ಕಾಂಗ್ರೆಸ್ ನ ಹಿರಿಯ ಮುಖಂಡ ಡಿ. ಸಂಜೀವ ಗಟ್ಟಿ ನಿಧನ

ಕೊಣಾಜೆ: ಕಾಂಗ್ರೆಸ್ ನ ಹಿರಿಯ ಮುಖಂಡ, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಕೈರಂಗಳ ಗ್ರಾಮದ ಧರ್ಮಕ್ಕಿ ನಿವಾಸಿ ಸಂಜೀವ ಗಟ್ಟಿ (82)ಅಲ್ಪಕಾಲದ ಅಸೌಖ್ಯದಿಂದಮಂಗಳವಾರ ಮಧ್ಯಾಹ್ನ ಕೈರಂಗಳ ಧರ್ಮಕ್ಕಿಯ ಸ್ವಗೃಹದಲ್ಲಿ ನಿಧನರಾದರು.ಕೈರಂಗಳ ಹಾಗೂ ನರಿಂಗಾನ ಗ್ರಾಮದಲ್ಲಿ ಶಾಲೆಗಳ ಮಂಜೂರಾತಿ ಹಾಗೂ ಅಭಿವೃದ್ಧಿಗೆ ಶ್ರಮಿಸಿದ್ದ ಮೃತರುಪಕ್ಷದಲ್ಲಿ ಸುಮಾರು ಐದು ದಶಕಗಳ ಕಾಲ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದುಐದು ಬಾರಿ ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಕೈರಂಗಳ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿಐದು ಬಾರಿ ನಿರ್ದೇಶಕರಾಗಿ, ಎರಡು ಬಾರಿ ಅಧ್ಯಕ್ಷರಾಗಿ, ಬಿ. ಸಿ. ರೋಡ್ ನ ಎಲ್ ಡಿ ಬ್ಯಾಂಕ್ ನ ನಿರ್ದೇಶಕರಾಗಿ, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಆಗಿ, ಕೃಷಿ‌ ಬ್ಯಾಂಕ್ ನಿರ್ದೇಶಕರಾಗಿ, ಡಿಸಿಸಿ ಸದಸ್ಯರಾಗಿ‌ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಕಲಾವಿದರಾಗಿಯೂ ಮಹಿಷ ಮೊದಲಾದ ಪಾತ್ರಗಳಿಗೆ ಬಣ್ಣಹಚ್ಚುವ ಮೂಲಕ ಒಂದಷ್ಟು ವರ್ಷ ಸೇವೆ ಸಲ್ಲಿಸಿದ್ದರು.ಮೃತರಿಗೆ ಇಬ್ಬರು ಪುತ್ರರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಸೇರಿದಂತೆ ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಇದ್ದಾರೆ.

Related Posts

Leave a Reply

Your email address will not be published.