ಸುಳ್ಯ:ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಆಟಿ ಸಂಭ್ರಮ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಆಟಿ ಸಂಭ್ರಮ ‘ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಮ್ಮ ಶಾಲೆಯ ಹಿರಿಯ ಪೋಷಕರಾದ ಶ್ರೀಮತಿ . ಪುಷ್ಪಾವತಿ ಮಾಣಿಬೆಟ್ಟು , ಶ್ರೀಮತಿ. ಜಯಲಕ್ಷ್ಮಿ ಇವರು ಭಾಗವಹಿಸಿ ಆಟಿಯ ಮಹತ್ವದ ಬಗ್ಗೆ ಪುಟಾಣಿ ಮಕ್ಕಳಿಗೆ ತಿಳಿಸಿಕೊಟ್ಟರು .

ಪೋಷಕರೆಲ್ಲರೂ ಆಟಿಯ ವಿಶೇಷ ಖಾದ್ಯಗಳನ್ನು ತಯಾರಿಸಿ ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು . ಶಾಲೆಯ ಪುಟಾಣಿ ವಿದ್ಯಾರ್ಥಿಗಳು ನೃತ್ಯ ಮಾಡಿ ಸಂತೋಷಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳ ಜೊತೆಯಲ್ಲಿ ಶಾಲಾ ಸಂಚಾಲಕಿ ಶ್ರೀಮತಿ . ಗೀತಾಂಜಲಿ ಟಿ. ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕರಾದ ಶ್ರೀಮತಿ.ರೂಪ ಪ್ರಾರ್ಥನೆ ನೆರವೇರಿಸಿ , ಶ್ರೀಮತಿ. ಫಬಿದಾ ವಂದಿಸಿ , ಶ್ರೀಮತಿ .ನಿರ್ಮಲ ಕಾರ್ಯಕ್ರಮವನ್ನು ನಿರೂಪಿಸಿದರು.

Related Posts

Leave a Reply

Your email address will not be published.