ಡೈನಾಮಿಕ್ಸ್ ಸಂಸ್ಥೆಯು ಎಂಬ್ರೇರ್ ಸಹಯೋಗದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ವಿಮಾನ ವಿನ್ಯಾಸ ಮತ್ತು ವಿಮಾನಯಾನ ಸ್ಪರ್ಧೆಯಲ್ಲಿ ಮಂಗಳೂರು ಅಮೃತ ವಿದ್ಯಾಲಯಂನ ಗ್ರೇಡ್ 10ರ ವಿದ್ಯಾರ್ಥಿಯಾದ ವೈಭವ್ ಪ್ರಭು ಅವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ವಿವಿಧ ಪ್ರದೇಶಗಳಿಂದ ಭಾಗವಹಿಸಿದ್ದ ಸ್ಪರ್ಧಾರ್ಥಿಗಳ ನಡುವೆ, ವೈಭವ್ ಅವರ ಸಾಧನೆ ವಿಮಾನ ವಿನ್ಯಾಸ ತತ್ವಗಳು,
ಇದೇ ಬರುವ ಆದಿತ್ಯವಾರ ಫೆಬ್ರವರಿ 5ರಂದು ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂನ ಆವರಣದಲ್ಲಿ ಸಾರ್ವಜನಿಕ ಮಕ್ಕಳಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಬೆಳಿಗ್ಗೆ 8.30ರಿಂದ ಅಪರಾಹ್ನ 1.30ರ ವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಡಾ. ಚಾಂದಿನಿ ವಿಕ್ರಂ ಶೆಟ್ಟಿ ಎಚ್ ಒ ಡಿ, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್,ಇವರಿಂದ ದಂತ ನೈರ್ಮಲ್ಯದ ಬಗ್ಗೆ ಉಪನ್ಯಾಸ ಮಾಡಲಿದ್ಧಾರೆ. ಸಾರ್ವಜನಿಕರು ಇದರ ಉಪಯೋಗವನ್ನು ಪಡೆಯ ಬೇಕಾಗಿ ವಿನಂತಿ.
ಮಂಗಳೂರು ನಗರದ ಅಮೃತ ವಿದ್ಯಾಲಯದಲ್ಲಿ ಜನವರಿ 8 ರಂದು ಜರುಗಿದ ವಿವಿಧ ವೈಶಿಷ್ಟ್ಯತೆಗಳ “ಅಮೃತ ಆರೋಗ್ಯ ಮೇಳ” ಅತ್ಯಂತ ಯಶಸ್ವಿಯಾಗಿ ನೆರವೇರಿತು. ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾನ್ಸರ್ ತಪಾಸಣೆ ಮಾಡುವ ಆಧುನಿಕ ಉಪಕರಣ ಸಹಿತ ವಾಹನದಲ್ಲಿ Mammography ಹಾಗೂ Pap test ಸೌಲಭ್ಯಗಳನ್ನು ಉಚಿತವಾಗಿ ನೀಡಲಾಯಿತು. ಅಲ್ಲದೆ ಆಯುಷ್ಮಾನ್ ಭಾರತ್ ಕಾರ್ಡ್, ಕಣ್ಣಿನ ತಪಾಸಣೆ, ದಂತರೋಗ ಚಿಕಿತ್ಸೆ, ಸಾಮಾನ್ಯ ಆರೋಗ್ಯ ತಪಾಸಣೆ, ಮಕ್ಕಳ




















