ಬಂಟ್ವಾಳ ತಾಲೂಕಿನ ಬಹುತೇಕ ಭಾಗಗಳಲ್ಲಿ ರಸ್ತೆ ಇಕ್ಕೆಲಗಳು, ಇಳಿಜಾರು ಗುಂಡಿಗಳು ಕಸ ಎಸೆಯುವ ತಾಣಗಳಾಗುತ್ತಿದೆ. ಕೊಳೆಯುವ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ವಾಹನಗಳಲ್ಲಿ ಬಂದು ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗುವ ಅನಾಗರಿಕ ಪ್ರವೃತ್ತಿ ಹೆಚ್ಚಾಗುತ್ತಿದೆ. ಮನೆ, ಅಂಗಡಿಗಳ ತ್ಯಾಜ್ಯಗಳು ರಸ್ತೆ ಬದಿಗಳಲ್ಲಿ ಎಸೆಯುತ್ತಿರುವ ಪರಿಣಾಮ ಸುತ್ತಮುತ್ತಲ
ಬಂಟ್ವಾಳ: ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಪಾಣೆಮಂಗಳೂರಿನ ಹಳೆ ಉಕ್ಕಿನ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.ಸ್ಥಳೀಯರೊಬ್ಬರು ಭಾನುವಾರ ರಾತ್ರಿ ಸೇತುವೆಯಲ್ಲಿ ಬಿರುಕನ್ನು ಗಮನಿಸಿ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘನ ವಾಹನಗಳು ಸೇತುವೆಯಲ್ಲಿ ಸಂಚರಿಸದಂತೆ ನಿರ್ಭಂದ ವಿಧಿಸಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾಣೆಮಂಗಳೂರಿನ ಹಳೆಯ ಉಕ್ಕಿನ ಸೇತುವೆ 1914ರಲ್ಲಿ