ಮೇ 8ರಂದು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರ ಅಣ್ಣಾಮಲೈ ರೋಡ್ ಶೋ

ಬೈಂದೂರು: ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಕೆ. ಅಣ್ಣಾಮಲೈ ಅವರು ಮೇ 8ರಂದು ಬೈಂದೂರು ಕ್ಷೇತ್ರದ ವಿವಿಧಡೆಯಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಪರವಾಗಿ ರೋಡ್ ಶೋ ನಡೆಸಿ ಮತ ಯಾಚಿಸಲಿದ್ದಾರೆ.

ಬೆಂಳಗ್ಗೆ 8.30ಕ್ಕೆ ತ್ರಾಸಿಯಿಂದ ರೋಡ್ ಶೋ ಆರಂಭಗೊಂಡು, ಮರವಂತೆ, ನಾವುಂದ, ಅರಹೊಳೆ ಬೈಪಾಸ್ ನಾಗೂರು, ಕಂಬದಕೋಣೆ, ನಾಯ್ಕನಕಟ್ಟೆ, ಉಪ್ಪುಂದ, ಬಿಜೂರ್, ಯಡ್ತರೆ, ಅನಂತರ ಬೈಂದೂರು ತಲುಪಲಿದೆ.
ಅಣ್ಣಾಮಲೈ ಅವರು ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲವು ವರ್ಷ ಸೇವೆ ಸಲ್ಲಿಸಿ, ದಕ್ಷತೆಯ ಮೂಲಕ ಹೆಸರು ಗಳಿಸಿದರು. ಆನಂತರ ಬಿಜೆಪಿ ಸೇರಿದ ಅವರು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮೇ 8ರಂದು ಬೈಂದೂರು ಕ್ಷೇತ್ರಕ್ಕೆ ಬಂದು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಪರವಾಗಿ ಮತಯಾಚನೆ ಮಾಡುತ್ತಿರುವುದು ವಿಶೇಷ. ಅವರು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳಲ್ಲಿ ಇನ್ನಷ್ಟು ಹುಮ್ಮಸ್ಸು ತುಂಬಲಿದ್ದಾರೆ.