Home Posts tagged #padubidre (Page 3)

ಕಟಪಾಡಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತಯಾಚನೆ

ಕಾಪು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಜೊತೆಗಿದ್ದರು.

ಪಡುಬಿದ್ರಿ : ಗದ್ದೆಗೆ ಬೆಂಕಿ

ಪಡುಬಿದ್ರಿ ಸೇತುವೆ ಬಳಿ ಗದ್ದೆಗೆ ರಾತ್ರಿ ಬೆಂಕಿ ಬಿದ್ದ ಪರಿಣಾಮ ಬಹಳಷ್ಟು ತಾಳೆ ಮರಗಳು ಬೆಂಕಿಗಾಹುತಿಯಾಗಿದೆ.ಸುಮಾರು ಎರಡು ಗಂಟೆಗಳ ಕಾಲ ಬೆಂಕಿ ಉರಿಯುತ್ತಿದ್ದರೂ ಯಾವುದೇ ಅಗ್ನಿ ಶಾಮಕ ದಳವಾಗಲಿ, ಯಾವುದೇ ಅಧಿಕಾರಿಗಳಾಗಲಿ ಹತ್ತಿರ ಸುಳಿದಿಲ್ಲ. ಹೆದ್ದಾರಿ ಪ್ರಯಾಣಿಕರು ತಮ್ಮ ವಾಹನಗಳನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ಉರಿಯುತ್ತಿರುವ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡುವುದು ಬಿಟ್ಟರೆ ಅವರು ಅಸಹಾಯಕರಾಗಿದ್ದರು., ಪಕ್ಕದಲ್ಲೇ ವಿದ್ಯುತ್ ಕಂಬಗಳಿದ್ದು

ನನಗೆ ಗೆಲುವಿನೊಂದಿಗೆ ವಿದಾಯ ಹೇಳಿ ಸೋಲಿನೊಂದಿಗೆ ಬೇಡ
: ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಮನವಿ

ನನ್ನ ಕೊನೆಯ ಚುನಾವಣೆ ಇದಾಗಿದ್ದು, ಕ್ಷೇತ್ರದ ಜನತೆ ನನಗೆ ಗೆಲುವಿನ ವಿದಾಯ ಹೇಳಿ.. ಸೋಲಿನೊಂದಿಗೆ ಬೇಡ ಎಂಬುದಾಗಿ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ. ಕಾಪುವಿನಲ್ಲಿ ಅವರು ನಡೆಸಿದ ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚುನಾವಣೆಯೆ ನಾನು ನನ್ನ ಅಂತಿಮ ಚುನಾವಣೆ ಎಂದಿದ್ದೆ..ಆದರೆ ನಮ್ಮ ಅತೀಯಾದ ಆತ್ಮವಿಶ್ವಾಸ ನಮಗೆ ಮುಳುವಾಗಿ ನಾನು ಸೋಲು ಕಂಡಿದ್ದೆ. ಸೊಲು ಕಂಡರೂ ನಾನು ಎಲ್ಲೊ ದೂರದ

ಜಾಹಿರಾತು ಫಲಕ ತೆರವು ನಡೆಸದ ನವಯುಗ್ ಕಂಪನಿಗೆ ಕೋಟಿ ಮೊತ್ತದ ದಂಡ

ಹೆದ್ದಾರಿ ಅಂಚಿನಲ್ಲಿರುವ ಜಾಹಿರಾತು ಫಲಕಗಳನ್ನು ತೆರವುಗೊಳಿಸಲು ಮೀನಮೇಷ ಎಣಿಸುತ್ತಿದ್ದ ನವಯುಗ್ ಕಂಪನಿಗೆ ಹೆದ್ದಾರಿ ಇಲಾಖಾ ಅಧಿಕಾರಿಗಳು ಕೋಟಿ ಮೊತ್ತದಲ್ಲಿ ದಂಡ ವಿಧಿಸಿದ್ದಾರೆ. ಡೆಲ್ಲಿಯಿಂದ ಪರಿಶೀಲನೆಗೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಆರ್.ಓ. ವಿವೇಕ್ ಜೈಸ್ವಾಲ್ ಪರಿಶೀಲಿಸಿ ಹೆದ್ದಾರಿ ಅಂಚಿನಲ್ಲಿ ಬೇಕಾಬಿಟ್ಟಿ ಜಾಹೀರಾತು ಫಲಕಗಳನ್ನು ಗಮನಿಸಿ ಈ ದಂಡ ವಿಧಿಸಿ ತಕ್ಷಣದಿಂದಲೇ ಅದನ್ನು ತೆರವುಗೊಳಿಸುವಂತೆ ಆದೇಶಿಸಿದ್ದಾರೆ. ಅವರ ಆದೇಶಕ್ಕೆ ಬೆದರಿದ

ವಿವಿಧ ಬೇಡಿಕೆಗೆ ಆಗ್ರಹಿಸಿ ಪಡುಬಿದ್ರಿ ರೈಲು ನಿಲ್ದಾಣಕ್ಕೆ ಸಾರ್ವಜನಿಕರ ಮುತ್ತಿಗೆ

ತಡೆ ರಹಿತ ರೈಲು ನಿಲುಗಡೆ, ಅಂಡರ್ ಪಾಸ್ ವ್ಯವಸ್ಥೆ, ಪಕ್ಕದ ರಸ್ತೆ ದುರಸ್ಥಿ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಪ್ರತಿಭಟನಾಗಾರರು ತಪ್ಪಿದ್ದಲ್ಲಿ ರೈಲು ರೋಕೋ ನಡೆಸುವ ಎಚ್ಚರಿಕೆ ನೀಡಿದ್ದಾರೆ.ಬೆಳಪು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಹ ಸಹಿತ ಸುತ್ತಲ ಗ್ರಾಮದ ನೂರಾರು ಮಂದಿ ಪುರುಷರು ಮಹಿಳೆಯರು ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಬೆಳಪು ದೇವಿಪ್ರಸಾದ್

ಎರಡು ತಂಡಗಳ ಮಧ್ಯೆ ಹೊಡೆದಾಟ ದೂರು ಪ್ರತಿದೂರು

ಎರಡು ಯುವಕರ ತಂಡಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದ ಹೊಡೆದಾಟ ಮುಂದುವರಿದು ಒಂದು ತಂಡದಿಂದ ಜಾತಿ ನಿಂದನೆ ಪ್ರಕರಣ ದಾಖಲಾದರೆ ಮತ್ತೊಂದು ತಂಡ ಜೀವ ಬೆದರಿಕೆ ಪ್ರಕರಣ ದಾಖಲಿಸಿದೆ. ಸುಜ್ಲಾನ್ ಆರ್.ಆರ್. ಕಾಲೋನಿ ನಿವಾಸಿ ಉಮಾನಾಥ್ ಕೆ.ಆರ್. ಎಂಬವರ ಪುತ್ರ ಶಿವಪ್ರಕಾಶ್(19) ಎಂಬವರು ನೀಡಿದ ದೂರಿನಂತೆ ಆರೋಪಿಗಳಾದ ವಸಂತ್, ಬಾಲಕೃಷ್ಣ, ದಿವಾಕರ ಹಾಗೂ ರಾಕೇಶ್ ಎಂಬವರು, ಪರಿಶಿಷ್ಟ ಜಾತಿಗೆ ಸೇರಿದ ನಾನು ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ನಡೆದ ಢಕ್ಕೆ ಬಲಿಗೆ

ಪಡುಬಿದ್ರಿ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ : ಗಂಡನಿಗೆ ಮಾ.10ರ ವರಗೆ ನ್ಯಾಯಾಂಗ ಬಂಧನ

ಗೃಹಿಣಿಯೊರ್ವರು ತನ್ನ ವಾಸದ ಮನೆಯ ಅಡುಗೆ ಕೋಣೆಯಲ್ಲಿ ಶಾಲಿನಿಂದ ನೇಣು ಹಾಕಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನ್ಯಾಯಾಲಯ ಆರೋಪಿ ಗಂಡನಿಗೆ ಮಾ.10ರ ವರಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆತ್ಮಹತ್ಯೆಗೆ ಶರಣಾದ ಗೃಹಿಣಿ ಪಡುಬಿದ್ರಿ ಕೆಳಗಿನ ಪೇಟೆ ನಿವಾಸಿ ಚೇತನ್ ಎಂಬಾತನ ಪತ್ನಿ ಮಮತ(43), ಎಂಟು ವರ್ಷದ ಒಂದು ಹೆಣ್ಣು ಮಗು ಹಾಗೂ ಹನ್ನೆರಡು ವರ್ಷದ ಗಂಡು ಮಗನನ್ನು ಹೊಂದಿದ್ದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಅಡುಗೆ ಕೋಣೆಯಲ್ಲಿ ಪತ್ತೆಯಾಗಿದ್ದು, ಬಳಿಕ ಪೊಲೀಸ್

ಪಡುಬಿದ್ರಿ: ಮಾನಸಿಕವಾಗಿ ನೊಂದ ವ್ಯಕ್ತಿ ನೇಣಿಗೆ ಶರಣು

ಪಡುಬಿದ್ರಿ: ಮಾನಸಿಕವಾಗಿ ನೊಂದ ವ್ಯಕ್ತಿ ನೇಣಿಗೆ ಶರಣಪತ್ನಿಯನ್ನು ಕಳೆದುಕೊಂಡ ಬಳಿಕ ಕಿನ್ನತೆ ಅನುಭವಿಸುತ್ತಿದ್ದ ವ್ಯಕ್ತಿಯೊರ್ವರು ತನ್ನ ವಾಸದ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಅವರಾಲು ಮಟ್ಟುವಿನಲ್ಲಿ ಘಟಿಸಿದೆ.ಮೃತ ವ್ಯಕ್ತಿ ಅವರಾಲು ಮಟ್ಟು ಕರಿಯ ಹೌಸ್ ನಿವಾಸಿ ಅಶೋಕ್ ಪೂಜಾರಿ (48), ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು ಇವರಿಗೆ ಇಬ್ಬರು ಮಕ್ಕಳು, ಪತ್ನಿ ಕಳೆದ ನಾಲ್ಕು ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆತ್ಮಹತ್ಯೆ

ಪಾದಚಾರಿಗೆ ಬೈಕ್ ಢಿಕ್ಕಿ, ಗಾಯಾಳು ಆಸ್ಪತ್ರೆಯಲ್ಲಿ ಮೃತ್ಯು

ಎರ್ಮಾಳು ಕಲ್ಯಾಣ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾದಚಾರಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಆಸ್ಪತ್ರೆಯಲ್ಲಿ ಮೃತ್ತ ಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.ಮೃತ್ತ ವ್ಯಕ್ತಿಯನ್ನು ಉತ್ತರ ಕನ್ನಡ ಮೂಲದ 46 ವರ್ಷದ ದೇವಪ್ಪ ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ತಡರಾತ್ರಿ 12 ಗಂಟೆಗೆ ಮೃತ್ತ ಪಟ್ಟಿದ್ದಾಗಿ ಪೊಲೀಸ್ಸ್ ಮೂಲಗಳು ತಿಳಿಸಿದೆ.

ಪಡುಬಿದ್ರೆ – ಗ್ಯಾಸ್ ಪೈಪ್ ಅಳವಡಿಕೆಯಲ್ಲಿ ತಾರತಮ್ಯ : ಬಡವರ ಕಟ್ಟಡ ಧ್ವಂಸ

ಯಾವುದೇ ರೀತಿಯಲ್ಲಿ ಕರುಣೆ ತೋರಿಸದೆ ಹೆದ್ದಾರಿ ಇಕ್ಕೆಲಗಳಲ್ಲಿ ಗ್ಯಾಸ್ ಪೈಪ್ ಅಳವಡಿಸುತ್ತಿರುವ ಗುತ್ತಿಗೆದಾರ ಬಡಪಾಯಿಗಳ ಕಟ್ಟಡಕ್ಕೆ ಜೆಸಿಬಿ ಹತ್ತಿಸಿ ದ್ವಂಸ ನಡೆಸಿದ್ದು, ಇದೀಗ ಸಿರಿವಂತರ ಮೇಲಿನ ಕರುಣೆಯಿಂದಾಗ ಹೆದ್ದಾರಿಗೆ ಅತೀ ಸಮೀಪ ವಿರುವ ಮನೆಗಳನ್ನು ಉಳಿಸಲು ಭೂಗತ ಪೈಪ್ ಲೈನ್ ನಡೆಸಲು ಸಿದ್ದತೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಈ ಕಾಮಗಾರಿಯಿಂದ ತೊಂದರೆ ಅನುಭವಿಸಿದ ಸಂತ್ರಸ್ತರು, ಹೆದ್ದಾರಿಗೆ ಬಹಳ ದೂರವಿದ್ದರೂ ಬಡಪಾಯಿಗಳಾದ ನಮ್ಮ