ಕಾರು ಚಾಲಕನ ಅವಾಂತರದಿಂದಾಗಿ ರಸ್ತೆಯಂಚಿನಲ್ಲಿ ನಿಲ್ಲಿಸಿದ ಕಾರು ಸಹಿತ ಸ್ಕೂಟರ್ ತೀವ್ರ ಜಖಂ ಗೊಂಡು ಇಬ್ಬರು ಗಾಯಗೊಂಡ ಘಟನೆ ಕಟಪಾಡಿ ಪೇಟೆಯಲ್ಲಿ ರಾತ್ರಿ ಸಂಭವಿಸಿದೆ. ಉಡುಪಿ ಕಡೆಯಿಂದ ಕಟಪಾಡಿ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಅತೀ ವೇಗವಾಗಿ ಮುನ್ನುಗ್ಗಿ ಬಂದ ಕಾರು ರಸ್ತೆಯಂಚಿನಲ್ಲಿ ನಿಲ್ಲಿಸಿದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ನಿಲ್ಲದೆ ಸ್ಕೂಟರ್ ಗೆ
ರಾಷ್ಟ್ರ ಮಟ್ಟದ ಛಾಯಾಗ್ರಹಣ ಸ್ಪರ್ಧೆ:ಅವಿಭಜಿತ ದ.ಕ. ಜಿಲ್ಲೆಯ ಮೂವರಿಗೆ ಬಹುಮಾನ ,ಆಂಧ್ರ ಪ್ರದೇಶ ಪೋಟೋಗ್ರಫಿ ಅಕಾಡೆಮಿ ಆಜಾದಿಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕರ್ನಾಟಕದ ಪಂಚ ಛಾಯಾಗ್ರಾಹಕರ ಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು ಇವರ ಪೈಕಿ ಮೂವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಕಳುಹಿಸಿದ ಚಿತ್ರಕ್ಕೆ ಬಹುಮಾನ ಲಭಿಸಿದೆ. ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ
ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ವತಿಯಿಂದ ಕೊರಗರ ಭೂಮಿ ಹಬ್ಬ ’ನಮ್ಮ ಭೂಮಿ ನಮ್ಮ ಹಕ್ಕು’ ಕಾರ್ಯಕ್ರಮ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಕೊರಗರ ಬಲೆಪುವಿನಲ್ಲಿ ಗುರುವಾರ ನಡೆಯಿತು.ಬಳ್ಕುಂಜೆ ತಾಲ್ಯಾನ್ ಮನೆತನ ಗುರಿಕಾರರಾದ ಜಬ್ಬ ಕೊರಗ ಅವರು ಹಬ್ಬದ ಜ್ಯೋತಿ ಬೆಳಗಿಸಿ ಧ್ವಜಾರೋಹಣ ನೆವೇರಿಸಿದರು. ಕೊರಗ ಸಮುದಾಯದ ಹಿರಿಯ ಮಹಿಳೆ ಕಾಳಿ ಅವರು ಹಬ್ಬದ ಸಿಹಿಜೇನು ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ
ಮಂಗಳೂರು:- ಸ್ವಾತಂತ್ರ್ಯದ ಅಮೃತೋತ್ಸವದ ಪ್ರಯುಕ್ತ ಮಂಗಳೂರು ಹೊರವಲಯದ ಅಡ್ಡೂರಿನಲ್ಲಿ ಸನ್ ಶೈನ್ ಫ್ರೆಂಡ್ಸ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಮುಖ್ಯ ಅತಿಥಿಗಳಾದ ಎಂ.ಜಿ ಹೆಗ್ಡೆ ( ಶಿಕ್ಷಣತಜ್ಞರು ) ಹಾಗೂ ಯು.ಪಿ ಇಬ್ರಾಹಿಂ ಇವರು ನೆರವೇರಿಸಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ ಶೈನ್ ಫ್ರೆಂಡ್ಸ್ ಅಡ್ಡೂರು ಇದರ ಅಧ್ಯಕ್ಷ ಎ ಕೆ ಹನೀಫ್ ಅವರು ವಹಿಸಿದ್ದರು. ಡಾ ಇ ಕೆ ಎ ಸಿದ್ದೀಕ್ ಅಡ್ಡೂರು, ಜನಾಬ್ ಅಹ್ಮದ್ ಬಾವ
ಭಾರತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಎಲ್ಲೆಡೆ ವಿಜ್ರಂಭಣೆಯಿಂದ ನಡೆದಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಗಸ್ಟ್ 15ರಂದು ಬೆಂಗಳೂರಿನಲ್ಲಿ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮುಲ್ಕಿ ಅವರ ನೇತೃತ್ವದಲ್ಲಿ ದ.ಕ. ಜಿಲ್ಲೆಯಿಂದ 15 ಬಸ್ಸು ಸಹಿತ ಇತರ ವಾಹನಗಳಲ್ಲಿ ಸಾವಿರಾರು ಕಾರ್ಯಕರ್ತರು ಬೆಂಗಳೂರಿಗೆ ತೆರಳಿ ಕಾರ್ಯಕ್ರಮದಲ್ಲಿ
ಕುಂದಾಪುರ : ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದ ಶಂಕಿತ ನಕ್ಸಲ್ ವಾದಿಗಳಾದ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರ ಮೇಲಿನ 7 ಪ್ರಕರಣಗಳ ವಿಚಾರಣೆಯನ್ನು ಸೆಕ್ಷನ್ ನ್ಯಾಯಾಲಯಕ್ಕೆ ವರ್ಗಾಯಿಸಿ ಬುಧವಾರ ಆದೇಶ ಹೊರಡಿಸಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶವ್ ಯಡಿಯಾಳ ಕೊಲೆ ಪ್ರಕರಣವೂ ಸೇರಿದಂತೆ ಕುಂದಾಪುರ ಉಪ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 11 ಪ್ರಕರಣಗಳಿದ್ದು, ಶಂಕರನಾರಾಯಣ ಠಾಣಾ ವ್ಯಾಪ್ತಿಯ 6 ಹಾಗೂ ಕೊಲ್ಲೂರು ಠಾಣೆ
ದ್ವಿಚಕ್ರ ವಾಹನ ಮಾರಾಟ ಕ್ಷೇತ್ರದಲ್ಲಿ ಹೆಸರುವಾಸಿಯಾದ ಹೀರೋ ಕಂಪೆನಿಯ ಅಧಿಕೃತ ಶೋರೂಂ ಆದ ವೆಸ್ಟ್ ಕೋಸ್ಟ್ ಮೋಟಾರ್ಸ್‍ನಲ್ಲಿ ನಿರಂತರವಾಗಿ ಒಂದು ತಿಂಗಳ ಕಾಲ ವೆಸ್ಟ್‍ಕೊಸ್ಟ್ ಉತ್ಸವವನ್ನು ಹಮ್ಮಿಕೊಂಡಿದ್ದರು. ದ್ವಿಚಕ್ರ ವಾಹನ ಖರೀದಿರಾರಿಗೆ ಲಕ್ಕಿ ಕೂಪನನ್ನು ಆಯೋಜಿಸಿದ್ದು, ಎರಡನೇ ವಾರದ ಲಕ್ಕಿ ಡ್ರಾ ಕಾರ್ಯಕ್ರಮ ನಡೆಯಿತು. ಲಕ್ಕಿ ಕೂಪನ್ ವಿಜೇತರಿಗೆ ವಿಶೇಷ ಬಹುಮಾನಗಳನ್ನು ವಿತರಿಸುತ್ತಿದ್ದಾರೆ. ಇನ್ನು ಎರಡನೇ ವಾರದ ಲಕ್ಕಿ ಡ್ರಾ
ಮಂಜೇಶ್ವರ : ತಪಾಡಿಯಿಂದ ಕಾಸರಗೋಡು ತನಕದ ರಾ.ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಬೃಹತಕಾರದ ಹೊಂಡಗಳನ್ನು ಜಲ್ಲಿ ಕಲ್ಲು ಹಾಗೂ ಜಲ್ಲಿ ಹುಡಿಯನ್ನು ಹಾಕಿ ಮುಚ್ಚುತ್ತಿರುವುದು ಪ್ರಯಾಣಿಕರಿಗೂ ಸ್ಥಳೀಯರಿಗೂ ಶಾಪವಾಗಿ ಪರಿಣಮಿಸಿದೆ.ರಾಷ್ಟ್ರೀಯ ಹೆದ್ದಾರಿ ಪುನರ್ ನವೀಕರಣದ ಭಾಗವಾಗಿ ರಸ್ತೆ ನಿರ್ಮಾಣ ನಡೆಯುತ್ತಿರುವ ಭಾಗಗಳಲ್ಲಿ ಮಳೆಗಾಲದಲ್ಲಿ ಮಳೆ ನೀರು ಕಟ್ಟಿ ನಿಂತು ರಸ್ತೆ ಬಹುತೇಕ ಭಾಗಗಳಲ್ಲಿ ಕುಸಿದು ಹೋಗಿತ್ತು. ರಾ.ಹೆದ್ದಾರಿ ನಿರ್ಮಾಣದ ಕಾಮಗಾರಿಯಲ್ಲಿ ಹಲವು
ಶ್ರೀ ಹನುಮಾನ್ ಮಂದಿರ (ರಿ) ಎಡಪದವು ಇದರ ಮುಂದಾಳುತ್ವದಲ್ಲಿ ಸ್ಥಳೀಯ ಶಾಲಾ- ಕಾಲೇಜುಗಳ ಸಹಭಾಗಿತ್ವದಲ್ಲಿ ಭಾರತದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ವನ್ನು ಅತ್ಯಂತ ವೈಭವೋಪೇತ ವಾಗಿ ಎಡಪದವಿನಲ್ಲಿ ಆಚರಿಸಲಾಯಿತು. ಎಡಪದವು ಗ್ರಾಮದ ಕಣ್ಣೋರಿ ಹಿರಿಯ ಪ್ರಾಥಮಿಕ ಶಾಲೆ, ಬ್ರಿಂಡೇಲ್ ಹಿರಿಯ ಪ್ರಾಥಮಿಕ ಶಾಲೆ, ಎಡಪದವು ಹಿರಿಯ ಪ್ರಾಥಮಿಕ ಶಾಲೆ, ಬೋರುಗುಡ್ಡೆ ಹಿರಿಯ ಪ್ರಾಥಮಿಕ ಶಾಲೆ, ಸ್ವಾಮೀ ವಿವೇಕಾನಂದ ಪ್ರೌಡ ಶಾಲೆ, ಸ್ವಾಮೀ ವಿವೇಕಾನಂದ ಪದವಿ ಪೂರ್ವ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಂಡಗಳನ್ನು ಮುಚ್ಚಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಅವರು ಸೂಚಿಸಿದ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಕೆಲಸವನ್ನ ಆರಂಭಿಸಿದ್ದಾರೆ. ಸುರತ್ಕಲ್ ಮಹಾನಗರ ಪಾಲಿಕೆಯ ಕಟ್ಟಡದಲ್ಲಿರುವ ಶಾಸಕರ ಕಚೇರಿಯಲ್ಲಿ ಸಭೆಯನ್ನು ನಡೆಸಿದ ಡಾ. ಭರತ್ ಶೆಟ್ಟಿ ವೈ ಅವರು ಇದೇ ವೇಳೆ ಗೈಲ್ ಸಂಸ್ಥೆ ಹಾಗೂ ಜಲಸಿರಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸರ್ವಿಸ್ ರಸ್ತೆಯಲ್ಲಿ ಅಗೆದು ಹಾಕಿದ



























