ಮಂಗಳೂರು : ಪದವಿನಂಗಡಿ ಕೊರಗಜ್ಜ ದೈವಸ್ಥಾನದ ಪ್ರಧಾನ ಅರ್ಚಕ ನಿಧನ
ಮೂಲ್ಕಿಯ ಹಳೆಯಂಗಡಿಯ ಬಳಿ ರಕ್ತೇಶ್ವರ ಕೋಲ ಕಟ್ಟುವ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡು ದೈವನರ್ತಕ ಸಾವನ್ನಪ್ಪಿದ ಘಟನೆ ನಡೆದಿದೆ.
ದೈವನರ್ತಕ ಪದವಿನಂಗಡಿಯ ನಿವಾಸಿಯಾಗಿದ್ದು, ಅಶೋಕ್ ಬಂಗೇರಾ ಎಂದು ತಿಳಿದುಬಂದಿದೆ. ಪದವಿನಂಗಡಿಯ ಕೊರಗಜ್ಜ ದೈವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾತ್ರವಲ್ಲದೆ ದೈವಾರಾಧನೆಯಲ್ಲಿ ಅದ್ಭುತ ಸೇವೆಯನ್ನು ಮಾಡುತ್ತಾ, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಇದ್ದು ಅನೇಕ ಯುವ ಸಮೂಹಕ್ಕೆ ಮಾದರಿಯಾಗಿದ್ದರು.