ಇಂಗ್ಲೆಂಡಿನಲ್ಲಿ ಭಾರತೀಯನ ಸಾವು : ಕೊಲೆ ನಡೆಯಿತೇ, ಅಪಘಾತವೇ?
ಲಂಡನ್ : ಇಂಗ್ಲೆಂಡಿನಲ್ಲಿ ಭಾರತೀಯ ಮೂಲದ 36ರ ವಿಘ್ನೇಶ್ ಪಟ್ಟಾಭಿರಾಮನ್ ಎಂಬವರ ಸಾವು ಆಗಿದೆ. ಸೈಕಲಿನಲ್ಲಿ ಮನೆಗೆ ಹೋಗುವಾಗ ಅಪಘಾತವಾಗಿ ಸಾವಾಗಿದೆ ಎಂದು ಒಂದು ವರದಿ ಹೇಳಿದರೆ ಇನ್ನೊಂದು ಅದು ಕೊಲೆ ಎಂದು ವರದಿ ಮಾಡಿದೆ.
ಬ್ರಿಟನ್ನಿನ ವೆಲ್ ರೀಡಿಂಗ್‌ನಲ್ಲಿ ಹೋಟೆಲೊಂದರ ಮ್ಯಾನೇಜರ್ ಆಗಿ ವಿಘ್ನೇಶ್ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಹೋಗುವಾಗ ಹೋಟೆಲಿಗೆ ಹತ್ತಿರದ ಪ್ಲೇಸ್ ಜಂಕ್ಷನ್‌ನಲ್ಲಿ ಸೈಕಲಿನಿಂದ ಅವರು ಬಿದ್ದು ಮೃತರಾಗಿದ್ದಾರೆ. ಬೀಳಲು ಅಪಘಾತ ಕಾರಣ ಎನ್ನಲಾಗಿದ್ದರೂ ವಿಷಯ ಸ್ಪಷ್ಟವಾಗಿಲ್ಲ. ಈ ಸಂಬಂಧ ಥೇಮ್ಸ್ ವ್ಯಾಲಿ ಪೋಲೀಸರು ಆರು ಜನರನ್ನು ವಿಚಾರಣೆಗೆ ಒಳಪಡಿಸಿದರಾದರೂ ಸ್ಪಷ್ಟ ಕಾರಣ ಕಾಣದ್ದರಿಂದ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.]