ತೆಲಂಗಾಣದ ಎರಡನೆಯ ಮುಖ್ಯಮಂತ್ರಿ ಎನುಮುಲ ರೇವಂತ್ ರೆಡ್ಡಿ ಅಧಿಕಾರ ಸ್ವೀಕಾರ

ತೆಲಂಗಾಣ ರಾಜ್ಯವಾದ ಬಳಿಕ ಕಾಂಗ್ರೆಸ್ ಪಕ್ಷದ ಮೊದಲ ಮತ್ತು ಆ ರಾಜ್ಯದ ಎರಡನೆಯ ಮುಖ್ಯಮಂತ್ರಿಯಾಗಿ ಎನುಮುಲ ರೇವಂತ್ ರೆಡ್ಡಿಯವರು ಉಪ ಮುಖ್ಯಮಂತ್ರಿ ಮತ್ತು 11 ಮಂತ್ರಿಗಳ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು. ಲಾಲ್ ಬಹದೂರ್ ಶಾಸ್ತ್ರಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧಿಸಿದರು.

ತೆಲಂಗಾಣದ ಉಪ ಮುಖ್ಯಮಂತ್ರಿಯಾಗಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಅಧಿಕಾರದ ದೀಕ್ಷೆ ತೆಗೆದುಕೊಂಡರು. ಎನ್. ಉತ್ತಮ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟರೆಡ್ಡಿ, ಪೊನ್ನಂ ಪ್ರಭಾಕರ್, ದಾಸರಿ ಅನಸೂಯ, ದಾಮೋದರ್ ರಾಜ ನರಸಿಂಹ, ಡಿ. ಶ್ರೀಧರಬಾಬು, ತುಮ್ಮಲ ನಾಗೇಶ್ವರರಾವ್, ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, ಕೊಂಡ ಸುರೇಖ, ಜೂಪಲ್ಲಿ ಕೃಷ್ಣರಾವ್ ಎಂದು ಹತ್ತು ಮಂದಿ ಮಂತ್ರಿಗಳಾಗಿ ಪ್ರಮಾಣವಚನ ತೆಗೆದುಕೊಂಡರು.ಕೊಂಡ ಸುರೇಖ ಒಬ್ಬರು ಮಾತ್ರ ಈ ಡಜನ್ ಸಂಪುಟದ ಮಹಿಳೆಯಾಗಿರುವರು.

Related Posts

Leave a Reply

Your email address will not be published.