Home Posts tagged kadaba (Page 2)

ಕಡಬ: ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ನಾಳೆ(ಮೇ17) ಶೈಕ್ಷಣಿಕ ಮಾರ್ಗದರ್ಶನ ಮತ್ತು ಮಾಹಿತಿ ಕಾರ್ಯಗಾರ

ಕಡಬ: ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಎಲ್ಲಾ ಸಮುದಾಯದ ಪ್ರಸ್ತುತ ಸಾಲಿನ ಪ್ರೌಢ ಶಿಕ್ಷಣದಲ್ಲಿ 9 ನೇ ತರಗತಿ, 10 ನೇ ತರಗತಿ ಮತ್ತು 10 ನೇ ತರಗತಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಹಾಗೂ ದ್ವಿತೀಯ ಪಿ.ಯು.ಸಿ ಮತ್ತು ದ್ವಿತೀಯ ಪಿ.ಯು.ಸಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮೇ.17 ರಂದು ಮುಂದಿನ ಶಿಕ್ಷಣ ಮತ್ತು ಉದ್ಯೋಗವಕಾಶಗಳು, ಉದ್ಯಮಶೀಲತೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆ

ಸುಬ್ರಹ್ಮಣ್ಯ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆಯಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರ ನೇಮಕ ಮಾಡಿ ಸರಕಾರ ಆದೇಶ ಮಾಡಿತ್ತು. ಇಂದು ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಭಾರೀ ನಾಟಕೀಯ ತಿರುವು ಪಡೆದು ಹರೀಶ್ ಇಂಜಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷತೆಗೆ ಮಹೇಶ್ ಕುಮಾರ್ ಕರಿಕ್ಕಳ ಅವರನ್ನು ಕಾಂಗ್ರೆಸ್ ಜಿಲ್ಲಾ

ಕಡಬ:ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

ತೆಂಗಿನಕಾಯಿ ಕೀಳಲು ತೆಂಗಿನ ಮರಕ್ಕೆ ಹತ್ತಿದ್ದ ವ್ಯಕ್ತಿಯೊಬ್ಬರು ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ.ಮೃತಪಟ್ಟವರನ್ನು ಕಡಬ ತಾಲೂಕು ಬಲ್ಯ ಗ್ರಾಮದ ಪಲ್ಲತಡ್ಕ ನಿವಾಸಿ ದಿ|ಐತ್ತಪ್ಪ ಪೂಜಾರಿ ಅವರ ಪುತ್ರ ಉಮೇಶ್ (46) ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯ ತೋಟದಲ್ಲಿ ತೆಂಗಿನ ಮರಕ್ಕೆ ಹತ್ತಿದ್ದರು. ಕೆಳಕ್ಕೆ ಬಿದ್ದು ಗಂಭೀರಗಾಯ ಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ

ಸುಬ್ರಹ್ಮಣ್ಯ : ಚಲನಚಿತ್ರ ನಟ ಪ್ರಭುದೇವ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ

ಚಲನಚಿತ್ರರಂಗದ ಖ್ಯಾತ ನಟ ಪ್ರಭುದೇವ ಕುಟುಂಬ ಸಮೇತ ಇಂದು ಶನಿವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಳದಲ್ಲಿ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡರು. ಪ್ರಭುದೇವ್ ಪತ್ನಿ ಹಾಗೂ ಕುಟುಂಬ ವರ್ಗದವರು ಮಹಾಭಿಷೇಕ ಪೂಜೆಯನ್ನು ನೆರವೇರಿಸಿ ಶ್ರೀ ದೇವರ ಮುಖ್ಯ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು. ತದನಂತರ ದೇವಳದ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಪ್ರಭುದೇವ ದಂಪತಿ ಯವರನ್ನು ಶಾಲು ಹೊಂದಿಸಿ

ಸುಬ್ರಹ್ಮಣ್ಯ : ಕೆ.ಎಸ್.ಎಸ್. ಕಾಲೇಜಿನಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ,ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ,ಕೆ ಎಸ್ ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ,ರೋವರ್ಸ್ ಅಂಡ್ ರೆಂಜರ್ಸ್ ಘಟಕ ,ಯೂತ್ ರೆಡ್ ಕ್ರಾಸ್ ಘಟಕ , ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಆಂತರಿಕ ಗುಣಮಟ್ಟ ಕೋಶ ಗಳ ಜಂಟಿ ಆಶಯದಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು. ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ನ

ಸುಬ್ರಹ್ಮಣ್ಯ: ಕನ್ನಡ ಚಿತ್ರನಟ ದೇವರಾಜ್ ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ಭೇಟಿ

ಸುಬ್ರಹ್ಮಣ್ಯ : ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ದೇವರಾಜ್ ,ಅವರ ಸುಪುತ್ರ ಪ್ರಜ್ವಲ್ ದೇವರಾಜ್ , ಹಾಗೂ ಕುಟುಂಬಸ್ಥರು ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಅವರನ್ನು ಶ್ರೀ ದೇವಳದ ಸಿಷ್ಟಾಚಾರ ಅಧಿಕಾರಿ ಜಯರಾಮ್ ರಾವ್ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯದ ರಾಜಕೀಯ ಮುಖಂಡರಾದ ಗೋಪಾಲ

ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೈನ್ಸ್ ಕ್ಲಬ್ ವತಿಯಿಂದ ವಿಜ್ಞಾನ ಮಾದರಿ ಪ್ರದರ್ಶನ

ಕಡಬ :ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸೈನ್ಸ್ ಕ್ಲಬ್ ವತಿಯಿಂದ ವಿಜ್ಞಾನ ಮಾದರಿ ಪ್ರದರ್ಶನವನ್ನು (Science Model) ಏರ್ಪಡಿಸಲಾಗಿತ್ತು.ಕುಮಾರಸ್ವಾಮಿ ಪಿ ಯು ಕಾಲೇಜ್, ಸುಬ್ರಮ್ಮಣ್ಯ ಇದರ ಪ್ರಾಂಶುಪಾಲರಾದ ಡಾ l ಸಂಕೀರ್ತ್ ಹೆಬ್ಬಾರ್ ಇವರು ವಿದ್ಯಾರ್ಥಿಗಳಿಗೆ ಪ್ರಸ್ತುತ ಜಗತ್ತಿನಲ್ಲಿ ವಿಜ್ಞಾನದ ಮಹತ್ವವನ್ನು ತಿಳಿಸುವುದರೊಂದಿಗೆ ವಿಜ್ಞಾನದ ಕುರಿತು ಸಂವಾದ ಕಾರ್ಯಕ್ರಮವನ್ನು

ಸುಬ್ರಹ್ಮಣ್ಯ: ಕುಕ್ಕೆ ದೇವಳಕ್ಕೆ ತಮಿಳು ಚಿತ್ರ ನಿರ್ದೇಶಕ ಅತ್ಲೇ ಭೇಟಿ, ಅನ್ನದಾನಕ್ಕೆ ದೇಣಿಗೆ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮಿಳುನಾಡಿನ ಖ್ಯಾತ ಚಿತ್ರ ನಿರ್ದೇಶಕ ಅತ್ಲೇ ಅವರು ಕುಟುಂಬ ಸಮೇತ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ತದನಂತರ ಶ್ರೀ ದೇವಳದ ಕಚೇರಿಯಲ್ಲಿ ಭಕ್ತಾದಿಗಳ ಅನ್ನದಾನಕ್ಕಾಗಿ ರೂಪಾಯಿ 10 ಲಕ್ಷದ ಬ್ಯಾಂಕ್ ಚೆಕ್ ಅನ್ನು ಕಾರ್ಯನಿರ್ವಹಣಾಧಿಕಾರಿಯವರಿಗೆ ನೀಡಿರುವರು. ಈ ಸಂದರ್ಭದಲ್ಲಿ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಅತ್ಲೇ ಅವರನ್ನು ಶಾಲು ಹೊಂದಿಸಿ ಸ್ಮರಣೆಗೆ

ಕಡಬ : ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್ ಪ್ರೌಢ ಶಾಲೆಗೆ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ 100 % ಫಲಿತಾಂಶ

ಕಡಬ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ನಡೆಸುವ ಹೈಯರ್ ಗ್ರೇಡ್ ಮತ್ತು ಲೋಯರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್ ಪ್ರೌಢಶಾಲೆಗೆ ಶೇಕಡ 100 ಫಲಿತಾಂಶ ಬಂದಿರುತ್ತದೆ. ಹೈಯರ್ ಗ್ರೇಡ್ ವಿಭಾಗದಲ್ಲಿ ಸೈಂಟ್ ಆನ್ಸ್ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅಂಜನಾ ಜೇಮ್ಸ್ 491 ಅಂಕ ಪಡೆದು ಕಡಬ ತಾಲೂಕಿಗೆ ಪ್ರಥಮ, ಲವ್ಯಶ್ರೀ 475 ಅಂಕ ಪಡೆದು ತಾಲೂಕಿಗೆ ದ್ವಿತೀಯ, ಶಿವಾನಿ ಡಿ ಎ 463

ಕಡಬ: ಮನೆಗೆ ನುಗ್ಗಿ ಕಳವು ಪ್ರಕರಣ: ಆರೋಪಿಯ ಬಂಧನ

ಕಡಬ ಠಾಣಾ ವ್ಯಾಪ್ತಿಯ ಮರ್ದಾಳ ಸಮೀಪದ ಮನೆಯೊಂದರಿಂದ ಹಾಡಹಗಲೇ ಬಾಗಿಲು ಮುರಿದು ಒಳ‌ ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿರುವ ಕಳ್ಳನನ್ನು ಪೋಲೀಸರು ಗುರುವಾರ ಕರ್ಮಾಯಿ ನಿವಾಸಿ ಸಿನು ಕುರಿಯನ್ ಎಂಬಾತನನ್ನು ಬಂಧಿಸಿದ್ದಾರೆ.ಕ್ಷಿಪ್ರ ಕಾರ್ಯಾಚನೆ ನಡೆಸಿರುವ ಕಡಬ ಪೊಲೀಸರು ಐದೇ ದಿನದಲ್ಲಿ ಕಳ್ಳನನ್ನು ಪತ್ತೆ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಠಾಣಾ ವ್ಯಾಪ್ತಿಯ 102 ನೆಕ್ಕಿಲಾಡಿ ಗ್ರಾಮದ ಕೆರ್ಮಯಿ ಚರ್ಚ್ ಸಮೀಪದ, ಅಟೋ ಚಾಲಕ ಕುರಿಯಕೋಸ್ ಯಾನೆ ಜೇಮ್ಸ್ ಅವರು