Home Posts tagged #kinnigoli (Page 2)

ಲೋಕಕಲ್ಯಾಣಾರ್ಥವಾಗಿ ನಡೆಯುವ ಶ್ರೀ ಸಹಸ್ರ ನರಸಿಂಹಯಾಗದ ಪ್ರಯುಕ್ತವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಮುಲ್ಕಿ: ಕಿನ್ನಿಗೋಳಿಯ ಮಹಾಮಾಯಿ ಕಟ್ಟೆಯ ಬಳಿಯ ಶ್ರೀ ಶಾರದ ಮಂಟಪದಲ್ಲಿ ಜರಗುತ್ತಿರುವ ಅತಿ ವಿಶಿಷ್ಟ ಶ್ರೀ ಸಹಸ್ರ ನೃಸಿಂಹಯಾಗ ಸಮಿತಿ ವತಿಯಿಂದ ಆಯೋಜಿಸಿದ್ದ ಲೋಕಕಲ್ಯಾಣಾರ್ಥವಾಗಿ ನಡೆಯುವ ಶ್ರೀ ಸಹಸ್ರ ನೃಸಿಂಹಯಾಗ ಯಾಗದ ಪ್ರಯುಕ್ತ ಬುಧವಾರ ಪ್ರಾತಃಕಾಲ 5 ಗಂಟೆಗೆ ಗುರು ಗಣಪತಿ ಪೂಜನ,ಆವಾಹಿತ ದೇವತಾ ಪೂಜನ, ಬೆಳಿಗ್ಗೆ 7 ಗಂಟೆಗೆ ಸಹಸ್ರ ನೃಸಿಂಹ ಹವನ,11.30

ಕಂಬಳ ಕ್ರೀಡೆಯನ್ನು ರಾಜ್ಯದ ಪ್ರಮುಖ ಕ್ರೀಡೆಯಾನ್ನಾಗಿಸಲು ಜಿಲ್ಲಾಡಳಿತ ಸಿದ್ಧ : ಜಿಲ್ಲಾಧಿಕಾರಿ ರವಿಕುಮಾರ್ ಎಂ

ಜಿಲ್ಲೆಯ ರೈತಾಪಿ ಜನರ ಜನಪದ ಕಂಬಳ ಕ್ರೀಡೆಗೆ ಸರಕಾರದ ಸಂಪೂರ್ಣ ಸಹಕಾರವಿದ್ದು, ಕ್ರೀಡೆಯನ್ನು ಸರಕಾರದ ವತಿಯಿಂದ ನಡೆಸಲಾಗುತ್ತಿದ್ದು, ಕಂಬಳ ಕ್ರೀಡೆಯನ್ನು ರಾಜ್ಯದ ಪ್ರಮುಖ ಕ್ರೀಡೆಯನ್ನಾಗಿಸಲು ಜಿಲ್ಲಾಡಳಿತ ಸದಾ ಸಿದ್ಧ. ಶ್ರೀಘದಲ್ಲಿಯೇ ಕಂಬಳೋತ್ಸವಕ್ಕೆ ಸರಕಾರದಿಂದ 2ಕೋಟಿ ಅನುದಾನ ನಿಗಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಹೇಳಿದರು. ಅವರು ಇತಿಹಾಸ ಪ್ರಸಿದ್ದ ಐಕಳಬಾವ ಕಾಂತಾಬಾರೆ ಬೂದಬಾರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ

ಫೆಬ್ರವರಿ 6 ರಿಂದ 11ರವರೆಗೆ ಶ್ರೀ ಸಹಸ್ರ ನೃಸಿಂಹ ಯಾಗ

ಫೆಬ್ರವರಿ 6 ರಿಂದ 11ರವರೆಗೆ ಶ್ರೀ ಸಹಸ್ರ ನೃಸಿಂಹ ಯಾಗ ನಡೆಯಲಿದೆ ಎಂದು ಯಾಗಾಧ್ಯಕ್ಷ ಸುಬ್ರಹ್ಮಣ್ಯ ಶೆಣೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಯಾಗದ ಕಾರ್ಯಾಧ್ಯಕ್ಷ ದೇವಿ ಪ್ರಸಾದ್‌ ಶೆಟ್ಟಿ ಕೊಡೆತ್ತೂರು ಮಾತನಾಡಿ ವೇ.ಮೂ.ಸುಧೀರ್‌ ಭಟ್‌. ನೇತೃತ್ವದಲ್ಲಿ ವೇ.ಮೂ. ಕಾಶಿನಾಥ ಆಚಾರ್ಯ ಮಾರ್ಗದರ್ಶನದಲ್ಲಿ 50 ಮಂದಿ ಖುತ್ವಿಜರಿಂದ ಬೃಹತ್‌ ಕುಂಡದಲ್ಲಿ ಶ್ರೀ ಸಹಸ್ರ ನೃಸಿಂಹ ಯಾಗ ನಡೆಯಲಿದೆ. ದಿನಂಪ್ರತಿ 5000ದಷ್ಟು ಮಂದಿ ಅನ್ನ ಪ್ರಸಾದ ಸ್ವೀಕರಿಸಲಿದ್ದು

ಕಿನ್ನಿಗೋಳಿ : ಶಾಲಾ ಬಾಲಕನಿಗೆ ಬಸ್ ಢಿಕ್ಕಿ, ಬಾಲಕ ಸ್ಥಳದಲ್ಲೇ ಮೃತ್ಯು

ಶಾಲಾ ಬಾಲಕನಿಗೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಧಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಕಟೀಲು ಹೆದ್ದಾರಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಚರಣ್ (15) ಗುರುತಿಸಲಾಗಿದೆ. ಚರಣ್ ಕಟೀಲು ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿರುವಾಗ ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಚರಣ್ ಸ್ಧಳದಲ್ಲಿಯೇ ಮೃತ ಪಟ್ಟಿದ್ದಾನೆ ಎನ್ನಲಾಗಿದೆ. ಸ್ಧಳಕ್ಕೆ

ಕಿನ್ನಿಗೋಳಿ – ಹಳೆಯಂಗಡಿ ನಡುವೆ ಬಸ್ ಟಿಕೆಟ್ ದರ 2 ರೂ ಇಳಿಕೆ

ಸುರತ್ಕಲ್ ಟೋಲ್ ಗೇಟ್ ತೆರವಾಗಿರುವ ಹಿನ್ನಲೆಯಲ್ಲಿ ಕಿನ್ನಿಗೋಳಿ ಹಳೆಯಂಗಡಿ ನಡುವೆ ಸಂಚರಿಸುವ ಎಲ್ಲಾ ಬಸ್ಗಳ ಟಿಕೆಟ್ ದರದಲ್ಲಿ ಡಿ.20 ರಿಂದ 2ರೂ ಕಡಿತ ಮಾಡಲಾಗುವುದು, ಕಿನ್ನಿಗೋಳಿಯಿಂದ ಮುಕ್ಕ ತನಕ ಹಿಂದಿನ ದರವೇ ಇರಲಿದೆ ಎಂದು ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ತಿಳಿಸಿದ್ದಾರೆ

ಕಿನ್ನಿಗೋಳಿ ಬಳ್ಕುಂಜೆಯಲ್ಲಿ ಕೊರಗರ ಭೂಮಿ ಹಬ್ಬ

ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ವತಿಯಿಂದ ಕೊರಗರ ಭೂಮಿ ಹಬ್ಬ ’ನಮ್ಮ ಭೂಮಿ ನಮ್ಮ ಹಕ್ಕು’ ಕಾರ್ಯಕ್ರಮ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಕೊರಗರ ಬಲೆಪುವಿನಲ್ಲಿ ಗುರುವಾರ ನಡೆಯಿತು.ಬಳ್ಕುಂಜೆ ತಾಲ್ಯಾನ್ ಮನೆತನ ಗುರಿಕಾರರಾದ ಜಬ್ಬ ಕೊರಗ ಅವರು ಹಬ್ಬದ ಜ್ಯೋತಿ ಬೆಳಗಿಸಿ ಧ್ವಜಾರೋಹಣ ನೆವೇರಿಸಿದರು. ಕೊರಗ ಸಮುದಾಯದ ಹಿರಿಯ ಮಹಿಳೆ ಕಾಳಿ ಅವರು ಹಬ್ಬದ ಸಿಹಿಜೇನು ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ

ಕಿನ್ನಿಗೋಳಿ : ರಾಷ್ಟ್ರೀಯ ಕೈಮಗ್ಗ ಸಪ್ತಾಹ : ಹಿರಿಯ ನೇಕಾರರಿಗೆ ಪ್ರಶಸ್ತಿ ,ಖಾದಿ, ಕೈಮಗ್ಗ ಬಳಸಿ : ರಾಜ್ಯಸಭಾ ಸದಸ್ಯ ಅನಿಲ್ ಪ್ರಸಾದ್ ಹೆಗ್ಡೆ ಮನವಿ

ಕೈಮಗ್ಗದ ಸೀರೆಗಳನ್ನು ಹಾಗೂ ಖಾದಿ ವಸ್ತ್ರಗಳನ್ನು ಧರಿಸಲು ಜನತೆ ಹೆಚ್ಚಿನ ಒಲವು ತೋರಿಸಬೇಕು, ಈ ರೀತಿ ಮಾಡಿದರೆ ಮಾತ್ರ ಖಾದಿ ಮತ್ತು ಕೈಮಗ್ಗವನ್ನು ಉಳಿಸಲು ಸಾಧ್ಯ , ಈ ನಿಟ್ಟಿನಲ್ಲಿ ಉಡುಪಿ ಸೀರೆಯನ್ನು ಜನಪ್ರಿಯತೆಗೊಳಿಸಿದ ಕದಿಕೆ ಟ್ರಸ್ಟ್‍ನ ಕೆಲಸ ಶ್ಲಾಘನೀಯವಾದುದು ಎಂದು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾದ ಕನ್ನಡಿಗ ರಾಜ್ಯಸಭಾ ಸದಸ್ಯ ಅನಿಲ್ ಪ್ರಸಾದ್ ಹೆಗ್ಡೆ ಅವರು ಹೇಳಿದರು.ಮಂಗಳೂರು ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸಂಘದಲ್ಲಿ ಕದಿಕೆ