Home Posts tagged #manjeshwara (Page 10)

ಮಂಜೇಶ್ವರ : ಸರ್ಕಾರಿ ಶಾಲೆಗೆ ಮಲೆಯಾಳ ಶಿಕ್ಷಕರ ನೇಮಕ ವಿರುದ್ಧ ಪ್ರತಿಭಟನೆ

ಮಂಜೇಶ್ವರ: ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮಕ್ಕೆ ಮತ್ತೆ ಮಲಯಾಳ ಶಿಕ್ಷಕರ ನೇಮಕ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ.ನೇಮಕಾತಿ ವಿರೋಧಿಸಿ ಶಾಲಾ ವಿದ್ಯಾರ್ಥಿಗಳು, , ಶಾಲಾ ರಕ್ಷಕ – ಶಿಕ್ಷಕ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕಳೆದ ವರ್ಷವೂ ಫಿಸಿಕಲ್ ಸಯನ್ಸ್ ಗೆ ಮಲಯಾಳಿ ಶಿಕ್ಷಕ ರನ್ನು ನೇಮಕ ಮಾಡಲಾಗಿತ್ತು.ಈ

ತಲಪಾಡಿ : ಸ್ಥಳೀಯರಿಗೆ ಶಾಪವಾದ ರಸ್ತೆ ಸಮಸ್ಯೆ

ಮಂಜೇಶ್ವರ : ತಪಾಡಿಯಿಂದ ಕಾಸರಗೋಡು ತನಕದ ರಾ.ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಬೃಹತಕಾರದ ಹೊಂಡಗಳನ್ನು ಜಲ್ಲಿ ಕಲ್ಲು ಹಾಗೂ ಜಲ್ಲಿ ಹುಡಿಯನ್ನು ಹಾಕಿ ಮುಚ್ಚುತ್ತಿರುವುದು ಪ್ರಯಾಣಿಕರಿಗೂ ಸ್ಥಳೀಯರಿಗೂ ಶಾಪವಾಗಿ ಪರಿಣಮಿಸಿದೆ.ರಾಷ್ಟ್ರೀಯ ಹೆದ್ದಾರಿ ಪುನರ್ ನವೀಕರಣದ ಭಾಗವಾಗಿ ರಸ್ತೆ ನಿರ್ಮಾಣ ನಡೆಯುತ್ತಿರುವ ಭಾಗಗಳಲ್ಲಿ ಮಳೆಗಾಲದಲ್ಲಿ ಮಳೆ ನೀರು ಕಟ್ಟಿ ನಿಂತು ರಸ್ತೆ ಬಹುತೇಕ ಭಾಗಗಳಲ್ಲಿ ಕುಸಿದು ಹೋಗಿತ್ತು. ರಾ.ಹೆದ್ದಾರಿ ನಿರ್ಮಾಣದ ಕಾಮಗಾರಿಯಲ್ಲಿ ಹಲವು

ಮಂಜೇಶ್ವರ : ಶಸ್ತ್ರಾಸ್ತ್ರದೊಂದಿಗೆ ತಿರುಗಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಜೇಶ್ವರ: ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಬಂದೂಕು ಹಾಗೂ ಶಸ್ತ್ರಾಸ್ತ್ರದೊಂದಿಗೆ ಉಪ್ಪಳದಲ್ಲಿ ತಿರುಗಾಡುತಿದ್ದ ಮೂವರನ್ನು ಮಂಜೇಶ್ವರ ಎಸ್ಸೈ ಅನ್ಸಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಈ ತಂಡದಲ್ಲಿದ್ದ ಪ್ರಮುಖ ಆರೋಪಿ ಅಯಾಝ್ ಎಂಬಾತನನ್ನು ಆತನ ಸಹೋದರ ಪೊಲೀಸರಲ್ಲಿ ಬಲ ಪ್ರಯೋಗಿಸಿ ಬಿಡಿಸಿರುವುದಾಗಿ ಆರೋಪಿಸಲಾಗಿದೆ. ಬಳಿಕ ಹೆಚ್ಚಿನ ಪೊಲೀಸರು ಸ್ಥಳಕ್ಕಾಗಮಿಸಿ ಆಟೋ ರಿಕ್ಷಾದಲ್ಲಿದ್ದ ಇಬ್ಬರನ್ನು ಹಾಗೂ ಆಯಾಝ್ ನ ಸಹೋದರನನ್ನು ಬಂಧಿಸಿದ್ದಾರೆ.

ಮಂಜೇಶ್ವರ ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿದ ಬಾಲಕ ಆಶಿಲ್

ಬಾಲಕನಿಗೆ ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಬೇಕೆಂಬ ಮಹದಾಸೆಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಜನಕೀಯ ಪೊಲೀಸರು ಈಡೇರಿಸಿದ್ದಾರೆ. ವರ್ಕಾಡಿಯ ಅಝೀಝ್ ಕಲ್ಲೂರು ಹಾಗೂ ಆರಿಫಾ ದಂಪತಿಯ ಪುತ್ರನಾಗಿರುವ ಈತ. ವರ್ಕಾಡಿ ಧರ್ಮನಗರ ಮಣವಾಠಿ ಬೀವಿ ಆಂಗ್ಲಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿ ಆಶೀಲ್ ತನ್ನ 6ನೇ ವರ್ಷದ ಹುಟ್ಟುಹಬ್ಬವನ್ನು ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ ಕೇಕ್ ತುಂಡರಿಸಿ, ಸಿಹಿತಿಂಡಿ ಹಂಚಿ ಆಚರಿಸಿದನು. ತನ್ನ ಹುಟ್ಟುಹಬ್ಬವನ್ನು

ಮಂಜೇಶ್ವರ : ಜ್ವಲಂತ ಸಮಸ್ಯೆಗಳಿಗೆ ಕಿವಿಕೊಡದ ಅಧಿಕಾರಿಗಳು

ಮಂಜೇಶ್ವರ :ರಾಷ್ಟೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಅವೈಜ್ಞಾನಿಕ ನಿರ್ಮಾಣ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ಮಂಜೇಶ್ವರದ ಕೂಗಿಗೆ ಕಿಂಚತ್ತೂ ಬೆಲೆಯನ್ನು ಕಲ್ಪಿಸದ ಅಧಿಕಾರಿಗಳ, ಜನಪ್ರತಿನಿಧಿಗಳ ಕಣ್ಣು ಮುಚ್ಚಾಲೆಯಾಟದಿಂದ ಬೇಸೆತ್ತಿರುವ ಮಂಜೇಶ್ವರದ ಸಮಾನ ಮನಸ್ಕರು ಸೇರಿ ಕೊಂಡು ಹೊಸಂಗಡಿಯ ವ್ಯಾಪಾರಿ ಭವಣದಲ್ಲಿ ಮಂಜೇಶ್ವರ ನಾಗರಿಕ ಹಿತರಕ್ಷಣಾ ವೇದಿಕೆ ಎಂಬ ಹೆಸರಿನಲ್ಲಿ ನೂತನ ಸಂಘಟನೆಯೊಂದಕ್ಕೆ ರೂಪು ನೀಡಿದ್ದಾರೆ. ಈಗಾಗಲೇ ಮಂಜೇಶ್ವರ ರೈಲು ನಿಲ್ದಾಣ

ಅವಕಾಶಗಳ ಆಕಾಶವೇ ನಮ್ಮ ಮುಂದಿದೆ : ನಟ ಪ್ರಕಾಶ್ ತೂಮಿನಾಡು

ವಿದ್ಯೆಯೂ ಕಲೆಯೂ ಜೊತೆ ಜೊತೆಯಾಗಿ ಸಾಗಲಿ. ಇಂದು ಅವಕಾಶಗಳ ಆಕಾಶವೇ ನಮ್ಮ ಮುಂದಿದೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು’ಎಂಬುದಾಗಿ ರಂಗಭೂಮಿ ಕಲಾವಿದ,ಚಲನಚಿತ್ರ ನಟ ಶ್ರೀ ಪ್ರಕಾಶ್ ತೂಮಿನಾಡು ನುಡಿದರು.ಅವರು ಮಂಜೇಶ್ವರ ಉಪಜಿಲ್ಲಾಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ 2022-23ನೇ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳನ್ನು ಜಿ.ವಿ.ಎಚ್.ಎಸ್.ಎಸ್.ಕುಂಜತ್ತೂರು ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ

ಫೈಟಿಂಗ್ ಕಾರ್ಮಿಕನಿಗೆ 1 ಕೋಟಿ ರೂ. ಅದೃಷ್ಟ ಬಹುಮಾನ

ಮಂಜೇಶ್ವರ ಪಾವೂರು ಗೇರುಕಟ್ಟೆ ನಿವಾಸಿ ಪೈಂಟರ್ ಬಾವ ಎಂದೇ ಪರಿಚಿತರಾಗಿರುವ ಮೊಹಮ್ಮದ್ ಎಂಬವರಿಗೆ 1 ಕೋ.ರೂ. ಕೇರಳ ರಾಜ್ಯಲಾಟರಿ ಒಲಿದಿದೆ. ಡ್ರಾ ಆಗುವ ತಾಸುಗಳ ಮೊದಲು ಟಿಕೇಟ್ ತೆಗೆದ ಅದೃಷ್ಟವಂತನಾಗಿದ್ದಾನೆ. ಈತನಿಗೆ 5 ಮಕ್ಕಳ ಪೈಕಿ 2 ಮಕ್ಕಳನ್ನು ಮದುವೆ ಮಾಡಿಸಿ ಕೊಟ್ಟ ಬಳಿಕ 50ಲಕ್ಷ ರೂ. ಗಿಂತಲೂ ಮಿಕ್ಕ ಸಾಲದಲ್ಲಿ ಮುಳುಗಿ ಇದ್ದ ಮನೆಯನ್ನು ಕೂಡಾ ಮಾರಿ ಇನ್ನು ಮುಂದಕ್ಕೆ ಏನೆಂದು ತಿಳಿಯದೆ ಕೂತಿರುವಾಗ ದೇವರು ನನಗೆ ನೀಡಿದ

ಮಂಜೇಶ್ವರದಲ್ಲಿ ಭಾರೀ ಮಳೆಯ ಅವಾಂತರ : ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜಲಾವೃತ

ಮಂಜೇಶ್ವರದದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಮಂಜೇಶ್ವರ ಗ್ರಾ.ಪಂ.ನ 13ನೇ ವಾರ್ಡ್ ವಾಮಂಜೂರು ಕಜೆಯ ಕೊಪ್ಪಳ ಪ್ರದೇಶದಲ್ಲಿ ಕಳೆ ಎರಡು-ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಪರಿಸರದ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಈ ಪರಿಸರದಲ್ಲಿ ಉಪ್ಪಳ ಹೊಳೆ ತುಂಬಿ ಹರಿಯುತ್ತಿದ್ದು, ಹೊಳೆ ಸಂಗಮಿಸುವ ಪರಿಸರದ ಅನೇಕ ಹಳ್ಳ, ತೊರೆಗಳು ನೀರು ತುಂಬಿ ಮನೆಗಳನ್ನು ಆಕ್ರಮಿಸಿ, ಮನೆಗಳಿಗೆ ನೀರು ನುಗ್ಗಿದೆ. ಪರಿಸರದಲ್ಲಿ 20ರಷ್ಟು

ಹೊಸ ವೈರಸ್ ಪ್ರಬೇಧ ಪತ್ತೆ ಹಿನ್ನೆಲೆ : ಕೇರಳ-ಕರ್ನಾಟಕ ಗಡಿಯಲ್ಲಿ ಮತ್ತೆ ತಪಾಸಣೆ ಬಿಗಿ

  ಮಂಜೇಶ್ವರ: ಹೊಸ ವ್ಯೆರಸ್ ಪ್ರಬೇಧ ಓಮಿಕ್ರಾಮ್ ಭೀತಿಯ ನಡುವೆ ಕರ್ನಾಟಕ ಬಿಗು ನಿಯಂತ್ರಣ ಹೇರಿದ್ದು, ಅಂತರ್ ರಾಜ್ಯ ಗಡಿಗಳಲ್ಲಿ ಕಠಿಣ ತಪಾಸಣೆ ಬಿಗಿಗೊಳಿಸಿದೆ. ಕರ್ನಾಟಕ ಸರ್ಕಾರ ತುಸು ಹೆಚ್ಚೇ ಕಾಳಜಿ ವಹಿಸತೊಡಗಿದ್ದು, ಗಲಿಬಿಲಿಗೊಳಗಾದಂತೆ ಕಂಡುಬಂದಿದೆ. ಜೊತೆಗೆ ದಕ್ಷಿಣ ಕನ್ನಡ ಸಹಿತ ಅಂತರ್ ರಾಜ್ಯ ಗಡಿಗಳಲ್ಲಿ ನಿಗಾ ವಹಿಸಲು ಸೂಚಿಸಲಾಗಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ತಲಪಾಡಿ ಗಡಿಯಲ್ಲಿ ಕೇರಳದ ಕಡೆಯಿಂದ ಆಗಮಿಸುವ ವಾಹನ ಸಂಚಾರಕ್ಕೆ

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಸಿಪಿಐಎಂ ರಾಜ್ಯ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ಸಿಪಿಐಎಂ ರಾಜ್ಯ ಸಮಿತಿ ತೀರ್ಮಾನ ಪ್ರಕಾರ ಕೇರಳ ಎಲ್ಲಾ ಏರಿಯಾ ಕೇಂದ್ರಗಳಲ್ಲಿ ಪೆಟ್ರೋಲ್ ಡಿಸೇಲ್ ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಉಪ್ಪಳ ಪೋಸ್ಟ್ ಆಫೀಸ್ ಎದುರುಗಡೆ ಧರಣಿ ಹಮ್ಮಿಕೊಳಲಾಯಿತು. ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕಾಂ ಕೆ ವಿ ಕುಂಞಿಹಿರಾಮನ್ ಧರಣಿ ಉದ್ಘಾಟಿಸಿದರು. ಅಬ್ದುಲ್ ರಝಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದ್ದರು.