ಖಾಸಗಿ ವಿಚಾರ ಹರಿದಾಡಿ ದುರ್ಬಳಕೆ ಮಾಡಿದವರಿಗೆ ಶಿಕ್ಷೆ ಆಗಬೇಕು : ಶೋಭಾ ಕರಂದ್ಲಾಜೆ
ಉಡುಪಿಯ ಕಾಲೇಜೊಂದರ ಶೌಚಾಲಯಲ್ಲಿ ನಡೆದ ಶೂಟಿಂಗ್ ಘಟನೆ ದೇಶದ ಗಮನ ಸೆಳೆದಿದೆ. ನಮಗೆ ನಮ್ಮ ವಿದ್ಯಾರ್ಥಿನಿಯರ ರಕ್ಷಣೆ ಮುಖ್ಯವಾಗಿದೆ. ಖಾಸಗಿ ವಿಚಾರ ಹೊರಗಡೆ ಹರಿದಾಡಿ ದುರ್ಬಳಕೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಪ್ರತಿನಿಧಿಗಳು ,ಡಿಸಿ, ಎಸ್‍ಪಿಗೆ ವಿದ್ಯಾರ್ಥಿನಿಯರು ಮಾಹಿತಿ ನೀಡಿದ್ದಾರೆ. ಲಂಚ್ ಬ್ರೇಕ್ ಟೈಮಲ್ಲಿ ವಿದ್ಯಾರ್ಥಿಗಳು ಕಾಲೇಜ್ ಕ್ಯಾಂಪಸ್‍ಗೆ ಬರುತ್ತಿದ್ದರು. ಎಲ್ಲಾ ಸಿಸಿಟಿವಿ ದೃಶ್ಯ, ಮೊಬೈಲ್‍ಗಳೆಲ್ಲವನ್ನು ಎಫ್‍ಎಸ್‍ಎಲ್ ಗೆ ಕಳುಹಿಸಬೇಕು. ಯಾರನ್ನೂ ಇಲ್ಲಿ ರಕ್ಷಿಸುವ ಪ್ರಶ್ನೆ ಇಲ್ಲ. ಆದಷ್ಟು ಬೇಗ ಈ ಘಟನೆಯ ತನಿಖೆ ಆಗಬೇಕು ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದರು.