ಬಿಜೆಪಿ ಅಭ್ಯರ್ಥಿ ಪರ ಗೆಲುವಿನ ವಾತಾವರಣ ಇದೆ : ಕಾಪುವಿನಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರ ಪರ ಗೆಲುವಿನ ವಾತಾವರಣ ಇದ್ದು, ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ವಿಶ್ವಾಸ ವ್ಯಕ್ತಪಡಿಸಿದರು.

ಅವರು ಕಾಪುವಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಾರ್ಯಕರ್ತರು ಅತೀ ಉತ್ಸಾಹದಲ್ಲಿದ್ದು, ಸುರೇಶ ಶೆಟ್ಟಿ ಗುರ್ಮೆ ಕಾಪುವಿನಲ್ಲಿ ವಿಜಯಪತಾಕೆ ಹಾರಿಸುವುದು ಖಚಿತವಾಗಿದೆ.ಕಾಪುವಿನ ಶಾಸಕ ಲಾಲಾಜಿ ಮೆಂಡನ್ ರವರು ಮಾಡಿದ ಕೆಲಸವೇ ಶ್ರೀರಕ್ಷೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನಪರ ಕೆಲಸಗಳು ನಮಗೆ ಮತ ಪಡೆಯಲು ಸಹಕಾರಿಯಾಗಿದೆ.

ಈಗಾಗಲೇ 23,000 ಮೀನುಗಾರರ ಮಹಿಳೆಯರ ಸಾಲ ಮನ್ನ ಮಾಡಲಾಗಿದೆ. ಬಿಲ್ಲವ ನಿಗಮ ಸೇರಿದಂತೆ 13 ನಿಗಮಗಳ ರಚನೆ ಮಾಡಲಾಗಿದೆ ಎಂದರು.ತಾಂತ್ರಿಕ ಅಡಚಣೆಯಿಂದ ಕುಚ್ಚಲಕ್ಕಿ ನೀಡುವಲ್ಲಿ ವಿಳಂಬ ಆಗಿದೆ ಎಂದು ಈ ಸಂಧರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿದರು.

ಈ ಸಂದರ್ಭ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಶಾಸಕ ಲಾಲಾಜಿ ಮೆಂಡನ್, ಕಾರ್ಯದರ್ಶಿ ಗೋಪಾಲ್ ರಾವ್, ಕಿರಣ್ ಆಳ್ವಾ, ಸುಲೋಚನಾ ಭಟ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.