ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟರು. ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ಹೈದರಾಬಾದ್ ಆಟಗಾರ್ತಿ ಸಿಂಧು ಅವರು ಜಪಾನ್ ನ 4ನೇ ಶ್ರೇಯಾಂಕದ ಆಟಗಾರ್ತಿ ಅಕಾನೆ ಯಮಗುಚಿಯವರನ್ನು 21-13 ಹಾಗೂ 22-20 ನೇರ ಸೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿದರು.
ನರಗುಂದ ನವಲಗುಂದ ರೈತ ಬಂಡಾಯದ 41 ನೇ ವರ್ಷಾಚರಣೆ ಹಾಗೂ ರೈತ ಹುತಾತ್ಮರ ದಿನಾಚಣೆ ಹಾಗೂ ರೈತ ಸಮಾವೇಶ ಗದಗ ಜಿಲ್ಲೆಯ ನರಗುಂದದಲ್ಲಿ ನಡೆಯಿತು. ಇಲ್ಲಿನ ರೈತ ಸಂಪರ್ಕ ಕೇಂದ್ರದ ಸಮೀಪ , ರೈತ ನಾಯಕ ದಿವಂಗತ ಬಾಬಾ ಗೌಡ ಪಾಟೀಲ್ ವೇದಿಕೆಯಲ್ಲಿ ಸಮಾವೇಶ ನಡೆಯಿತು. ಸಮಾವೇಶಕ್ಕಿಂತ ಮೊದಲು ಹುತಾತ್ಮ ರೈತ ಹೋರಾಟಗಾರರ ಪ್ರತಿಮೆಗೆ ರೈತ ಮುಖಂಡರು ಗೌರವ ಸಲ್ಲಿಸಿದರು. ಬಳಿಕ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ರೈತ ಸಮಾವೇಶ ನಡೆಯಿತು. ಸಮಾವೇಶದಲ್ಲಿ ದಿಲ್ಲಿ ರೈತ ಹೋರಾಟದ
ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು,ಜನರಲ್ಲಿ ದೇಶಪ್ರೇಮದ ಉನ್ಮಾದವನ್ನು ಸ್ರಷ್ಠಿಸಿ, ದೇಶದ ಅಮೂಲ್ಯ ಸಂಪತ್ತುಗಳನ್ನು ಕಾರ್ಪೋರೇಟ್ ಕಂಪೆನಿಗಳ ಕೈಗೊಪ್ಪಿಸಿದ ನರೇಂದ್ರ ಮೋದಿ ಸರಕಾರ ನಿಜಕ್ಕೂ ದೇಶದ್ರೋಹಿಯಾಗಿದೆ.ಇಂತಹ ಸರಕಾರ ಮುಂದುವರಿದಲ್ಲಿ ಭವ್ಯಭಾರತದ ಮೂಲಗುಣಗಳಾದ ಜಾತ್ಯಾತೀತತೆ,ಸೌಹಾರ್ದತೆ ಸಂಪೂರ್ಣ ನಾಶವಾಗಲಿದೆ. ಆದ್ದರಿಂದ ದೇಶವನ್ನು ರಕ್ಷಿಸುವ ಹೊಣೆ ದುಡಿಯುವ ವರ್ಗದ ಮೇಲಿದೆ.ಅವರಿಗೆ ಬೆಂಗಾವಲಾಗಿ ದೇಶದ ಯುವಜನತೆ ನಿಲ್ಲಬೇಕಾಗಿದೆ* ಎಂದು DYFI