Home Posts tagged sand art

ಪಣಂಬೂರು ಬೀಚ್‌ನಲ್ಲಿ ಮರಳಿನಲ್ಲಿ ಸಾಂತಾಕ್ಲಾಸ್ ರಚನೆ

ಕ್ರಿಸ್ಮಸ್ ಆಚರಣೆಯ ಪ್ರಯುಕ್ತ ಮರಳು ಶಿಲ್ಪಕಲಾವಿದರು ಪಣಂಬೂರು ಬೀಚ್‌ನಲ್ಲಿ ಮರಳಿನಲ್ಲಿ ಸಾಂತಾಕ್ಲಾಸ್ ರಚಿಸಿ ಗಮನ ಸೆಳೆದಿದ್ದಾರೆ. ಮರಳು ಶಿಲ್ಪ ಕಲಾವಿದರಾದ ಪ್ರಸಾದ್ ಮಲ್ಯ ಸುರತ್ಕಲ್, ಪ್ರಣಮ್ ದೇವಾಡಿಗ ಉಡುಪಿ ಅವರು ಮರಳಿನಲ್ಲಿ ಸಾಂತಾಕ್ಲಾಸ್ ರಚಿಸಿ ಪ್ರವಾಸಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಉಳ್ಳಾಲ ಬೀಚ್‌ನಲ್ಲಿ ಮರಳಿನ ಆಕೃತಿ ಮೂಲಕ ಮತದಾನ ಜಾಗೃತಿ

ಉಳ್ಳಾಲ ಬೀಚ್‌ನಲ್ಲಿ ತಾಲೂಕು ಪಂಚಾಯತ್ ಉಳ್ಳಾಲ ಹಾಗೂ ಉಳ್ಳಾಲ ನಗರ ಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್, ಸೋಮೆಶ್ವರ ಪುರಸಭೆ ಸಹಭಾಗಿತ್ವದಲ್ಲಿ ಮರಳು ಆಕೃತಿ ಜತೆಗೆ ಮೇಣದ ಬತ್ತಿ ಬೆಳಗುವ ಮೂಲಕ ಮತದಾನ ಜಾಗೃತಿ ಸಭೆ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಶೀನಶೆಟ್ಟಿ ಹಾಗೂ ಕೃಷ್ಣಪ್ಪ ಮೂಲ್ಯರು ನೆರೆದಿದ್ದವರಿಂದ ಮತದಾನ ಘೋಷಣೆ ಮೊಳಗಿಸಿದರು. ನಂತರ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಮಾನ್ಯ ಮುಖ್ಯ