ಕರ್ನಾಟಕ ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕದ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಮತ್ತು ಮುನ್ನೂರಿನಲ್ಲಿರುವ ಶ್ರೀ ಪಂಜದಾಯ ಬಂಟ ವೈಧ್ಯನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಇದೇ ಸಮಯಕ್ಕೆ ಕನ್ನಡದ ಖ್ಯಾತ ನಟ ಶರಣ್ ದಂಪತಿ ಜೊತೆಗಿದ್ದರು. ಈ
ಮೂಲ್ಕಿಯ ಹಳೆಯಂಗಡಿಯ ಬಳಿ ರಕ್ತೇಶ್ವರ ಕೋಲ ಕಟ್ಟುವ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡು ದೈವನರ್ತಕ ಸಾವನ್ನಪ್ಪಿದ ಘಟನೆ ನಡೆದಿದೆ. ದೈವನರ್ತಕ ಪದವಿನಂಗಡಿಯ ನಿವಾಸಿಯಾಗಿದ್ದು, ಅಶೋಕ್ ಬಂಗೇರಾ ಎಂದು ತಿಳಿದುಬಂದಿದೆ. ಪದವಿನಂಗಡಿಯ ಕೊರಗಜ್ಜ ದೈವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾತ್ರವಲ್ಲದೆ ದೈವಾರಾಧನೆಯಲ್ಲಿ ಅದ್ಭುತ ಸೇವೆಯನ್ನು ಮಾಡುತ್ತಾ, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಇದ್ದು ಅನೇಕ ಯುವ ಸಮೂಹಕ್ಕೆ ಮಾದರಿಯಾಗಿದ್ದರು.
ಉಳ್ಳಾಲ: ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಅವರು ಕುತ್ತಾರು ಕೊರಗಜ್ಜ ಕಟ್ಟೆಗೆ ಮಂಗಳವಾರ ಭೇಟಿ ನೀಡಿದರು. ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಕೊರಗಜ್ಜನ ಬಳಿ ಹರಕೆ ಹೊತ್ತ ಹಿನ್ನೆಲೆಯಲ್ಲಿ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ನಟಿ ರಕ್ಷಿತಾ ಪ್ರೇಮ್, ಸದ್ಯ ಝೀ ಕನ್ನಡ ವಾಹಿನಿ ರಿಯಾಲಿಟಿ ಷೋನಲ್ಲಿ ಜಡ್ಜ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಹರಕೆ ಹೊತ್ತಿದ್ದ ರಕ್ಷಿತಾ