ರೆಮಲ್ ಚಂಡಮಾರುತವು ಪಡುವಣ ಬಂಗಾಳದಲ್ಲಿ ಹದಿನಾರಕ್ಕೂ ಹೆಚ್ಚು ಮತ್ತು ಬಾಂಗ್ಲಾದೇಶದಲ್ಲಿ ಹದಿನೆಂಟಕ್ಕೂ ಹೆಚ್ಚು ಜನರ ಪ್ರಾಣ ಹರಣ ಮಾಡಿದೆ. ಇದೇ ವೇಳೆ ಅಮೆರಿಕ ಸಂಯುಕ್ತ ಸಂಸ್ಥಾನದ ಬಯಲು ಪ್ರದೇಶದಲ್ಲಿ ದಿಗಿಣ ಹಾಕಿದ ಸುಳಿಗಾಳಿಯು ನಾಲ್ಕು ಮಕ್ಕಳ ಸಹಿತ ಹದಿನೆಂಟಕ್ಕೂ ಹೆಚ್ಚು ಮಂದಿಯ ಜೀವವನ್ನು ಹೀರಿದೆ. ರೆಮಲ್ ಚಂಡ ಸುಂಟರ ಕುಣಿತಕ್ಕೆ ಮರಗಳುರುಳಿ, ಕಟ್ಟಡಗಳು
ಕರ್ನಾಟಕದಲ್ಲಿ 49,000 ಅಪ್ರಾಪ್ತ ಗರ್ಭಿಣಿಯರು ಇದ್ದಾರೆ. ಇದು ಬಿಗಡಾಯಿಸಿರುವ ಸಮಸ್ಯೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಹೇಳಿದ್ದಾರೆ. ಕಲ್ಯಾಣ ಕರ್ನಾಟಕವೆಂಬೊ ಮಾಜೀ ಹೈದರಾಬಾದ್ ಕರ್ನಾಟಕ ಮತ್ತು ಗೌಡರ ಮಂಡ್ಯ ಜಿಲ್ಲೆಯಲ್ಲಿ ಬಾಲ ಬಸುರಿಯರ ಸಂಖ್ಯೆ ಅಗಣಿತ ಎಂದೂ ಅವರು ಹೇಳಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಮರು ಸಮೀಕ್ಷೆ ನಡೆಸುವ ಕಜ್ಜದಲ್ಲಿ ಅವರು ಈಡುಗೊಂಡಿದ್ದಾರೆ. ಬಾಲ ಬಸುರಿಯರು