ಸುಳ್ಯ: ಬೆಳ್ಳಾರೆ ಕನ್ಸ್ಟ್ರಕ್ಷನ್ ನ ಮಾಲಕ ಇಂಜಿನಿಯರ್ ಮೊಹಮ್ಮದ್ ನಿಧನ
ಬೆಳ್ಳಾರೆ ನಿವಾಸಿ ಇಂಜಿನಿಯರ್ ಮುಹಮ್ಮದ್ ರವರು ಅಲ್ಪದಿನದ ಅನಾರೋಗ್ಯದಿಂದ ರಾತ್ರಿ ಪುತ್ತೂರಿನ ದರ್ಬೆಯ ಆಸ್ಪತ್ರೆಯಲ್ಲಿ ನಿಧನರಾದರು.
ಸುಳ್ಯ ತಾಲೂಕಿನಲ್ಲಿ ಇಂಜಿನಿಯರ್ ಮೊಹಮ್ಮದ್ ಎಂದು ಚಿರಪರಿಚಿತರಾಗಿರುವ ಇವರು ಸರ್ವಧರ್ಮದವರೊಂದಿಗೆ ಉತ್ತಮ ಬಾಂಧವ್ಯವನ್ನು
ಹೊಂದಿದ್ದರು.
ಬೆಳ್ಳಾರೆಯ ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಬೆಳ್ಳಾರೆ ನಿವಾಸಿಯಾಗಿರುವ ಆಶ್ರಫ್ ಮತ್ತು ಆರೀಫ್ ರವರ ತಂದೆ ಇಂದು ಬೆಳ್ಳಾರೆ ಕೇಂದ್ರ ಜುಮ್ಮ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.