Home Posts tagged #hejamadi (Page 2)

ಹೆಜಮಾಡಿ : ಗುದ್ದಲಿ ಪೂಜೆ ನಡೆದು ಏಳು ತಿಂಗಳಾದರೂ ದುರಸ್ಥಿಯಾಗದ ರಸ್ತೆ

ಹೆಜಮಾಡಿ ಗುಂಡಿ ರಸ್ತೆ ದುರಸ್ತಿಗಾಗಿ ಕಳೆದ ಏಳು ತಿಂಗಳ ಹಿಂದೆ ಶಾಸಕರು ಗುದ್ದಲಿ ಪೂಜೆ ನಡೆಸಿದ್ದರಾದರೂ, ಈ ವರೆಗೂ ದುರಸ್ತಿ ಕಾಣದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವ ಎಚ್ಚರಿಕೆ ನೀಡಿದ್ದಾರೆ. ಗ್ರಾಮಸ್ಥ ಯೋಗೀಶ್ ಶೆಣೈ ಮಾತನಾಡಿ, ನಮ್ಮ ಬಲು ಬೇಡಿಕೆಯ ಗುಂಡಿ ರಸ್ತೆ ದುರಸ್ತಿಗಾಗಿ ಅದೆಷ್ಟೋ ಮನವಿಗಳ ಬಳಿಕ ಕಳೆದ ಏಳು

ಬೀಟ್ ಪೊಲೀಸ್ ಸಭೆ : ಅನೈತಿಕ ಚಟುವಟಿಕೆಗಳ ತಾಣ ಹೆಜಮಾಡಿ ಬಂದರು

ಹೆಜಮಾಡಿಯ ಮೀನುಗಾರಿಕಾ ಬಂದರು ಪ್ರದೇಶ ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಈ ಬಗ್ಗೆ ಪಡುಬಿದ್ರಿ ಪೆÇಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಸದಸ್ಯರು ಸಹಿತ ಗ್ರಾಮಸ್ಥರು ಹೆಜಮಾಡಿ ಬಂದರು ಪೊಲೀಸರಲ್ಲಿ ಆಗ್ರಹಿಸಿದ್ದಾರೆ. ಹೆಜಮಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಬೀಟ್ ಪೊಲೀಸ್ ಸಭೆಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯರೊರ್ವರು, ಶನಿವಾರ ಹಾಗೂ ಭಾನುವಾರ ಅತೀ ಹೆಚ್ಚು ಮಣಿಪಾಲ ಕಡೆಯಿಂದ ಜೋಡಿಗಳು ಬರುತ್ತಿದ್ದು , ಅವರಿಂದ ಈ ಪ್ರದೇಶಕ್ಕೆ

ಹೆಜಮಾಡಿ ಕರಾವಳಿ ಕಾವಲು ಠಾಣೆ : ಸ್ವಾತಂತ್ರೋತ್ಸವದ ಅಂಗವಾಗಿ ವಿದ್ಯಾರ್ಥಿ ವೇತನ ವಿತರಣೆ

ಹೆಜಮಾಡಿ ಕೋಡಿಯಲ್ಲಿ ಕಾರ್ಯಚರಿಸುತ್ತಿರುವ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಘಟಕದ ಮಾನ್ಯ ಎಸ್ಪಿ ಅಬ್ದುಲ್ ಅಹದ್ ಐಪಿಎಸ್ ರವರ ನಿರ್ದೇಶನದಂತೆ 75ನೇ ಸ್ವಾತಂತ್ರ್ಯ ದಿನ ಆಚರಣೆಯ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರನ್ನು ಗುರುತಿಸಿ ಅಭಿನಂದಿಸಲಾಯಿತು. ಹೆಜಮಾಡಿ ಕರಾವಳಿ ಕಾವಲು ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಮಂಜಪ್ಪ ಡಿ. ಆರ್, ಧ್ವಜಾರೋಹಣ ನಡೆಸಿ ಮಾತನಾಡಿ, ನಮ್ಮ ಕರಾವಳಿ ಕಾವಲು ಪೊಲೀಸ್ ಠಾಣಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ, ಎಸ್ಪಿಯವರ

ಚಾಲಕನ ನಿಯಂತ್ರಣ ತಪ್ಪಿದ ಬಸ್ : ಹೆಜಮಾಡಿಯ ರಾ.ಹೆ 66ರಲ್ಲಿ ಘಟನೆ

ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಮರಿಗೆ ಬಿದ್ದ ಘಟನೆ ಸಂಭವಿಸಿದೆ.ಖಾಸಗಿ ವೇಗದೂತ ಬಸ್ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಸಾವು ನೋವು ಸಂಭವಿಸಿಲ್ಲ.ಹೆಜಮಾಡಿ ಟೋಲ್ ಸುರಕ್ಷತಾ ಅಧಿಕಾರಿ ಶೈಲೇಶ್ ಶೆಟ್ಟಿ, ಟೋಲ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ

ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಟೋಲ್ ಗೇಟ್ ಸಿಬ್ಬಂದಿಗಳ ಮುಷ್ಕರ

ಸಿಬ್ಬಂದಿಗಳಿಗೆ ಸಂಬಳ ನೀಡದೆ ಸತ್ತಾಯಿಸುತ್ತಿದ್ದ “ಟಿಬಿಆರ್” ಕಂಪನಿಯ ವಿರುದ್ಧ ಸಮರ ಸಾರಿರುವ ಸುಮಾರು ತೊಂಭತ್ತು ಮಂದಿ ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರನಡೆಸುತ್ತಿದ್ದಾರೆ. ಮುಂಜಾನೆ ಎಂಟು ಗಂಟೆಗೆ ಮುಷ್ಕರ ಆರಂಭಿಸಿದ ಸಿಬ್ಬಂದಿಗಳ ಮನವೊಲಿಸಲು ಅಧಿಕಾರಿಗಳು ವಿವಿಧ ಬಗೆಯಲ್ಲಿ ಪ್ರಯತ್ನ ನಡೆಸಿದರೂ ಪ್ರಯತ್ನ ವಿಫಲಗೊಂಡಿದೆ. ಈ ಬಗ್ಗೆ ಸಿಬ್ಬಂದಿಗಳ ಪರವಾಗಿ ಮಾತನಾಡಿದ ಲೀಲಾಧರ್, ತಿಂಗಳ ಹತ್ತು ತಾರೀಕಿನ

ಬೀಚ್ ಫ್ರೆಂಡ್ಸ್ ಹೆಜಮಾಡಿ ವತಿಯಿಂದ ಮಕ್ಕಳ ದಿನಾಚರಣೆ

ಬೀಚ್ ಫ್ರೆಂಡ್ಸ್ (ರಿ) ಹೆಜಮಾಡಿ ಇದರ ವತಿಯಿಂದ ಮಕ್ಕಳ ದಿನಾಚರೆಣೆಯ ಅಂಗವಾಗಿ ಚಿಣ್ಣರ ಕಲರವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಪುಟಾಣಿ ಮಕ್ಕಳು ಅತಿಥಿಗಳ ಸಮ್ಮುಖದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಮುಖ್ಯೋಪಧ್ಯಾಯರಾದ ಸಂಜೀವ ಟಿ ಹಾಗೂ ನಿವೃತ್ತ ಅಧ್ಯಾಪಕಿ ಮಾಲತಿ ಟೀಚರ್ ಹಾಗೂ ಪಾಂಡುರಂಗ ಕರ್ಕೇರಾ, ಲೀಲೇಶ್ ಸುವರ್ಣ, ದಿನೇಶ್ ಕೋಟಿಯನ್ ಆಚೆಮಟ್ಟು ಮುಂಬೈ ,ಲೋಕನಾಥ ಗುರಿಕಾರ, ಜಗದೀಶ್ ಕೋಟ್ಯಾನ್ ಇವರು

ಬೀಚ್ ಫ್ರೆಂಡ್ಸ್ ಹೆಜಮಾಡಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಬೀಚ್ ಫ್ರೆಂಡ್ಸ್,(ರಿ) ಹೆಜಮಾಡಿ ಇದರ ವತಿಯಿಂದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರು ಶಾಸ್ತ್ರೀ ಯವರ ಜನ್ಮದಿನಾಚರಣೆಯ ಅಂಗವಾಗಿ ಸಂಸ್ಥೆಯ ಅಧ್ಯಕ್ಷ ಶ್ರೀ ಅಮಿತ್ ಕುಮಾರ್ ನೇತ್ರತ್ವದಲ್ಲಿ ಸ್ವಚ್ಚ ಭಾರತ ಅಭಿಯಾನ ನಡೆಯಿತು. ಸರ್ವಸದಸ್ಯರು ಶ್ರೀ ಶನೀಶ್ವರ ಮಂಡಳಿ ಪರಿಸರ ಮತ್ತು ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಹೆಜಮಾಡಿಯಲ್ಲಿ ಸಮುದ್ರದ ಅಲೆಗೆ ಸಿಲುಕಿ ಮೀನುಗಾರ ಮೃತ್ಯು

ಹೆಜಮಾಡಿಯ ನದಿ ಹಾಗೂ ಸಮುದ್ರ ಒಂದಾಗುವ ಅಳುವೆ ಬಾಗಿಲಿಗೆ ಮೀನುಗಾರಿಕೆಗೆ ತೆರಳಿದ ಮೀನುಗಾರರೋರ್ವರು ಸಮುದ್ರದ ಬೃಹತ್ ಅಲೆಯ ದಾಳಿಗೆ ತುತ್ತಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಮೃತರು ಹೆಜಮಾಡಿ ಕೋಡಿ ಮಾನಂಪಾಡಿ ನಿವಾಸಿ ಜಯಂತ್ (51).ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಹೊಂದಿದ್ದ ಇವರು ಮುಂಜಾನೆ ತೀರ ಮೀನುಗಾರಿಕೆ ನಡೆಸುವುದಕ್ಕಾಗಿ ಅಳವೆ ಪ್ರದೇಶಕ್ಕೆ ತೆರಳಿದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು,

ಹೆಜಮಾಡಿಯಲ್ಲಿ ಆಕ್ಸಿಜನ್ ಗಾಳಿಗೆ ಬಿಡಲಾಯಿತೇ..!: ವೀಡಿಯೋ ವೈರಲ್

ಆಂಧ್ರಪ್ರದೇಶ ನೋಂದಾಯಿತ ಸಂಖ್ಯೆಯ ಟ್ಯಾಂಕರೊಂದರಲ್ಲಿದ್ದ ಆಕ್ಸಿಜನನ್ನು ಹೆಜಮಾಡಿ ಬಳಿ ಗಾಳಿಗೆ ಬಿಡುತ್ತಿದ್ದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಜಮಾಡಿಯ ಡಾಬದ ಬಳಿ ಲಾರಿಗಡ್ಡವಾಗಿ ನಿಂತು ಆಕ್ಸಿಜನ್ ತುಂಬಿತ್ತು ಎನ್ನಲಾದ ಟ್ಯಾಂಕರ್‌ನಿಂದ ಅದರ ನಿರ್ವಾಹಕ, ಚಾಲಕರೇ ಆಕ್ಸಿಜನ್ ಗಾಳಿಗೆ ಬಿಟ್ಟಿದ್ದು ಇದನ್ನು ಕಂಡ ಸ್ಥಳೀಯ ಬಾಲಕರು ಮೊಬೈಲ್ ಮೂಲಕ ಚಿತ್ರೀಕರಣ ಮಾಡಿದಾಗ ಅವರನ್ನು ಮಾಡದಂತೆ ಗದರಿಸಿದ್ದಾರೆ ಎನ್ನಲಾಗಿದೆ. ವಾಹನದ ಸಂಪೂರ್ಣ ಮಾಹಿತಿಯೂ