Home Posts tagged #Karavali (Page 25)

ಕರಾವಳಿಯಲ್ಲಿ ಈದುಲ್ ಫಿತ್ರ್ ಹಬ್ಬದ ಸಂಭ್ರಮ

ಕರಾವಳಿಯಲ್ಲಿ ಇಂದು ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು. ನಗರದ ಪ್ರಮುಖ ಮಸೀದಿಗಳಿಗೆ ತೆರಳಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಸಂಭ್ರಮವನ್ನು ವಿನಿಮಯಮಾಡಿಕೊಂಡರು. ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ

ಬಾಲವನ ಪ್ರಶಸ್ತಿ 2022ಕ್ಕೆ ಹಿರಿಯ ರಂಗಕರ್ಮಿ ಅಕ್ಷರ ಕೆ.ವಿ.ಆಯ್ಕೆ

ಪುತ್ತೂರು: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ| ಶಿವರಾಮ ಕಾರಂತ ಬಾಲವನ, ಪರ್ಲಡ್ಕ, ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಇದರ ವತಿಯಿಂದ ಪ್ರತಿ ವರ್ಷ ಕೊಡಮಾಡುವ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ:-2022ಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಹೆಗ್ಗೋಡಿನ ಹಿರಿಯ ರಂಗ ನಿರ್ದೇಶಕರಾದ ಅಕ್ಷರ ಕೆ.ವಿ. ಆಯ್ಕೆಯಾಗಿದ್ದಾರೆ ಎಂದು ಬಾಲವನ ಪ್ರಶಸ್ತಿ 2022ರ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮತ್ತೂರು ವಿಧಾನಸಭಾ

ಜೈನ ಮನೆತನದ ವಾರಸುದಾರ ರಾಹುಲ್ ಬಲ್ಲಾಳ್ ನಿಧನ

ತುಳುನಾಡಿನ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಜೈನ ಮನೆತನದ ವಾರಸುದಾರ, ಮೂಡುಬಿದಿರೆಯ ಬಲ್ಲಾಳ್ ಕುಟುಂಬದ ರಾಹುಲ್ ಬಲ್ಲಾಳ್ (51) ಅವರು ಇಂದು ನಿಧನರಾಗಿದ್ದಾರೆ. ತುಳುನಾಡಿನ ಭವ್ಯ ಪರಂಪರೆ, ಪರೋಪಕಾರಿಗಳು ಆಗಿರುವಂತಹ ಶ್ರೀಮಂತ ಜೈನ ಮನೆತನದ ವಾರಸುದಾರರಾದ ಕೃಷಿಕರೂ, ಉದ್ಯಮಿ ಜಯವರ್ಮರಾಜ್ ಬಲ್ಲಾಳ್ ಅವರ ಸುಪುತ್ರರಾಗಿದ್ದ ರಾಹುಲ್ ಬಲ್ಲಾಳ್ ಕಾನೂನು ಪಧವೀಧರರು. ತನ್ನ ಕುಟುಂಬದ ಕೃಷಿ ಹಾಗೂ ಹೋಟೇಲ್ ಉದ್ಯಮವನ್ನು ಮುನ್ನಡೆಸಲು ರಾಹುಲ್ ಅವರು

ಕರಾವಳಿಯಲ್ಲಿ ಮತ್ತೆ ವರುಣನ ಆರ್ಭಟ : ತಾತ್ಕಲಿಕ ನೆರೆಯಿಂದ ಜನರ ಪರದಾಟ

ಕರಾವಳಿಯಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದ್ದು ನದಿ, ತೊರೆಗಳು ತುಂಬಿ ಹರಿಯತೊಡಗಿದೆ. ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ‌ ಸ್ಥಿತಿ ಎದುರಾಗಿದೆ. ಮುಂಜಾಗ್ರತೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಶಾಲೆ, ಕಾಲೇಜಿಗೆ ರಜೆ ಸಾರಲಾಗಿದೆ. ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ನಿರಂತರ ಮಳೆಯಾಗಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಪ್ರವಾಹ ಸ್ಥಿತಿ

ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಂಪನ್ನ

ತುಳುನಾಡಿನ ಐತಿಹಾಸಿಕ ಹಿನ್ನೆಲೆಯಿರುವ 26 ನೇ ವರ್ಷದ ಸುಪ್ರಸಿದ್ಧ ಶಿರ್ವ ನಡಿಬೆಟ್ಟು ಸೂರ್ಯ – ಚಂದ್ರ ಜೋಡುಕರೆ ಕಂಬಳವು ಭಾನುವಾರ ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನೆರವೇರಿತು.ಶಿರ್ವ ನಡಿಬೆಟ್ಟು ಸೂರ್ಯ – ಚಂದ್ರ ಜೋಡುಕರೆ ಸಾಂಪ್ರದಾಯಿಕ ಕಂಬಳೊತ್ಸವವನ್ನು ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎಲ್ಲೂರು ಗುತ್ತು ಪ್ರಫುಲ್ಲ ಶೆಟ್ಟಿಯವರು ಉದ್ಘಾಟಿಸಿದರು. ಬೆಳಿಗ್ಗೆ ಸಾಂಪ್ರದಾಯಿಕವಾಗಿ ನಡೆದ ಬಂಟ ಕೋಲದ ಬಳಿಕ

ಪಚ್ಚನಾಡಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಪೂರ್ಣ ಹಿನ್ನೆಲೆ ಶಾಸಕ ಡಾ. ಭರತ್ ಶೆಟ್ಟಿ ಭೇಟಿ, ಪರಿಶೀಲನೆ

ಪಚ್ಚನಾಡಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಹಾಗೂ ಬೊಂದೇಲ್ – ಮಂಗಳ ಜ್ಯೋತಿ ಸಂಪರ್ಕಿಸುವ ಪಚ್ಚನಾಡಿ ಮುಖ್ಯ ರಸ್ತೆ, ಎರಡೂ ಬದಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ವೇಗ ಪಡೆದು ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಲೋಕಾರ್ಪಣೆಗೊಳಿಸುವ ಮುನ್ನ ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರ ಸೂಚನೆ ಮೇರೆಗೆ ಪರಿಶೀಲನೆ ನಡೆಸಲು ಪಚ್ಚನಾಡಿ ರೈಲ್ವೇ ಬ್ರಿಡ್ಜ್ ಕಾಮಗಾರಿ ಪ್ರದೇಶಕ್ಕೆ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈರವರು ಭೇಟಿ ನೀಡಿದರು.   ಇವರಿಗೆ

ನ.21ರಿಂದ ಜ.7ರ ತನಕ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ರಂಗಪೂಜೆ

ಪುತ್ತೂರು ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರ ಕಾರ್ಪಾಡಿ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 21 ರಂದು ಆರಂಭಗೊಂಡು ಜನವರಿ 7 ರ ತನಕ ನಿರಂತರ 48  ದಿನಗಳ ಕಾಲ (ಒಂದು ಮಂಡಲ) ಸಂಜೆ ವಿಶೇಷ ರಂಗಪೂಜೆ ನಡೆಯಲಿದೆ. ಮೂರನೇ ವರ್ಷದಲ್ಲಿ ನಡೆಯುತ್ತಿರುವ ಈ ವಿಶೇಷ ರಂಗಪೂಜೆಯು ಕಾರ್ಪಾಡಿ, ಶ್ರೀ. ಸುಬ್ರಹ್ಮಣ್ಯ ಕ್ಷೇತ್ರದ ವಿಶೇಷತೆಗಳಲ್ಲಿ ಒಂದು. ನಿರಂತರ 48 ದಿನಗಳ ಕಾಲ ನಡೆಯುವ ರಂಗಪೂಜೆಯಲ್ಲಿ ಪ್ರತೀದಿನ 12 ಕುಟುಂಬಗಳಿಗೆ ಸೇವೆ ಮಾಡಿಸಲು ಅವಕಾಶವಿದೆ.

ರೆ. ಜಾರ್ಜ್ ಎ. ಬೆರ್ನಾಡ್ ಮೆಮೋರಿಯಲ್ ಗಾರ್ಡ್‌ನ್ ಲೋಕಾರ್ಪಣೆ

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ವಿದೇಶಿ ಮಿಷನರಿಗಳು ಸಲ್ಲಿಸಿದ ಸೇವೆಗಳು ಸ್ಮರಣೀಯ. ಇದಕ್ಕೆ ಪೂರಕವಾಗಿ ದೇಶೀಯ ಸಭಾ ಪಾಲಕರುಗಳು ಸಭಾ ಪ್ರಾಂತ್ಯದ ಅಭಿವೃದ್ಧಿಗಾಗಿ ಸಭಾ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇಂಥವರಲ್ಲಿ ರೆ. ಜಾರ್ಜ್ ಎ. ಬೆರ್ನಾಡ್ ಕೂಡ ಒಬ್ಬರು. ಇಂಥವರನ್ನು ಸ್ಮರಿಸಿ ಇವರ ಹೆಸರಿನಲ್ಲಿ ಕರ್ನಾಟಕ ಥಿಯಲಾಜಿಕಲ್ ಕಾಲೇಜಿನ ಮುಖಾಂತರ ಗಾರ್ಡನ್ ಒಂದನ್ನು ನಿರ್ಮಾಣ ಮಾಡಿರುವುದು ಅಭಿನಂದನೀಯ ಎಂದು ಚರ್ಚ್ ಆಫ್ ಸೌತ್ ಇಂಡಿಯಾ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಯಿನಾಥ್ ಶೇಟ್ ದೈವಜ್ಞ ಬ್ರಾಹ್ಮಣ ಸಮಾಜ ಕುಂದಾಪುರ ವತಿಯಿಂದ ಸನ್ಮಾನ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಯಿನಾಥ ಶೇಟ್ ಅವರನ್ನು ದೈವಜ್ಞ ಬ್ರಾಹ್ಮಣ ಸಮಾಜ ಕುಂದಾಪುರ ವತಿಯಿಂದ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಸ್ವಾತಿ ಜಿ ಶೇಟ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾತ್ವಿಕ್ ಕೋಟೇಶ್ವರ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜ್ಯುವೆಲ್ ಅಸೋಸಿಯೇಷನ್ ಕುಂದಾಪುರ ಇದರ ಅಧ್ಯಕ್ಷರಾದ ಸತೀಶ್ ಶೇಟ್ ನಾಡ, ಅನುಗ್ರಹ

ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಸತಾಯಿಸಬಾರದು ಲೋಕಾಯುಕ್ತ ಉಪ ಅಧೀಕ್ಷಕ ಚೆಲುವರಾಜು ಹೇಳಿಕೆ

ಕಡಬ: ಸಾರ್ವಜನಿಕರಿಗೆ ನಿಷ್ಪಕ್ಷಪಾತ ಸೇವೆ ನೀಡುವುದೇ ಅಧಿಕಾರಿಗಳ ಕೆಲಸ, ಯಾವುದೇ ಕಾರಣಕ್ಕೆ ಸಾರ್ವಜನಿಕರನ್ನು ಸತಾಯಿಸಬಾರದು ಎಂದು ಕರ್ನಾಟಕ ಲೋಕಾಯುಕ್ತ ಪೋಲಿಸ್‌ನ ದ.ಕ. ಜಿಲ್ಲಾ ಉಪ ಅಧೀಕ್ಷಕ ಚೆಲುವರಾಜು ಅವರು ಹೇಳಿದರು ಅವರು ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಲೋಕಾಯುಕ್ತ ಪೋಲಿಸರಿಂದ ನಡೆದ ಅರಿವು ಜಾಗೃತಿ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕಾರಿಗಳು ಮತ್ತು ಸಾರ್ವಜನಿಕರು ಭ್ರಷ್ಟಚಾರ ರಹಿತ ಕೆಲಸ ಮಾಡಬೇಕು, ಲಂಚ