ಖುಷಿ ನೀಡಿದ ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಸಂಗೀತೋತ್ಸವ ಮತ್ತು ಪಿಟೀಲು ವಿದ್ವಾನ್ ಪ್ರಭಾಕರ್ ಕುಂಜಾರು ಅವರಿಗೆ “ಸ್ವರ ಸಿಂಚನ “ಪುರಸ್ಕಾರ – 2023

ಪೆರ್ನಾಜೆ :- ರಾಗದೆಲೆಗೆ ಬಾವ ಬೇಸುಗೆ ಎಂಬಂತೆ ಸಂಗೀತ ಸಂಭ್ರಮವು ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಇದರ ಶಾಲೆಯ ವಿದ್ಯಾರ್ಥಿಗಳಿಂದ ಶ್ರೀ ಭಗವತಿ ದೇವಸ್ಥಾನದ ಸಿಂಹಮಾಸದ ವಿಶೇಷ ಪೂಜಾ ಕಾರ್ಯಕ್ರಮದ ಪ್ರಯುಕ್ತ ಇತ್ತೀಚೆಗೆ ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ದೀಪ ಪ್ರಜ್ವಲನ ಮೂಲಕ ವಿದ್ವಾನ್ ರಾಜೇಶ್ ಕ್ಯಾಲಿಕೆಟ್ ಇವರು ನೆರವೇರಿಸಿ ನಿರಂತರ ಸಾಂಸ್ಕೃತಿಕ ಸವಿಯನ್ನು ಉಣಬಡಿಸಿ ಸಾಂಸ್ಕೃತಿಕ ಸುಗಂಧವನ್ನು ಎಲ್ಲೆಡೆ ಪ್ರಸರಿಸುತ್ತಿದ್ದಾರೆ ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಪ್ರಭಾಕರ್ ಕುಂಜಾರ್ ಇವರಿಗೆ ಸ್ವರಸಿಂಚನ ಸವಿತಾ ಕೋಡಂದೂರ್ ಮತ್ತು ರಘುರಾಮ ಶಾಸ್ತ್ರಿ ಕೋಡಂದೂರ್, ಸಿಂಚನ ಲಕ್ಷ್ಮಿ ಕೋಡಂದೂರ್ ರವರು ಪೇಟ ತೋಡಿಸಿ ಶಾಲು ಹಾರ ಸ್ಮರಣಿಕೆ ಸನ್ಮಾನ ಪತ್ರಗಳನ್ನು ಸ್ವರ ಸಿಂಚನ ಪುರಸ್ಕಾರ ನೀಡಿ ಗೌರವಿಸಿದರು. ಇವರ ಸನ್ಮಾನ ಪತ್ರವನ್ನು ಕು.ಆದರ್ಷಿಣಿ ಯವರು ವಾಚಿಸಿದರು ನಿವೃತ್ತ ಮುಖ್ಯೋಪಾಧ್ಯಾಯರು ವಿಠಲ ಪದವಿಪೂರ್ವ ಕಾಲೇಜ್ ಬಾಲಿಕಾ ಪ್ರೌಢಶಾಲೆಯ ಕೃಷ್ಣ ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು ಸಾಧನೆ ಮತ್ತು ತಾಳ್ಮೆ ಇದ್ದರೆ ಏನನ್ನು ಸಾಧಿಸಬಹುದು ಎಂದು ಸಂದರ್ಭದಲ್ಲಿ ಹಿತನುಡಿದರು.

ವ್ಯವಸ್ಥಾಪಕರಾದ ಕೇಶವ್ ಆರ್ ವಿ, ಮೃದಂಗ ವಾದಕರದ ವಿಆರ್ ನಾರಾಯಣ ಪ್ರಕಾಶ್ ಕ್ಯಾಲಿಕಟ್ ಹಾಗೂ ಮ್ಯಾoಡೋಲಿನ್ ವಾದಕರಾದ ವಿದ್ವಾನ್ ಪ್ರಸನ್ನ ಬಲ್ಲಾಳ್ ಬೆಂಗಳೂರು ,ಉಬರ್ ರಾಜಗೋಪಾಲ್, ಗೋಪಾಲಕೃಷ್ಣ ನಾಯಕ್ ಪಡಿಬಾಗಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಮೊದಲು ಶಾಸ್ತ್ರೀಯ ಸುಗಮ ಸಂಗೀತ ವಿದ್ವಾನ್ ಪ್ರಸನ್ನ ಬಳ್ಳಾಲ್ ರವರಿಂದ ಕಚೇರಿಗಳು ದಿನಪೂರ್ತಿ ಬೆಳಗ್ಗೆಯಿಂದ ರಾತ್ರಿ ತನಕ ಸಂಗೀತದ ಹಬ್ಬವಾಗಿ ರಸ ನೀಡಿ ಪೋಷಕರು ಪ್ರೇಕ್ಷಕರನ್ನು ವಿಶೇಷ ರೀತಿಯಲ್ಲಿ ಜನರ ಮನಸ್ಸಿಗೆ ಖುಷಿ ನೀಡಲು ಯಶಸ್ವಿಯಾಯಿತು. ಸಮಾರಂಭದಲ್ಲಿ ಕಿಕ್ಕೀರಿದು ಸೇರಿದ ಕಲಾ ಪ್ರೇಮಿಗಳು ಗ್ರಾಮೀಣ ಕಲಾವಿದೆಯಿಂದ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳ ವಸ್ತ್ರ ವಿನ್ಯಾಸ ಅದ್ಬುತ ಕಲಾವಿದರ ತಾಳಮೇಳಗಳ ಕೂಡುವಿಕೆಯಲ್ಲಿ ಸಂಗೀತ ಶಿಕ್ಷಕಿ ಎಲ್ಲರ ಪ್ರಸಂಶೆಗೆ ಪಾತ್ರರಾಗಿದ್ದಾರೆ. ತಬಲ ವಾದಕರಾಗಿ ಸುಮನ್ ದೇವಾಡಿಗ ಪುತ್ತೂರು,ರಿದಂ ಪ್ಯಾಡ್ ನಲ್ಲಿ ಸುಹಾಸ್ ಹೆಬ್ಬಾರ್ ಪುತ್ತೂರು ಕಿ ಬೋರ್ಡ್ ನಲ್ಲಿ ಅಮ್ಮೂ ಮಾಸ್ಟರ್ ಕಾಸರಗೋಡು ಸಹಕರಿಸಿದರು. ಪದ್ಮರಾಜ್ ಚಾರ್ವಾಕ ಇವರು ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.