ ಎಕ್ಸ್ ಪೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂತಾರಾ ಸಿನಿಮಾದ ವರಾಹ ರೂಪಂ ಹಾಡಿನ ಟ್ಯಾಕ್‍ಗೆ ಶಾಸ್ತ್ರೀಯ ರಾಗದ ಕನ್ನಡ ಗೀತೆಯೊಂದನ್ನು ಅದಿತ್ರಿ ಪೈ ಸ್ವರ ಮಾಧುರ್ಯದಿಂದ ಹಾಡಿ ಜನಮೆಚ್ಚುಗೆ ಗಳಿಸಿದ್ರು.
ಅಮೇರಿಕಾದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಕೋಟದ ರಾಜೇಶ್ ಪೈ ಮತ್ತು ಕೊಕ್ಕರ್ಣೆಯ ದೇವಿಕಾ ಪೈ ದಂಪತಿಗಳ ಪುತ್ರಿಯಾದ ಅದಿತ್ರಿ ಪೈ, ಸಹೋದರ ಅಮಯ್ ಪೈ ಜೊತೆ ಬಾತ್ ಎಲಿಮೆಂಟರಿ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ. ಈಕೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಸ್ಕೌಟ್ಸ್ , ಕ್ರೀಡೆಯಲ್ಲಿ ಕೂಡಾ ತೊಡಗಿಸಿಕೊಂಡಿದ್ದಾಳೆ.
