ಮಂಗಳೂರು: ಪ್ರವಾಸಿಗರನ್ನು ಆಕರ್ಷಿಸುತ್ತಿರುವ ವಾಮಂಜೂರಿನ ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್

ಬೇಸಿಗೆ ಸಮಯವನ್ನು ಕಳೆಯಲು ಪ್ರವಾಸ ಕೈಗೊಳ್ಳುವವರಿಗೆ ಸಿಹಿಸುದ್ದಿ..ಮಂಗಳೂರಿನ ವಾಮಂಜೂರಿನಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಬೇಸಿಗೆ ಸಮಯವನ್ನು ಕಳೆಯಲು ಸುಸಜ್ಜಿತ ರೀತಿಯಲ್ಲಿದ್ದು ವಿವಿಧ ಮನೋರಂಜನಾ ವಾಟರ್ ಗೇಮ್ಸ್ ಸೇರಿದಂತೆ ಕುದುರೆ ಸವಾರಿ, ಜಿಪ್ ಲೈನ್ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತಿದೆ ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್. ಈ ಬಗ್ಗೆ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ…..

ಮಂಗಳೂರಿನ ವಾಮಂಜೂರಿನ ಪಿಲಿಕುಳದ ಬಳಿಯಿರುವ ಮಾನಸ ಅಮ್ಯೂಸ್‌ಮೆಂಟ್ ಮತ್ತು ವಾಟರ್ ಪಾರ್ಕ್, ದಕ್ಷಿಣ ಕರ್ನಾಟಕದಲ್ಲಿಯೇ ಅತೀ ದೊಡ್ಡದು ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದು, ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಮಾನಸದಲ್ಲಿ ವಾಟರ್ ಗೇಮ್ಸ್‌ಗಳ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಪಾರ್ಟಿ ಹಾಲ್‌ನ ಸೌಲಭ್ಯವೂ ಇದೆ.
ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್‌ನಲ್ಲಿ ವಿವಿಧ ಮಾದರಿಯ ಜಲಕ್ರೀಡೆಗಳ ಜೊತೆಗೆ ಅತ್ಯಾಧುನಿಕ ಸೌಲಭ್ಯಗಳ ಆಟಗಳನ್ನು ಆಡಲು ಸದಾವಕಾಶವಿದೆ. ಫ್ಯಾಮಿಲಿ ಪೂಲ್, ವಾಟರ್ ರೈಡ್, ಡ್ರಾಗನ್ ಫಾಲ್ಸ್, ಅತೀ ದೊಡ್ಡ ವೇವ್ ಪೂಲ್, ಗೈರೋ, ಜಿಪ್ ಲೈನ್ ಜೊತೆಗೆ ತಮ್ಮ ಕನಸಿನ ಮದುವೆಯನ್ನು ಮಾನಸದಲ್ಲಿ ನನಸಾಗಿಸಬಹುದು..

ಬೇಸಿಗೆ ರಜೆ ಆರಂಭವಾಗಿದ್ದು, ಮಕ್ಕಳಿಗೆ ರಜೆಯ ಮಜಾ ಕಳೆಯಲು ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್ ನಿಮಗಾಗಿ ಕಾಯುತ್ತಿದೆ. ಮಾತ್ರವಲ್ಲದೇ ವೀಕೆಂಡ್‌ಗಳಲ್ಲೂ ಮೋಜು ಮಸ್ತಿಗೆ ವಿಶೇಷ ಅವಕಾಶವಿದೆ..ಮನೋರಂಜನೆಯ ಜೊತೆಗೆ ಉತ್ತಮ ಆಹಾರವನ್ನು ಸವಿಯಬಹುದಾಗಿದೆ. ಇಂದೇ ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್‌ಗೆ ಭೇಟಿ ನೀಡಿ, ಇಡೀ ದಿನ ಮನೋರಂಜನೆಯಲ್ಲಿ ಪಾಲ್ಗೊಳ್ಳಿ.

Related Posts

Leave a Reply

Your email address will not be published.