ಉಜಿರೆ ಎಸ್.ಡಿ.ಎಂ. ಕಾಲೇಜಿನ ಕಚೇರಿ ಅಧೀಕ್ಷಕರಾಗಿ ದಿವಾಕರ ಪಟವರ್ಧನ್ ನೇಮಕ

ಉಜಿರೆ, ಜು.17: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಚೇರಿ ಅಧೀಕ್ಷಕರಾಗಿ ದಿವಾಕರ ಪಟವರ್ಧನ್ ಮುಂಡಾಜೆ ಅವರು ಪದೋನ್ನತಿ ಹೊಂದಿದ್ದಾರೆ. ಯುವರಾಜ್ ಪೂವಣಿ ಅವರು ಹುದ್ದೆಯಿಂದ ಸೇವಾನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಈ ನೇಮಕಾತಿ ನಡೆದಿದೆ.

ಪಟವರ್ಧನ್ ಅವರು ಕಳೆದ 20 ವರ್ಷಗಳಿಂದ ಕಾಲೇಜಿನಲ್ಲಿ ಸೀನಿಯರ್ ಅಕೌಂಟ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಜು.14ರಂದು ಕಚೇರಿ ಅಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ರಿಜಿಸ್ಟ್ರಾರ್ ಗಳಾದ ಶಶಿಶೇಖರ ಎನ್. ಕಾಕತ್ಕರ್ ಹಾಗೂ ನಂದಾ ಕುಮಾರಿ, ನಿವೃತ್ತ ಕಚೇರಿ ಅಧೀಕ್ಷಕ ಯುವರಾಜ್ ಪೂವಣಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

Related Posts

Leave a Reply

Your email address will not be published.