Home Posts tagged #kota srinivas poojary (Page 2)

ದ.ಕ. ಜಿಲ್ಲಾಡಳಿತದಿಂದ ಅಶಕ್ತರಿಗೆ ಉಚಿತ ಲಸಿಕೆ: ಸಂಚಾರಿ ಲಸಿಕಾ ವಾಹನಕ್ಕೆ ಚಾಲನೆ

ದ.ಕ. ಜಿಲ್ಲಾಡಳಿತ, ಇಂಡಿಯನ್ ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕ, ರೋಟರಿ ಮಂಗಳೂರು ಹಾಗೂ ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ಆರೋಗ್ಯ ಕಾರ್ಯಕರ್ತರು ವಾಹನದ ಮೂಲಕ ಅಶಕ್ತರಿಗೆ ಲಸಿಕೆ ನೀಡುವ ಸಂಚಾರಿ ಲಸಿಕಾ ಕೇಂದ್ರಕ್ಕೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ

ಎಸ್.ಸಿ.ಡಿ.ಸಿಸಿ ಬ್ಯಾಂಕ್ ವತಿಯಿಂದ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ ಸಮಾರಂಭ ನಗರದ ಕೊಡಿಯಾಲ್ ಬೈಲ್ ನ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಜರುಗಿತು ಮಂಗಳೂರಿನ ಕೊಡಿಯಾಲ್‍ಬೈಲ್‍ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಪತ್ರಕರ್ತರಿಗೆ ಆಹಾರದ ಕಿಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ವಿತರಿಸಿದ್ರು. ಈ ವೇಳೆ ಮಾತನಾಡಿದ ಅವರು,ಕೊರೋನಾ ಸಂಕಷ್ಟದ

ಪುತ್ತೂರಿನಲ್ಲಿ ‘ಭತ್ತ ಬೆಳೆಯೋಣ ಬದುಕು ಕಟ್ಟೋಣ’ ಆಂದೋಲನ

ದಕ್ಷಿಣ ಕನ್ನಡ ಜಿಲ್ಲೆ ಹಿಂದೆ ಪೂರ್ಣ ಪ್ರಮಾಣದಲ್ಲಿ ಭತ್ತದ ಬೇಸಾಯದ ಜಿಲ್ಲೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಬೇಸಾಯವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಶಯದಂತೆ ಮತ್ತೆ ದ.ಕ. ಜಿಲ್ಲೆಯನ್ನು ಬೇಸಾಯ ವೈಭವದ ಜಿಲ್ಲೆ ಮಾಡುವ ಉದ್ದೇಶ ಇಟ್ಟುಕೊಂಡು ಭತ್ತ ಬೆಳೆಯೋಣ.. ಬದುಕು ಕಟ್ಟೋಣ ಎಂಬ ಆಂದೋಲನ ಆರಂಭಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ

ದ.ಕ ಜಿಲ್ಲೆಯಲ್ಲಿ ಜೂ.21ರವರಗೆ ಲಾಕ್‌ಡೌನ್ ಮುಂದುವರಿಕೆ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ದ.ಕ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್ ಮುಂದುವರಿಸಲು ನಿರ್ಧಾರ ಮಾಡಲಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಈ ಕುರಿತು ಮಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ 8 ಜಿಲ್ಲೆಗಳ ಪರಿಸ್ಥಿತಿಯನ್ನು ಅವಲೋಕಿಸುವ ನಿಟ್ಟಿನಲ್ಲಿ ವಿಡಿಯೋ ಕಾನ್ಫರೇನ್ ಮೂಲಕ ಗುರುವಾರ ಸಭೆ ನಡೆಯಿತು. ಈ ಸಭೆಯಲ್ಲಿ ಜಿಲ್ಲೆಗೆ ಹೆಚ್ಚುವರಿ

ದೇಗುಲ ದರ್ಶನಕ್ಕೆ ಸಭೆ ನಡೆಸಿ ತೀರ್ಮಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ದೇವಾಲಯಗಳ ಪ್ರವೇಶಕ್ಕೆ ಒಂದೇ ಸಲ ಅವಕಾಶಗಳನ್ನು ಕೊಟ್ಟರೆ ಜನಜಂಗುಳಿ ಆಗುವ ಸಾಧ್ಯತೆಗಳಿರುವುದರಿಂದ ಸ್ವಲ್ಪ ದಿನಗಳ ಬಳಿಕ ತೆರೆಯಬಹುದಾ ಎಂದು ಸರ್ಕಾರ ಆಲೋಚನೆ ಮಾಡುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ನಮ ಅಹವಾಲುಗಳನ್ನು ಹೇಳಿ ಆದಷ್ಟು ಬೇಗ ಸಾಮಾಜಿಕ ಅಂತರಗಳನ್ನು ಕಾಯ್ದುಕೊಂಡು ದೇವಸ್ಥಾನಗಳನ್ನು ತೆರೆಯಬಹುದಾ ಎಂದು ಚರ್ಚೆ ನಡೆಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ ಎಂದು ರಾಜ್ಯ ಮುಜರಾಯಿ ಸಚಿವ

ತಲ್ಲೂರು ಕೊರೋನಾ ಮುಕ್ತ ಗ್ರಾಮವಾಗಬೇಕು:ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ಮಹಾಮಾರಿ ಕೊರೋನಾ ಹೊಡೆದುರುಳಿಸಲು ಸರ್ಕಾರ ಇಷ್ಟೊಂದು ಪ್ರಮಾಣದಲ್ಲಿ ಗಟ್ಟಿಯಾಗಿ ನಿಂತಿದೆ. ಕಾರ್ಯಪಡೆಯವರು ಮನೆಮನೆಗೆ ಭೇಟಿ ನೀಡಿ, ಸಭೆ ನಡೆಸಿ ಶ್ರಮ ಹಾಕಿದ್ದರಿಂದಾಗಿ ನಿಮ್ಮ ವ್ಯಾಪ್ತಿಯಲ್ಲಿ 80ರಷ್ಟಿದ್ದ ಪಾಸಿಟಿವ್ ಪ್ರಕರಣ ಈಗ 8ಕ್ಕೆ ಬಂದು ತಲುಪಿದೆ. ಈ ಸಂಖ್ಯೆ ಶೂನ್ಯಕ್ಕಿಳಿದು ತಲ್ಲೂರು ಗ್ರಾಮಪಂಚಾಯತ್ ಶೀಘ್ರವೇ ಕೊರೋನಾ ಮುಕ್ತವಾಗಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಇಲ್ಲಿಗೆ ಸಮೀಪದ ತಲ್ಲೂರಿನ ಅಂಬೇಡ್ಕರ್

ಲಸಿಕೆ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ:ಎಲ್ಲವೂ ಪಾರದರ್ಶಕವಾಗಿದೆ: ಸಚಿವ ಕೋಟ ಸ್ಪಷ್ಟನೆ

ಕುಂದಾಪುರ: ಸರ್ಕಾರ ಹೊರಡಿಸಿರುವ ನಿಯಮಗಳ ಪ್ರಕಾರವಾಗಿಯೇ ಲಸಿಕೆ ಹಂಚಿಕೆಯಾಗುತ್ತಿದೆ. ರಾಜಕೀಯ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿರುವಾಗ ಕೆಲವರಿಗೆ ಬಿಜೆಪಿಯವರು ಲಸಿಕೆ ಕೊಡುತ್ತಿದ್ದಾರೆ ಎಂದು ಅನಿಸಿರಬಹುದು. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಲಸಿಕೆ ಹಂಚಿಕೆ ಪಾರದರ್ಶಕವಾಗಿಯೇ ನಡೆಯುತ್ತಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು. ಮಂಗಳವಾರ ತಲ್ಲೂರು ಗ್ರಾ.ಪಂ ನಲ್ಲಿ ನಡೆದ ಕೋವಿಡ್ ಟಾಸ್ಕ್‌ಫೋರ್ಸ್ ಸಭೆಯ