ಹೈಕೋರ್ಟ್ ಜಡ್ಜ್ ವಿಶ್ವಜಿತ್ ಶೆಟ್ಟಿ ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದ ವತಿಯಿಂದ ಪೂರ್ಣ ಕುಂಭದೊಂದಿಗೆ ಬರಮಾಡಿಕೊಳ್ಳಲಾಯಿತು. ನಾಡೋಜ ಡಾ. ಜಿ. ಶಂಕರ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಶ್ರೀ ಗಿರಿಧರ್ ಸುವರ್ಣ, ಶ್ರೀ ಮನೋಹರ್ ಶೆಟ್ಟಿ ’ ಸಾಯಿರಾಧ’, ಸಂತೋಷ್ ಶೆಟ್ಟಿ
ಉಡುಪಿ ಉಚ್ಚಿಲ ದಸರಾ 2024ರ ಪ್ರಯುಕ್ತ ನಡೆಯಲಿರುವ ಯುವ ನೃತ್ಯೋತ್ಸವದ ಆಡಿಷನ್ ರೌಂಡ್ ಸೆ.22ರಂದು ಮಧ್ಯಾಹ್ನ 3ರಿಂದ 6 ಗಂಟೆಯವರೆಗೆ ಉಚ್ಚಿಲದ ಮೊಗವೀರ ಭವನದಲ್ಲಿ ನಡೆಯಲಿದೆ. ಆಡಿಷನ್ ಸುತ್ತಿನ ಸ್ಪರ್ಧಾ ನಿಯಮಗಳು :1. ಒಂದು ನೃತ್ಯ ತಂಡದಲ್ಲಿ ಕನಿಷ್ಠ 5 ಜನ ಇರತಕ್ಕದ್ದು.2. ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.3. ಒಂದು ತಂಡಕ್ಕೆ 5 ನಿಮಿಷ (4+1)ದ ಸಮಯಾವಕಾಶ ಮಾತ್ರ ನೀಡಲಾಗುವುದು.4. ಆಡಿಷನ್ ಸುತ್ತಿನಲ್ಲಿ ಯಾವುದೇ ಕಾಸ್ಟ್ಯೂಮ್‌ನ (ವೇಷಭೂಷನ)
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ಈ ಬಾರಿ ಅದ್ದೂರಿಯಾಗಿ ನಡೆಯಲಿರುವ ಉಚ್ಚಿಲ ದಸರಾ ಉತ್ಸವ-2022ರ ಅಂಗವಾಗಿ ದೇವಳದ ಪರಿಸರ ಮತ್ತು ಹೆಜಮಾಡಿಯಿಂದ ಕಾಪು ದೀಪಸ್ಥಂಭದವರೆಗೆ ನಿರ್ಮಿಸಲಾದ ಭವ್ಯವಾದ ವಿದುದ್ದೀಪಾಲಂಕಾರ ವ್ಯವಸ್ಥೆಯನ್ನು ಶ್ರೀ ಕ್ಷೇತ್ರದ ಸ್ವಾಗತ ಗೋಪುರ ಬಳಿ ದೇವಳದ ಗೌರವ ಅಧ್ಯಕ್ಷ ಡಾ.ಜಿ.ಶಂಕರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ರಾಜ್ಯಕ್ಕೇ ಮಾದರಿಯಾಗಿ ಅತ್ಯಂತ ವೈಭವದಿಂದ ಉಚ್ಚಿಲ ದಸರಾ ನಡೆಯಲಿದ್ದು, ನಾಡಿನೆಲ್ಲೆಡೆಯಿಂದ