ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ ಸೂರ್ಯಕಾಂತ್ ಜೆ.ಸುವರ್ಣ ಆಯ್ಕೆ
ಮೂಲ್ಕಿ:ಜಯ ಸಿ ಸುವರ್ಣ ಸ್ಥಾಪಿತ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮುಲ್ಕಿ ಇದರ ನೂತನ ಅಧ್ಯಕ್ಷರಾಗಿ ಸೂರ್ಯಕಾಂತ್ ಜೆ ಸುವರ್ಣ ಆಯ್ಕೆಯಾಗಿದ್ದಾರೆ.

ದಿನಾಂಕ 26/10/2025ರ ಭಾನುವಾರದಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿಯಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ
ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಬಿ.ಎನ್.ಶಂಕರ ಪೂಜಾರಿ ಬ್ರಹ್ಮಾವರ, ಪ್ರಭಾಕರ ಬಂಗೇರ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಜಯಾನಂದ ಮಂಗಳೂರು, ಜತೆ ಕಾರ್ಯದರ್ಶಿ ಗಣೇಶ್ ಎಲ್.ಪೂಜಾರಿ ಬೈಂದೂರು, ಶಿವಾಜಿ ಸುವರ್ಣ ಬೆಳ್ಳೆ, ಕೋಶಾಧಿಕಾರಿಯಾದ ಬೇಬಿ ಕುಂದರ್ ಬಂಟ್ವಾಳ, ಜತೆ ಕೋಶಾಧಿಕಾರಿಗಳಾದ ಯೋಗೀಶ್ ಕೋಟ್ಯಾನ್ ಚಿತ್ರಾಪು, ಕೃಷ್ಣಪ್ಪ ಪೂಜಾರಿ
ಆಯ್ಕೆಯಾಗಿದ್ದಾರೆ.


















