ಎಸ್ಸೆಸ್ಸೆಲ್ಸಿ ಫಲಿತಾಂಶ: ಸಮೃದ್ಧ್ ಹೆಚ್.ಸಿ. ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ

2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಮುಲ್ಕಿಯ ಮನ್ನೆಬೆಟ್ಟು ಕಮ್ಮಾಜೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಸಮೃದ್ಧ್ ಹೆಚ್.ಸಿ. ಅವರು 625ರಲ್ಲಿ 607 ಅಂಕ ಪಡೆದು 97.12 ಶೇಕಡಾ ಫಲಿತಾಂಶವನ್ನು ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಸಮೃದ್ಧ್ ಹೆಚ್.ಸಿ. ಅವರು ಕನ್ನಡದಲ್ಲಿ 115, ಇಂಗ್ಲೀಷ್‌ನಲ್ಲಿ 99, ಹಿಂದಿಯಲ್ಲಿ 98, ಗಣಿತದಲ್ಲಿ 98, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 97ಅಂಕಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಸಮೃದ್ಧ್ ಹೆಚ್.ಸಿ. ಇವರು ಕೊಡಗು ಜಿಲ್ಲೆಯ ಕೊಯಿನಾಡಿನ ನಿವಾಸಿಯಾಗಿರುವ ಚಿದಾನಂದ ಮತ್ತು ರಮ್ಯ ದಂಪತಿಗಳ ಪುತ್ರನಾಗಿದ್ದು, ಮಂಗಳೂರಿನಲ್ಲಿ ನೆಲೆಸಿದ್ದಾರೆ. ಸಮೃದ್ಧ್ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.