ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಶೇ. 90ರಷ್ಟು ಪೂರ್ಣ

ಬೈಂದೂರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಉದ್ದೇಶದಿಂದ ಸಮೀಕ್ಷೆ ಎರಡು ದಿನಗಳು ಬಾಕಿ ಉಳಿದಿದ್ದು ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಶೇ. 90ರಷ್ಟು ಪೂರ್ಣಗೊಂಡಿದ್ದು ಶೇ.10ರಷ್ಟು ಸಮೀಕ್ಷೆ ಬಾಕಿ ಉಳಿದಿದೆ.
ಬೈಂದೂರು ಕ್ಷೇತ್ರ ವ್ಯಾಪ್ತಿಯ ಪಡಿತರ ಚೀಟಿಯ ಅಂಕಿ ಅಂಶಗಳ ಪ್ರಕಾರ ಸುಮಾರು 1,35,000 ಮನೆಗಳಿದ್ದುಅ.16ರಂದು ಸುಮಾರು 1,20,000 ಮನೆಗಳು ಪೂರ್ಣಗೊಂಡಿದೆ.
ಇನ್ನು ಎರಡು ದಿನಗಳಲ್ಲಿ ಸುಮಾರು 15,000 ಮನೆಗಳು ಬಾಕಿ ಇರುತ್ತದೆ. ಬೈಂದೂರು ತಾಲೂಕಿನ ಕೆಲವು ಪ್ರದೇಶಗಳಲ್ಲಿ ಶಾಡೋ ನೆಟ್ವರ್ಕ್,
ನೆಟ್ವರ್ಕ್ ಇಲ್ಲದೆ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ಗಣತಿ ಬಾಕಿ ಇರುತ್ತದೆ. ಅಂತಹ ಪ್ರದೇಶಗಳ ಜನರನ್ನು ಸ್ಥಳೀಯಾಡಳಿತ, ಶಿಕ್ಷಕರು, ಪ. ಪಂಚಾಯತ್ ಕಚೇರಿಯ ಸಿಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಸಮೀಕ್ಷೆಯ ನೋಡಲ್ ಅಧಿಕಾರಿ ರಾಜು ಮತ್ತು
ಬೈಂದೂರು ತಹಶೀಲ್ದಾರ್ ರಾಮಚಂದ್ರಪ್ಪಮಾಹಿತಿ ನೀಡಿದ್ದಾರೆ.ಎರಡು ದಿನಗಳಲ್ಲಿ ಬಿಟ್ಟು ಹೋಗಿರುವ ಜನರ ನೋಂದಣಿಗಳು ಪೂರ್ಣ ಪ್ರಮಾಣದಲ್ಲಿ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಉಪಸ್ಥಿತರಿದ್ದರು

Related Posts

Leave a Reply

Your email address will not be published.