ಹೆಬ್ರಿ,ಅ,14: ಮಾಜಿ ಶಾಸಕ ದಿ.ಗೋಪಾಲ ಭಂಡಾರಿಯವರ ಪುತ್ರ ಸುದೀಪ್ ಭಂಡಾರಿ (48) ಬ್ರಹ್ಮಾವರ ಸಮೀಪದ ಬಾರ್ಕೂರು ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಸುದೀಪ್ ಭಂಡಾರಿಯವರು ಜೀವನ ನಿರ್ವಹಣೆಗೆ ಹೆಬ್ರಿಯಲ್ಲಿ ವೈನ್ಸ್ ಶಾಪ್ ನಡೆಸಿಕೊಂಡಿದ್ದರು.
ಹೆಬ್ರಿ: ಕಬ್ಬಿನಾಲೆ ಹೊನ್ನ ಕೊಪ್ಪಲ ಎಂಬಲ್ಲಿ ಪ್ರಗತಿಪರ ಕೃಷಿಕ ಜ್ಞಾನೇಶ್ವರ ಹೆಬ್ಟಾರ್(62) ಅವರು ಮರದಿಂದ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಅವರು ಮರದ ಗೆಲ್ಲು ಕಡಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕೃಷಿ ಕೆಲಸಕ್ಕೆ ಹೋದ ತನ್ನ ಪತಿ ಮನೆಗೆ ಊಟಕ್ಕೆ ಬಾರದಿರುವುದನ್ನು ಗಮನಿಸಿದ ಪತ್ನಿ ಹಾಗೂ ಮಗಳು ಹುಡುಕುತ್ತಾ ಹೋದಾಗ ಮರದಡಿ ಬಿದ್ದಿದ್ದರು.ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಎಸ್ ಡಿಎಂಸಿ ಅಧ್ಯಕ್ಷರಾಗಿ, ಕಬ್ಬಿನಾಲೆ
ಹೆಬ್ರಿ : ಮುದ್ರಾಡಿ ರಾಂಬೆಟ್ಟು ನಿವಾಸಿ ದಿ.ಉಪೇಂದ್ರ ಆಚಾರ್ಯ ಅವರ ಪತ್ನಿ ಕುಸುಮಾ ಆಚಾರ್ಯ ಎಂಬವರು ಶುಕ್ರವಾರ ಬೇಸಾಯದ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕುಸುಮಾ ಆಚಾರ್ಯ ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯಕ್ರಮ ಮತ್ತು ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರು ಹೆಬ್ರಿ ವಿಶ್ವಕರ್ಮ ಮಹಿಳಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದರು. ಮೃತರು
ಉಡುಪಿ : ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಹಾಸನ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅವರು ನಾಲ್ಕೂರು ಕಜ್ಕೆಯ ಶಾಖಾ ಮಠದಲ್ಲಿ ಜುಲೈ 3ರಿಂದ ಸೆಪ್ಟಂಬರ್ 29ರ ತನಕ 41ನೇ ಚಾತುರ್ಮಾಸ್ಯ ವೃತಾನುಷ್ಠಾನದ ಅಂಗವಾಗಿ ಪುರಪ್ರವೇಶ ಕಾರ್ಯಕ್ರಮ ನಡೆಯಿತು. ಹೆಬ್ರಿ ಶ್ರೀ ವಿಶ್ವಕರ್ಮ ಸಮುದಾಯ ಭವನದಿಂದ ಹೊರಟು ಸಂತೆಕಟ್ಟೆ, ಕೆಂಜೂರು ಮೂಲಕ ಪುರಪ್ರವೇಶ ಮಾಡಿದರು. ಮಹಿಳಾ ಸಂಘದವರಿಂದ
ಹೆಬ್ರಿ ತಾಲೂಕಿನ ಮುನಿಯಾಲ್ ಮುದ್ರಾಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಯಲ್ಲೇ ವಿದ್ಯಾಬ್ಯಾಸ ಮುಂದುವರಿಸಿರುವ ವಿಶೇಷ ಚೇತನ ಮಕ್ಕಳ ಮನೆಗಳಿಗೆ ಕಾರ್ಕಳದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಹಾಗೂ ಸತ್ಯವಾನ್ ಸಾವಿತ್ರಿ ಟ್ರಸ್ಟ್ ಅಧ್ಯಕ್ಷೆ ಡಾ. ಮಮತಾ ಹೆಗ್ಡೆ ಅವರು ಭೇಟಿ ನೀಡಿದರು.ವಿಶೇಷ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಮಮತಾ ಹೆಗ್ಡೆ ಅವರು ಮಕ್ಕಳ ಪೋಷಕ ರೊಂದಿಗೆ ಸಮಾಲೋಚನೆ ನಡೆಸಿದರು .ನೆಕ್ರೆಯಲ್ಲಿ ನಡೆದ ನಾಗಮಂಡಲ ಪೂಜೆಯಲ್ಲಿ ಭಾಗವಹಿಸಿದ ಮಮತಾ ಹೆಗ್ಡೆ
ಡೀಮ್ಸ್ ಫಾರೇಸ್ಟ್ ಸಮಸ್ಯೆಯನ್ನು ಪರಿಹರಿಸಿ ಹಕ್ಕು ಪತ್ರವನ್ನು ವಿತರಿಸಿದ್ದೇವೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದರು. ಆದರೆ ಇತ್ತೀಚಿನ ವರದಿ ಪ್ರಕಾರ ಸುಪ್ರೀಂ ಕೋರ್ಟಿನ ಹಸಿರು ನ್ಯಾಯ ಪೀಠದ ತೀರ್ಪೆ ಅಂತಿಮ. ಸರಕಾರ ಸಲ್ಲಿಸಿರುವ ಅಫಿದಾವಿತ್ ತಿರಸ್ಕರಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸುಪ್ರೀಂ ಕೋರ್ಟ್‍ನಲ್ಲಿ ಸಮಸ್ಯೆ ಇತ್ಯರ್ಥವಾಗದೆ ಇರುವಾಗ ಹಕ್ಕು ಪತ್ರ ನೀಡುವುದು ಎಷ್ಟು ಸರಿ? ಎಂದು ಕಾರ್ಕಳದಲ್ಲಿ ಕಾಂಗ್ರೆಸ್ ಮುಖಂಡರು
ಕಾರ್ಕಳ: ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಚಂದ್ರ ಗ್ರಹಣದ ಭಾಗಶಃ ಗೋಚರವಾಯಿತು . ಚಂದ್ರಗ್ರಹಣ ಮೋಕ್ಷಕಾಲದ ಬಳಿಕ ಕಾರ್ಕಳದ ಪ್ರಮುಖ ದೇವಾಲಯಗಳಲ್ಲಿಗರ್ಭಗುಡಿ ಸ್ವಚ್ಚ ಗೊಳಿಸಿ ಪೂಜಾ ವಿಧಿವಿಧಾನಗಳು ನಡೆದವು. ಕಾರ್ಕಳ ತಾಲೂಕಿನ ಪ್ರಸಿದ್ದ ವೆಂಕಟರಮಣ ದೇವಾಲಯ , ಅನಂತ ಶಯನ ದೇವಾಲಯ, ಮುಖ್ಯಪ್ರಾಣ ದೇವಾಲಯ, ಹಿರ್ಗಾನ ಮಹಾಲಕ್ಷ್ಮಿ ದೇವಸ್ಥಾನ , ಹೆಬ್ರಿಯ ಅನಂತ ಪದ್ಮನಾಭ ದೇವಾಲಯ , ಅಜೆಕಾರು ವಿಷ್ಣುಮೂರ್ತಿ ದೇವಾಲಯಗಳಲ್ಲಿ ಸ್ವಚ್ಚತಾ ಕಾರ್ಯಗಳು ನಡೆದು ದೇವರಿಗೆ