ಮಗು ಮದುವೆ, ಬಾಲ್ಯ ವಿವಾಹ ಭಾರತ ಮತ್ತು ಕರ್ನಾಟಕದ ಒಂದು ಅಂಟು ಜಾಡ್ಯವಾಗಿ ಬಲಿತು ಕುಳಿತಿದೆ.ಲಗ್ನದ ವಯಸ್ಸನ್ನು 21ಕ್ಕೆ ಏರಿಸಿದರೂ ಸಮಸ್ಯೆ ಪರಿಹಾರ ಆಗಿಲ್ಲ. ಮದುವೆಯ ವಯಸ್ಸು 21 ಎಂದಾಗ ಹೆಣ್ಣು ಉನ್ನತ ಓದು ಮುಗಿಸಿರುವುದು ಸಾಧ್ಯ. 18 ಎಂದರೆ ಕಲಿಕೆ ಕಡೆ ಇಲ್ಲವೇ ಸಂಸಾರ ತೂಗಿಸಿಕೊಂಡು ಓದಬೇಕು. 21ಕ್ಕೆ ಹೆಣ್ಣು ಕೆಲಸಕ್ಕೆ ಸೇರಿರುವುದೂ ಸಾಧ್ಯ. ಇದು
ಕರ್ನಾಟಕದಲ್ಲಿ 49,000 ಅಪ್ರಾಪ್ತ ಗರ್ಭಿಣಿಯರು ಇದ್ದಾರೆ. ಇದು ಬಿಗಡಾಯಿಸಿರುವ ಸಮಸ್ಯೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಹೇಳಿದ್ದಾರೆ. ಕಲ್ಯಾಣ ಕರ್ನಾಟಕವೆಂಬೊ ಮಾಜೀ ಹೈದರಾಬಾದ್ ಕರ್ನಾಟಕ ಮತ್ತು ಗೌಡರ ಮಂಡ್ಯ ಜಿಲ್ಲೆಯಲ್ಲಿ ಬಾಲ ಬಸುರಿಯರ ಸಂಖ್ಯೆ ಅಗಣಿತ ಎಂದೂ ಅವರು ಹೇಳಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಮರು ಸಮೀಕ್ಷೆ ನಡೆಸುವ ಕಜ್ಜದಲ್ಲಿ ಅವರು ಈಡುಗೊಂಡಿದ್ದಾರೆ. ಬಾಲ ಬಸುರಿಯರು