Home Posts tagged #manjeshwara (Page 11)

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಸಿಪಿಐಎಂ ರಾಜ್ಯ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ಸಿಪಿಐಎಂ ರಾಜ್ಯ ಸಮಿತಿ ತೀರ್ಮಾನ ಪ್ರಕಾರ ಕೇರಳ ಎಲ್ಲಾ ಏರಿಯಾ ಕೇಂದ್ರಗಳಲ್ಲಿ ಪೆಟ್ರೋಲ್ ಡಿಸೇಲ್ ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಉಪ್ಪಳ ಪೋಸ್ಟ್ ಆಫೀಸ್ ಎದುರುಗಡೆ ಧರಣಿ ಹಮ್ಮಿಕೊಳಲಾಯಿತು. ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕಾಂ ಕೆ

ರೂಫಿಂಗ್ ಶೀಟ್ ಹಾಕುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ರಾಡ್ ಹಾಗೂ ಟೈಲ್ಸ್‍ನಿಂದ ಹಲ್ಲೆ

ಮಂಜೇಶ್ವರ: ಆವರಣ ಗೋಡೆಯನ್ನು ಕಬಳಿಸಿ ಮನೆ ಸಮೀಪದ ರೋಯಲ್ ಆರ್ಕೆಡ್ ಭಾವ ಹಿಂದೂಸ್ಥಾನಿ ಕಟ್ಟಡಕ್ಕೆ ರೂಫಿಂಗ್ ಶೀಟ್ ಹಾಕುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಅಲ್ಲಿದ್ದ ತಂಡ ತಂದೆ ಹಾಗೂ ಅಪ್ರಾಪ್ತ ಬಾಲಕನಿಗೆ ರಾಡ್ ಹಾಗೂ ಟೈಲ್ಸ್ ತುಂಡುಗಳಿಂದ ಹಲೆಗೈದ ಘಟನೆ ನಡೆದಿದೆ. ಉದ್ಯಾವರ ಮಾಡ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ವಾಸವಾಗಿರುವ ಅಬ್ದುಲ್ ರಶೀದ್ (46) ಹಾಗೂ ಪುತ್ರ ರಾಯಿಫ್ (16) ಹಲ್ಲೆಗೊಳಗಾಗಿದ್ದಾರೆ. ಇವರನ್ನು ಬಳಿಕ ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ

ಮುರತ್ತಣೆಯಲ್ಲಿ ಹದಗೆಟ್ಟ ಹೈಮಾಸ್ಟ್ ದೀಪ

ಮಂಜೇಶ್ವರ : ವರ್ಕಾಡಿ ಪಂಚಾಯತ್‍ನ ಪ್ರಮುಖ ಪೇಟೆಯಲ್ಲೊಂದಾದ ಮುರತ್ತಣೆಯಲ್ಲಿ ದಿವಂಗತ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ನಿಧಿಯಿಂದ ಸ್ಥಾಪಿಸಲಾದ ಹೈ ಮಾಸ್ಟ್ ಲೈಟ್ ಹದೆಗೆಟ್ಟು ವರ್ಷಗಳಾದರೂ ದುರಸ್ಥಿಗೆ ವರ್ಕಾಡಿ ಪಂಚಾಯತ್ ಆಡಳಿತ ಸಮಿತಿ ಮೀನ ಮೇಷ ಎಣಿಸುತ್ತಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಪಂಚಾಯತ್ ಆಡಳಿತ ಸಮಿತಿಯ ಗಮನಕ್ಕೆ ತಂದರೆ ಬೇಜವಾಬ್ದಾರಿಯುತವಾದ ಹೇಳಿಕೆ ನೀಡಿ ಕೈ ತೊಳೆಯುತ್ತಿದೆಯೆಂದು ಯೂತ್ ಕಾಂಗ್ರೆಸ್ ಆರೋಪಿಸಿದೆ. ಲೈಟ್ ಉರಿಯದಿರುವುದರಿಂದಾಗಿ

ಮನೆ ಟೆರೇಸ್‍ನಲ್ಲಿ ಆಟವಾಡುತಿದ್ದ ಬಾಲಕ ವಿದ್ಯುತ್ ಶಾಕ್ ತಗಲಿ ಮೃತ್ಯು

ಮಂಜೇಶ್ವರ: ಮನೆ ಟೆರೇಸ್ ನಲ್ಲಿ ಆಟವಾಡುತಿದ್ದ ಹತ್ತು ವರ್ಷದ ಬಾಲಕನೊಬ್ಬ ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿದ್ದಾನೆ. ಮೀಂಜ ಮೊರತ್ತಣೆ ಆಟೋ ಚಾಲಕ ಸದಾಶಿವ ಶೆಟ್ಟಿ- ಯಶೋಧ ದಂಪತಿಗಳ ಪುತ್ರ ಮೊಕ್ಷಿತ್ ರಾಜ್ ಸಾವನ್ನಪ್ಪಿದ ದುರ್ದೈವಿ. ತಲೇಕ್ಕಲ ಸರಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿರುವ ಮೋಕ್ಷಿತ್ ರಾಜ್ ಆಟವಾಡುತಿದ್ದ ಟೆರೇಸ್ ಮೇಲಿನಿಂದ ಪಕ್ಕದ ಮನೆಗೆ ಹಾಕಲಾಗಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಮುಟ್ಟಿದಾಗ ಶಾಕ್ ತಗಲಿ ಟೆರೇಸ್ ನ ಕೆಳಗೆ

ಮಂಜೇಶ್ವರದಲ್ಲಿ ಸಂಭ್ರಮದ ಇದ್ ಮಿಲಾದ್ ಆಚರಣೆ

ಮಂಜೇಶ್ವರ: ಪ್ರಸಿದ್ದವಾಗಿರುವ ಉದ್ಯಾವರ ಸಾವಿರ ಜಮಾಹತ್ ಖಿದ್ಮತುಲ್ ಇಸ್ಲಾಮ್ ಕಮಿಟಿಯ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯೊಂದಿಗೆ ಈದ್ ಮಿಲಾದ್ ಆಚರಿಸಲಾಯಿತು. ಅಸಯ್ಯದ್ ಶಹೀದ್ ವಲಿಯುಲ್ಲಾಯಿ (ಖ. ಸಿ) ರವರ ದರ್ಗಾ ಶೆರೀಫ್ ನಲ್ಲಿ ನಡೆದ ಪ್ರಾಥಣೆಯ ಬಳಿಕ ಮಸೀದಿ ಅಧ್ಯಕ್ಷ ಸೈಫುಲ್ಲಾ ತಂಘಲ್ ರವರು ಧ್ವಜಾರೋಹಣ ಗೈಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಬಳಿಕ ಉದ್ಯಾವರ ಸಾವಿರ ಜಮಾಹತ್ ಖತೀಬ್ ಅಬ್ದುಲ್ ಕರೀಂ ಧಾರಿಮಿಯವರು ಮಸೀದಿ ಅಧ್ಯಕ್ಷರಿಗೆ

ಕೋವಿಡ್ ವರದಿ ಕಡ್ಡಾಯ ಕ್ರಮ ಹಿಂಪಡೆಯಬೇಕೆಂದು ಎಐವೈಎಫ್ ಮಂಜೇಶ್ವರ ಸಮಿತಿ ಆಗ್ರಹ

ಮಂಜೇಶ್ವರ: ಎಐವೈಎಫ್ ಮಂಜೇಶ್ವರ ಏರಿಯಾ ಸಮಾವೇಶ ಟಿವಿ ಥೋಮಸ್ ಸ್ಮಾರಕ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಲಪಾಡಿ ಗಡಿ ಪ್ರದೇಶದಲ್ಲಿ ಕರ್ನಾಟಕ ಸರಕಾರ ಕೇರಳ ಜನತೆಗೆ ಆರ್‍ಟಿಪಿಸಿಆರ್ ನೆಗೆಟಿವ್ ಕಡ್ಡಾಯಗೊಳಿಸಿದ ಕ್ರಮವನ್ನು ಕೂಡಲೇ ಹಿಂತೆಗೆಯಬೇಕೆಂದು ಎಐವೈಎಫ್ ಮಂಜೇಶ್ವರ ಏರಿಯಾ ಸಮಿತಿ ಸಂಬಂಧಪಟ್ಟವರನ್ನು ಒತ್ತಾಯಿಸಿದೆ. ಎಐವೈಎಫ್ ಮಂಜೇಶ್ವರ ಏರಿಯಾ ಅಧ್ಯಕ್ಷ ಪ್ರಥಮ್ ಕಣ್ವತೀರ್ಥ ಧ್ವಜಾರೋಹಣಗೈದರು. ಸಮಾವೇಶವನ್ನು ಎಐವೈಎಫ್ ಜಿಲ್ಲಾಧ್ಯಕ್ಷ ಬಿಜು ಉಣ್ಣಿತ್ತಾನ್

ಮಂಜೇಶ್ವರ ಗ್ರಾ. ಪಂ.ನಲ್ಲಿ ಬೀಫ್ ಸ್ಟಾಲ್ ಸ್ಥಾಪನೆಗೆ ವಿರೋಧ : ಪ್ರತಿಭಟನೆ

ಮಂಜೇಶ್ವರ : ಮಂಜೇಶ್ವರ ಗ್ರಾ. ಪಂ. ಬೋರ್ಡ್ ಸಭೆಯಲ್ಲಿ ಬೀಫ್ ಸ್ಟಾಲ್ ಸ್ಥಾಪನೆಗೆ ಆಡಳಿತ ಮಂಡಳಿ ಅಜೆಂಡಾದ ಬಗ್ಗೆ ಚರ್ಚಿಸಿ ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಇರುವುದರಿಂದ ಘರಂ ಆದ ವಿರೋಧ ಪಕ್ಷದ ಯುಡಿಎಫ್ ಸದಸ್ಯರುಗಳು ಬೀಫ್ ಸ್ಟಾಲ್‍ಗಳನ್ನು ವಿರೋಧಿಸುತ್ತಿರುವುದು ಆರೆಸ್ಸಸ್ ಅಜೆಂಡಾವನ್ನು ಪ್ರಾಬಲ್ಯಕ್ಕೆ ತರುವ ಯತ್ನವಾಗಿರುವುದಾಗಿ ಆರೋಪಿಸಿ ಬೋರ್ಡ್ ಸಭೆಯನ್ನು ತ್ಯಜಿಸಿ ಹೊರ ಬಂದು ಪ್ರತಿಭಟಿಸಿದರು. ಇವರೊಂದಿಗೆ ಎಸ್ ಡಿ ಪಿ ಐ ಹಾಗೂ ಆಡಳಿತರಂಗ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ : ತಲಪಾಡಿಯಲ್ಲಿ ಮರಗಳ ಮಾರಣ ಹೋಮ

 ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಭಾಗದ ಮೊದಲ ಹಂತವಾಗಿ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿರುವ ಮರಗಳನ್ನು ತೆರವುಗೊಳಿಸಲು ಸರಕಾರವು ಗುತ್ತಿಗೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ತಲಪಾಡಿಯಿಂದ ಮರಗಳ ಮಾರಣ ಹೋಮದದ ಪ್ರಕ್ರಿಯೆ ಆರಂಭಗೊಂಡಿತ್ತು. ಮರಗಳನ್ನು ಕಡಿದು ಅದರ ರೆಂಬೆಗಳನ್ನು ರಸ್ತೆ ಬದಿಗಳಲ್ಲಿ ಹಾಗೂ ಬಸ್ಸು ನಿಲ್ದಾಣ ಪರಿಸರಗಳಲ್ಲಿ ಮತ್ತು ಸಾರ್ವಜನಿಕರು ನಡೆದಾಡುತ್ತಿರುವ ಸ್ಥಳಗಳಲ್ಲಿ ಉಪೇಕ್ಷಿಸಿ ಅದನ್ನು ತೆರವುಗೊಳಿಸದೇ ಇರುವುದು

ಕುಬಣೂರಿನ ಸೇತುವೆಯ ಒಂದು ಭಾಗ ಕುಸಿದು ಸಂಚಾರಕ್ಕೆ ತಡೆ

ಮಂಜೇಶ್ವರ: ಮಂಗಲ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕುಬಣೂರಿನಲ್ಲಿ 30 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸೇತುವೆಯ ಒಂದು ಭಾಗ ಕುಸಿದು ಸಂಚಾರಕ್ಕೆ ತಡೆಯಾಗಿದ್ದು ನಿತ್ಯ ಸಂಚಾರಿಗಳು ಸಂಕಷ್ಟಕ್ಕೂಳಗಾಗಿದ್ದಾರೆ. ಇದು ಸುವರ್ಣಗಿರಿ ತೋಡಿಗೆ ಕೃಷಿಗಾಗಿ ನಿರ್ಮಿಸಲಾದ ಸೇತುವೆಯಾಗಿದ್ದು ಅಗಲ ಕಿರಿದಾಗಿ ಸುಗಮ ಸಂಚಾರಕ್ಕೂ ಅಡ್ಡಿಯಾಗಿತ್ತು. ಇದರ ಮೇಲೆ ಕೆಂಪು ಕಲ್ಲು ಹಾಗೂ ಜಲ್ಲಿ ಕಲ್ಲು ಮಾಫಿಯಾಗಳು ಲಾರಿಗಳಲ್ಲಿ ಅಧಿಕ ಭಾರಗಳನ್ನು ಹೇರಿ ಸಾಗಾಟ ನಡೆಸುತಿದ್ದದ್ದು

ಕೇರಳ ಕೋ-ಆಪರೇಟಿವ್ ಎಂಪ್ಲೋಯಿಸ್ ಕೌನ್ಸಿಲ್ ಮಂಜೇಶ್ವರ : ಬಸ್ಸು ತಂಗುದಾಣ ಕೊಡುಗೆ

ಮಂಜೇಶ್ವರ : ಕೇರಳ ಕೋ- ಆಪರೇಟಿವ್ ಎಂಪ್ಲೋಯೀಸ್ ಕೌನ್ಸಿಲ್ ಮಂಜೆಶ್ವರ ಯೂನಿಟ್ ಇವರ ವತಿಯಿಂದ ಕೊಡುಗೆಯಾಗಿ ಸುಮಾರು ಎರಡೂವರೆ ಲಕ್ಷ ರೂ. ವೆಚ್ಚದಲ್ಲಿ ಮಂಜೇಶ್ವರ ಒಳಪೇಟೆಯಲ್ಲಿ ನಿರ್ಮಿಸಲಾದ ಸುಸಜ್ಜಿತ ಹೈಟೆಕ್ ಸೂಪರ್ ಸ್ಪೆಷಾಲಿಟಿ ಬಸ್ಸು ತಂಗುದಾಣ ಸೋಮವಾರದಂದು ಸಂಜೆ ಲೋಕಾರ್ಪಣೆಗೊಂಡಿತು.   ಜನನಿಬಿಡ ಪ್ರದೇಶವಾದ ಮಂಜೇಶ್ವರ ಒಳಪೇಟೆಯಲ್ಲಿ ಮೂಲಭೂತ ಸೌಕರ್ಯಗಳಲ್ಲೊಂದಾದ ಹೈಟೆಕ್ ಮಾದರಿಯ ಶೌಚಾಲಯಗಳನ್ನೊಳಗೊಂಡ ಬಸ್ಸು ತಂಗುದಾಣ ಲೋಕಾರ್ಪಣೆಗೊಂಡಿರುವುದು