Home Posts tagged #mangalore (Page 241)

ಮಂಗಳೂರಿನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ

ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ನಗರದ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಶಾಸಕ ವೇದವ್ಯಾಸ ಕಾಮತ್, ನಗರಾಭಿವೃದ್ದಿ ಪ್ರಾಧಿಕಾದ ಅಧ್ಯಕ್ಷ

ಮಂಗಳೂರಿಗೆ ಪ್ರವಾಸಿಗರ ದಂಡು ಆಗಮನ

ಕೊರೊನಾದ ಮೊದಲ ಮತ್ತು ಎರಡನೇ ಅಲೆಗಳ ಸಮಯದಲ್ಲಿ ಸ್ಥಗಿತಗೊಂಡಿದ್ದ ಪ್ರವಾಸೋದ್ಯಮಕ್ಕೆ ಇದೀಗ ಖಾಸಗಿ ವಿಮಾನಗಳ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ರವಿವಾರದಂದು ಪುಣೆಯಲ್ಲಿರುವ13 ಮಂದಿಯನ್ನು ಹೊಂದಿರುವ ಕುಟುಂಬವೊಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿ ಜಿಲ್ಲೆಯ ವಿವಿಧ ಪ್ರವಾಸೋದ್ಯಮ ತಾಣಗಳಿಗೆ ಭೇಟಿ ನೀಡಿದ್ದಾರೆ. ಜೆಟ್ ಬಂದಿಳಿದಿದ್ದು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪ್ರವಾಸಿಗರನ್ನು ಸ್ವಾಗತಿಸಿದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆ ವತಿಯಿಂದ ಫಿಟ್ ಹಾರ್ಟ್ ವರ್ಚುವಲ್ ಕಾರ್ಯಕ್ರಮ

ವಿಶ್ವ ಹೃದಯ ದಿನದ ಅಂಗವಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಮರೇನಾ ಸ್ಪೋಟ್ಸ್ ಕಾಂಪ್ಲೆಕ್ಸ್‌ನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಫಿಟ್ ಹಾರ್ಟ್ ವರ್ಚುವಲ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಇಂಟರ್‌ವೆನ್ಷನಲ್ ಕಾರ್ಡಿಯಾಲಾಜಿಸ್ಟ್ ಡಾ. ನರಸಿಂಹ್ ಪೈ ಅವರು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮಹತ್ವ ಹಾಗೂ ಪ್ರಸ್ತುತ ಸಂದರ್ಭದಲ್ಲಿ ಕ್ರೀಡಪಾಟುಗಳು ಹಾಗೂ ಯುವ ಜನತೆಯಲ್ಲಿ ಹೃದಯಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ

ತಣ್ಣೀರು ಬಾವಿಯಲ್ಲಿ ಗ್ಯಾಸ್ ಟರ್ಮಿನಲ್‍ಗೆ ಚಿಂತನೆ : ಕೇಂದ್ರ ಸಚಿವ ಸರ್ಬಾನಂದ್ ಸೋನೋವಾಲ್ ಹೇಳಿಕೆ

ನವಮಂಗಳೂರು ಬಂದರು ಟ್ರಸ್ಟ್ ವತಿಯಿಂದ ಯು.ಎಸ್. ಮಲ್ಯ ಗೇಟ್ ನವೀಕರಣ ಕಾಮಗಾರಿಗೆ ಶಿಲಾನ್ಯಾಸ, ಬಂದರಿನಲ್ಲಿ ಟ್ರಕ್ ಟರ್ಮಿನಲ್‍ಗೆ ಶಿಲಾನ್ಯಾಸ ಹಾಗೂ ಬಂದರಿನಲ್ಲಿ ವ್ಯಾಪಾರ ಅಭಿವೃದ್ದಿ ಕೇಂದ್ರದ ಕಟ್ಟಡ ಲೋಕಾರ್ಪಣೆ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಅವರು ಮಂಗಳೂರು ನವಬಂದರು ಪರಿಸರದಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು

ಮಂಗಳೂರಿನಲ್ಲಿ ವಾಣಿಜ್ಯ ಸಪ್ತಾಹ-ರಫ್ತುದಾರರ ಸಮಾವೇಶ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಸಂಸ್ಥೆ ವತಿಯಿಂದ 75ನೇ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಾಣಿಜ್ಯ ಸಪ್ತಾಹ ರಫ್ತುದಾರರ ಸಮಾವೇಶಕ್ಕೆ ನಗರದ ಓಷಿಯನ್ ಪರ್ಲ್ ಹೋಟೆಲ್‍ನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರು ಸೆ.23ರ ಗುರುವಾರ ಚಾಲನೆ ನೀಡಿದರು.

ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗೆ ಸನ್ಮಾನ ಹಾಗೂ ಕಾರ್ಯಾಗಾರ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ್ ಮಿಷನ್ ಗ್ರಾಮಾಂತರ ಮಂಗಳೂರು ತಾಲೂಕು, ಸಾಹಸ್ ಸಂಸ್ಥೆ ಸಹಯೋಗದಲ್ಲಿ ಪೌರ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ ಹಾಗೂ ಮಾಹಿತಿ ಕಾರ್ಯಾಗಾರವನ್ನ ಹಮ್ಮಿಕೊಳ್ಳಲಾಗಿತ್ತು. ಇನ್ನು ತಾಲೂಕು ಪಂಚಾಯತ್‍ನಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಸರೋಜನಿ ಅವರು ಉದ್ಘಾಟಿಸಿದ್ರು. ತದ ಬಳಿಕ ಮಾತನಾಡಿದ ಅವರು, ಕೋವಿಡ್‍ನಲ್ಲೂ ಸ್ವಚ್ಚತಾ ಕಾರ್ಯಕ್ರಮದಲ್ಲಿ ತನ್ನ

ಪಾಲಿಕೆಯ ಘನ ತ್ಯಾಜ್ಯ ನಿರ್ವಹಣೆಯ ಪ್ರಸ್ತಾವನೆಗೆ ಖಂಡನೆ

ಮಂಗಳೂರು ದಕ್ಷಿಣದ ಮಾಜಿ ಶಾಸಕರಾದ ಜೆ. ಆರ್. ಲೋಬೊ, ಪಾಲಿಕೆಯ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಇಂದು ನಗರದ ಸ್ವಚ್ಛತೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಬಹಳಷ್ಟು ಅನುಭವ ಇರುವ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜಿತಾಕಮನಂದಜಿ ಹಾಗೂ ಶ್ರೀ ಏಕಗಮ್ಯನಂದ ಸ್ವಾಮೀಜಿ ಯವರನ್ನು ಭೇಟಿ ಮಾಡಿ ಅವರೊಡನೆ ಸಮಾಲೋಚನೆ ನಡೆಸಿದರು. ಮಂಗಳೂರು ಮಹಾನಗರ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಮಾಲೋಚನೆ ನಡೆಸಿ

ಇತರರ ಕಷ್ಟವನ್ನು ತನ್ನದೇ ಕಷ್ಟವೆಂದು ಭಾವಿಸಿಕೊಂಡು ಸಹಾಯ ಮಾಡುವ ಗುಣವಿರಬೇಕು:ಶ್ರೀ ಐಕಳ ಹರೀಶ್ ಶೆಟ್ಟಿ

 ಮಂಗಳೂರು :ನೆರೆಮನೆಯವರ ಅಥವಾ ಇತರರ ಕಷ್ಟಗಳನ್ನು ನೋಡಿ  ಏನಾದರೂ ಸಹಾಯ ಮಾಡಲು ಪ್ರಯತ್ನಿಸಬೇಕು. ನೋಡಿಯೂ ನೋಡದಂತೆ ನನಗೇಕೆ ಬೇಕು ಬೇಡದ ಕೆಲಸವೆಂದು ಸುಮ್ಮನಿರಬಾರದು. ಇತರರ ಕಷ್ಟವನ್ನು ತನ್ನದೇ ಕಷ್ಟವೆಂದು ಸ್ವೀಕರಿಸಿ ಸಾಧ್ಯವಾದ ಸಹಾಯವನ್ನು ಮಾಡಲು ಪ್ರಯತ್ನಿಸಬೇಕು.ಅದುವೇ  ಬದುಕಿನ ಸಾರ್ಥಕತೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ    ಐಕಳ ಹರೀಶ್ ಶೆಟ್ಟಿಯವರು  ಹೇಳಿದರು.      ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಬಾಳೆಪುಣಿ ಸಮೀಪದ ಯರ್ಮಾಜೆ 

ಮಂಗಳೂರಿನ ಜೈಲ್ ರೋಡ್ ಬಳಿ ಮಹಿಳೆಯರಿಗೆ ತಲ್ವಾರ್ ನಿಂದ ಹಲ್ಲೆ

ಮಂಗಳೂರಿನ ಜೈಲ್ ರೋಡ್ ಬಳಿಯ ಇರುವ ಡಯಟ್ ಸಂಸ್ಥೆಯ ಒಳಗೆ ನುಗ್ಗಿದ ದುಷ್ಕರ್ಮಿಯೋರ್ವ ಮೂವರು ಮಹಿಳೆಯರಿಗೆ ತಲ್ವಾರ್ ನಿಂದ ಹಲ್ಲೆ ನಡೆಸಿ ಘಟನೆ ನಡೆದಿದೆ. ಹಲ್ಲೆಗೊಳಗಾದವರನ್ನು ರೀನ, ಗುಣವತಿ, ನಿರ್ಮಲ ಎಂದು ಗುರುತಿಸಲಾಗಿದ್ದು, ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಹಾಗೂ ಹಿರಿಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್

ದೇಶವನ್ನಾಳುವ ಸರಕಾರದ ನೀತಿಗಳನ್ನು ಹಿಮ್ಮೆಟ್ಟಿಸದೆ ಜನತೆಯ ಬದುಕನ್ನು ರಕ್ಷಿಸಲು ಅಸಾಧ್ಯ – ಮುನೀರ್ ಕಾಟಿಪಳ್ಳ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ನೀತಿಗಳಿಂದ ಜ‌ನಸಾಮಾನ್ಯರು ಘನತೆಯಿಂದ ಬದುಕುವ ಹಕ್ಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಬಿಜೆಪಿ ಪ್ರಬಲವಾಗಿ ವಿರೋಧಿಸಿದ್ದ ಖಾಸಗೀಕರಣ, ವ್ಯಾಪಾರೀಕರಣದ ನೀತಿಗಳನ್ನು ಈಗ ರಭಸವಾಗಿ ಜಾರಿಗೆ ತರುವ ಮೂಲಕ ಶಿಕ್ಷಣ, ಆರೋಗ್ಯ, ಉದ್ಯೋಗ ಜನಸಾಮಾನ್ಯರಿಗೆ ನಿಲುಕದಂತಾಗಿದೆ. ದೇಶದ ಸಂಪತ್ತು ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗುತ್ತಿವೆ. ಬಿಜೆಪಿ ಸರಕಾರದ ವಿರುದ್ಧ ರೂಪುಗೊಳ್ಳುತ್ತಿರುವ