ಉದಯಣ್ಣ ಗೆದ್ದರೆ ಕಾರ್ಕಳ ಜನತೆ ಗೆದ್ದಂತೆ: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶುಭದ ರಾವ್ ಹೇಳಿಕೆ

ಕಾರ್ಕಳ, ಮಿಯಾರು ಗ್ರಾಮದ ಜೋಡುಕಟ್ಟೆ ಸಂಜೆ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಸಭೆಯು ನಡೆಯಿತು

ಸಭೆಯನ್ನು ಉದ್ದೇಶಿಸಿ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶುಭದ ರಾವ್ ಮಾತನಾಡಿ ಮುನಿಯಾಲು ಉದಯಶೆಟ್ಟಿ ಯವರೇ ಕಾರ್ಕಳದ ಕಾಂಗ್ರೆಸ್ ಅಭ್ಯರ್ಥಿಯಾಗಬೇಕೆಂದು ಬಹುಜನರ ಬೇಡಿಕೆಯಾಗಿತ್ತು. ಆ ಬೇಡಿಕೆ ಇಂದು ನೆರವೇರಿದೆ. ಉದಯಣ್ಣ ಗೆದ್ದರೆ ಕಾರ್ಕಳ ಜನತೆ ಗೆದ್ದಂತೆ. ಉದಯಣ್ಣ ಗೆದ್ದರೆ ಕಾರ್ಕಳದ ಸೌಹಾರ್ದ ಗೆದ್ದಂತೆ. ಎಂದು ನಾವು ಅರ್ಥ ಮಾಡಿಕೊಳ್ಳಬೇಕೆಂದು ಎಂದು ಹೇಳಿದರು

ಕಾರ್ಕಳವು ಭ್ರಷ್ಟಮುಕ್ತ ಕಮಿಷನ್ ಮುಕ್ತ ಕಾರ್ಕಳ ಆಗಬೇಕೆಂದರೆ ನಮ್ಮ ಕಾಂಗ್ರೆಸ್ಸಿನ ನಿಷ್ಠಾವಂತ ಅಭ್ಯರ್ಥಿ ಉದಯಣ್ಣನವರಿಗೆ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಶುಭದ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ನಂತರ ಮಾತನಾಡಿದ ಕ್ಷೇತ್ರ ಅಭ್ಯರ್ಥಿ ಉದಯ ಶೆಟ್ಟಿ ಅವರು ಯಾವ ಶಾಸಕನು ತನ್ನ ಕಿಸೆಯಿಂದ ಕ್ಷೇತ್ರದ ಅಭಿವೃದ್ಧಿಗೋಸ್ಕರ ತನ್ನ ಕಿಸೆಯಿಂದ ಒಂದು ನಯ್ಯಾಪೈಸೆಯನ್ನುಖರ್ಚು ಮಾಡುವುದಿಲ್ಲ. ಜನರ ತೆರಿಗೆ ಹಣದಿಂದ ಕಾಮಗಾರಿಕೆ ಮಾಡಿಸುತ್ತಾನೆ. ಜನರ ತೆರಿಗೆ ಹಣ ಪೆÇೀಲಾಗದಂತೆ ನಾವು ಕಾಮಗಾರಿಗಳನ್ನು ಮಾಡಬೇಕೆಂದು ಹೇಳಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಕಿರಣ್ ಹೆಗಡೆ, ಅನಿತಾ ಡಿಸೋಜ, ಮೀಯರು ಕಾಂಗ್ರೆಸ್ ಮುಖಂಡರಾದ ರಾಜ್ ಬಲಿಪ, ಪುರಸಭೆ ಮಾಜಿ ಅಧ್ಯಕ್ಷರಾದ subeeಣh ಟಿ.ಡಿ ಉಪಸ್ಥಿತರಿದ್ದು ಶಬ್ಬೀರ್ ಶೇಕ್ ಕಾರ್ಯಕರ್ತ ನಿರೂಪಿಸಿ ಸ್ವಾಗತಿಸಿದರು.

Related Posts

Leave a Reply

Your email address will not be published.