ಸುಳ್ಯ : ಹೊಳೆ ದಾಟುವಾಗ ಹೊಳೆಗೆ ಬಿದ್ದು ವ್ಯಕ್ತಿ ನಾಪತ್ತೆ
ಸುಳ್ಯದ ಅಲೆಟ್ಟಿ ಎಂಬಲ್ಲಿ ವ್ಯಕ್ತಿ ಯೋರ್ವರು ಹೊಳೆ ದಾಟುವಾಗ ಹೊಳೆಗೆ ಬಿದ್ದು ನಾಪತ್ತೆಯಾಗಿರುವ ಘಟನೆ ನಡೆದಿದೆ. ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಸುಳ್ಯ ಪೊಲೀಸರೊಂದಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿ, ಎಸ್‍ಡಿಆರ್‍ಎಫ್ ತಂಡ, ಸ್ಥಳೀಯ ಈಜುಗಾರರ ತಂಡ ಸುಳ್ಯ ಪೊಲೀಸರು ರಾತ್ರಿವರೆಗೂ ಹುಡುಕಾಟ ನಡೆಸಿದ್ದಾರೆ. ನಾಪತ್ತೆಯಾಗಿರುವ ವ್ಯಕ್ತಿ ಇನ್ನೂ ಪತ್ತೆಯಾಗಿರುವುದಿಲ್ಲ. ನಾಪತ್ತೆಯಾಗಿರುವ ವ್ಯಕ್ತಿ ಕಾಸರಗೋಡಿನ ನಾರಾಯಣನ್ ಎಂಬ ಮಾಹಿತಿ ದೊರೆತಿದೆ.