ಅನಿವಾಸಿ ಯುವ ಪೀಳಿಗೆ ಕನ್ನಡ ಸಾಕ್ಷರತೆಯನ್ನು ಸಾರುವ ಕನ್ನಡ ಸಾಕ್ಷರತೆಯ ಮಹಾ ಅಭಿಯಾನವನ್ನು ಆರಂಭಿಸಿ, ಜಾಗತಿಕ ಕನ್ನಡ ಕಲಿಕಾ ಚಳುವಳಿಯ ಹರಿಕಾರ ಎಂದು ಪ್ರಖ್ಯಾತರಾಗಿರುವ ಶಶಿಧರ್ ನಾಗರಾಜಪ್ಪ ಮತ್ತು ಅವರ ತಂಡವನ್ನು ದುಬೈ ಗಡಿನಾಡ ಉತ್ಸವ -2025 ರಲ್ಲಿ ಪುರಸ್ಕರಿಸಿ ಗೌರವಿಸಲಾಯಿತು. ದುಬೈ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ {ರಿ }ಯುಎಇ ಘಟಕ ಮತ್ತು ಗಡಿ
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಶಮಾನೋತ್ಸವ ಕಾರ್ಯಕ್ರಮವು 2025 ಜೂನ್ 29 ರಂದು ದುಬೈ ಯ ಶೇಖ್ ರಾಶೀದ್ ಆಡಿಟೋರಿಯಂ ನಲ್ಲಿ ಜರಗಲಿದ್ದು “ದುಬೈ ಯಕ್ಷೋತ್ಸವ -2025” ಕಾರ್ಯಕ್ರಮದ ಪೂರ್ವ ತಯಾರಿ ಶುಭಾರಂಭ ಪ್ರಯುಕ್ತ ಮುಹೂರ್ತ ಪೂಜಾ ಸಮಾರಂಭವು ಇತ್ತೀಚೆಗೆ ನಗರದ ಫಾರ್ಚೂನ್ ಪ್ಲಾಝದ ಬಾಂಕ್ವೆಟ್ ಸಭಾಂಗಣದಲ್ಲಿ ೫ರಂದು ನಡೆಯಿತು. ಶ್ರೀಯುತ ಲಕ್ಷ್ಮಿಕಾಂತ್ ಭಟ್ ಮತ್ತು ಸಂತೋಷ್ ರಾವ್ ರವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಆಚರಣೆ ಮತ್ತು ಸಭಾ




















