ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ, ಅಭಿವೃದ್ಧಿ ಸಮಿತಿ ಮತ್ತು ಗುರು ಮಂದಿರ ನಿರ್ಮಾಣ ಸಮಿತಿ, ಎಸ್. ಕೋಡಿ, ತೋಕೂರು ಇದರ ಸಹಭಾಗಿತ್ವದಲ್ಲಿ ಸಪ್ಟೆಂಬರ್ 7,.2025 ರಂದು ನೆರವೇರಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆಯ ಪ್ರಯುಕ್ತ ಸ್ಥಳೀಯ
ತೋಕೂರು: ಮೂಲ್ಕಿ ಹೋಬಳಿ ಒಂಬತ್ತು ಮಾಗಣೆ ಮುಂಡಾಲ ಸಮಾಜ ಸೇವಾ ಟ್ರಸ್ಟ್ (ರಿ) ಓಂಕಾರೇಶ್ವರಿನಗರ 10ನೇ ತೋಕೂರು, ಹಳೆಯಂಗಡಿ ಇದರ ಪ್ರಾಯೋಜಕತ್ವದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು, ಓಂಕಾರೇಶ್ವರಿ ಮಂದಿರ ತೋಕೂರು ಮತ್ತು ಅರಣ್ಯ ಇಲಾಖೆ ಮೂಡಬಿದ್ರಿ ಇವರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಮತ್ತು ಉಚಿತ ಸಸಿ ವಿತರಣಾ ಕಾರ್ಯಕ್ರಮವನ್ನು ಶ್ರೀ ಓಂಕಾರೇಶ್ವ ರೀ ಮಂದಿರದ ಅಧ್ಯಕ್ಷರಾದ ಶ್ರೀ ಸದಾಶಿವ ಟಿ ಕುಂದರ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು,
ಜೀವನದಲ್ಲಿ ಉತ್ತಮವಾಗಿ ಬದುಕುವುದೇ ಧರ್ಮ. ಪ್ರತಿಯೊಂದು ಜೀವರಾಶಿಗೂ ಬದುಕುವ ಹಕ್ಕು ಇದೆ. ಧರ್ಮ ಮತ್ತು ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದ ನಡೆಯಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಧಾನದ ಅಷ್ಟಬಂಧ ಬ್ರಹ್ಮಕುಂಭಾಭೀಷೇಕದ ಅಂಗವಾಗಿ ಸ್ಕಂದ ಮಂಟಪದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು ಇಂದಿನ ಯುಗದಲ್ಲಿ ಸಂಸ್ಕಾರವನ್ನು
ಧಾರ್ಮಿಕ ಕ್ಷೇತ್ರಗಳ ಮೂಲಕ ಧರ್ಮದ ಜಾಗೃತಿ ನಡೆಯಬೇಕು, ಭಕ್ತಿಯ ಆಲಯಗಳಲ್ಲಿ ಭಕ್ತರ ನಿಸ್ವಾರ್ಥ ಸೇವಾ ಸಂಪನ್ನತೆ ಹೆಚ್ಚಾದಾಗ ಕ್ಷೇತ್ರ ಬೆಳಗುತ್ತದೆ. ನಮ್ಮ ಹಿಂದೂ ಸಂಸ್ಕೃತಿ ಪ್ರತೀ ಮನೆಯಿಂದ ಬೆಳಗಿದಲ್ಲಿ ಅದು ಜಗತ್ತಿಗೆ ಬೆಳಕಾಗುತ್ತದೆ ಎಂದು ಉಡುಪಿ ಅಧೋಕ್ಷಜ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠೆ ಬ್ರಹ್ಮಕುಂಭಾಷೇಕ ಮತ್ತು ನಾಗಮಂಡಲೋತ್ಸವದ ಪ್ರಯುಕ್ತ