Home Posts tagged #udupi (Page 61)

ಎಲ್ಲರೂ ಜೊತೆಗೂಡಿ ಕಾಪು ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ: ಲಾಲಾಜಿ ಮೆಂಡನ್

 ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ. ಪಕ್ಷವನ್ನು ಎರಡೂವರೆ ಸಾವಿರ ಮತಗಳಿಂದ 75 ಸಾವಿರ ಮತಗಳವರೆಗೆ ಬೆಳೆಸಿದ್ದೇವೆ. ಮುಂದೆಯೂ ಬಿಜೆಪಿ ಕ್ಷೇತ್ರವನ್ನಾಗಿ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಲಾಲಾಜಿ ಆರ್. ಮೆಂಡನ್ ಹೇಳಿದರು.  ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಲಾಲಾಜಿ ಮೆಂಡನ್ ಅವರ ಮನೆಗೆ ತೆರಳಿ

ಕ್ಯಾಮರಾ ಮುಂದೆ ಬಾವುಕರಾಗಿ ಕಣ್ಣೀರಿಟ್ಟ ರಘುಪತಿ ಭಟ್

ಉಡುಪಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ತಪ್ಪುತ್ತಲೇ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರ ಮನೆಯತ್ತ ದೌಡಾಯಿಸುತ್ತಿದ್ದಾರೆ. ಅಭಿಮಾನಿಗಳನ್ನು ಕಂಡು ರಘುಪತಿ ಭಟ್ ಭಾವುಕರಾಗಿದ್ದಾರೆ. ನಾನು ಶಾಕ್ ನಲ್ಲಿದ್ದೇನೆ ಏನು ಹೇಳುವ ಸ್ಥಿತಿಯಲಿಲ್ಲ ಎಂದು ರಘುಪತಿ ಭಟ್ ಹೇಳಿದ್ದರು. ಪಕ್ಷ ನನ್ನನ್ನು ನಡೆಸಿಕೊಂಡ ಬಗ್ಗೆ ತುಂಬಾ ಬೇಸರವಿದೆ. ಕನಿಷ್ಠ ಜಿಲ್ಲಾ ಮಟ್ಟದ ನಾಯಕರು ಕೂಡ ಕರೆ ಮಾಡಿ ಮಾತನಾಡಿಲ್ಲ. ಜಾತಿಯ ಕಾರಣಕ್ಕೆ ನನಗೆ ಟಿಕೆಟ್ ತಪ್ಪಿದೆ ಅನ್ನೋದು

ಪಡುಬಿದ್ರಿ : ಚುನಾವಣಾ ಪೂರ್ವ ಪೊಲೀಸ್ ಪಥ ಸಂಚಲನ

ಮುಂದಿನ ವಿಧಾನ ಸಭೆ ಚುನಾವಣೆ ನಿರ್ಭೀತಿಯಾಗಿ ನಡೆಯ ಬೇಕೆಂಬ ಉದ್ದೇಶದಿಂದ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗಜ್ಜಿ ನೇತ್ರತ್ವದಲ್ಲಿ ಪಡುಬಿದ್ರಿ ಕಾರ್ಕಳ ರಸ್ತೆಯಿಂದ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರಗೆ ಪೊಲೀಸ್ ಹಾಗೂ ಕೇಂದ್ರಿಯ ಮೀಸಲು ಪಡೆ ಸಿಬ್ಬಂದಿಗಳ ಪಥಸಂಚಲನ ನೆರವೇರಿದೆ. ಈ ಬಗ್ಗೆ ಮಾಹಿತಿ ನೀಡಿದ ಡಿವೈಎಸ್ಪಿ ಇದು ಸಾರ್ವಜನಿಕರನ್ನು ಹೆದರಿಸಲು ಮಾಡಿದ ಪ್ರಯತ್ನವಲ್ಲ, ಜನರಿಗೆ ಧೈರ್ಯ ತುಂಬಲು ಹಾಗೂ ಜನರು ತಮ್ಮ ಹಕ್ಕು..ಮತ ಚಲಾಯಿಸಲು ಯಾರಿಗೂ ಹೆದರ

ಹೆಜಮಾಡಿ ಬಂದರು ಕಾಂಗ್ರೆಸ್ ಪ್ರಯತ್ನ : ವಿನಯ ಕುಮಾರ್ ಸೊರಕೆ

ಹೆಜಮಾಡಿ ಮೀನುಗಾರಿಕಾ ಬಂದರು ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ವೇಳೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಂಜೂರು ಮಾಡಿದ್ದು ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾದ  ಪ್ರಥಮ ಕ್ಯಾಬಿನೆಟ್ ಸಭೆಯಲ್ಲಿ  ಹೆಜಮಾಡಿ ಬಂದರನ್ನು ಎಲ್ಲಾ ಪೂರಕ ದಾಖಲೆಗಳನ್ನು ಕ್ರೋಡೀಕರಿಸಿ ಮಂಜೂರು ಮಾಡಿದ್ದರು. ಆ ಸಂದರ್ಭ ಕೇಂದ್ರ ಸರ್ಕಾರ 75 ಶೇಕಡ ಹಾಗೂ ರಾಜ್ಯ ಸರ್ಕಾರ 25 ಶೇಕಡ ಹಣ

ಉಡುಪಿ : ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‍ರಾಜ್ ಕಾಂಚನ್‍ರಿಂದ ಮತ ಪ್ರಚಾರ

ಉಡುಪಿಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿದ್ದ ಭಿನ್ನ ಮತ ಶಮನಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ಟಿಕೆಟ್ ಅಕಾಂಕ್ಷಿಗಳು ನಿನ್ನೆ ನಡೆದ ಸಭೆಯಲ್ಲಿ ಒಮ್ಮತವನ್ನು ಪ್ರದರ್ಶಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪ್ರಚಾರವೂ ಕೂಡ ಜೊರಾಗಿಯೇ ನಡೆಯುತ್ತಿದೆ. ಮನೆ ಮನೆ ಭೇಟಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಲಾಗುತ್ತಿದ್ದು ಮತದಾರರಿಂದ ಉತ್ತಮ ಪ್ರತಿಕ್ರಿಯೆ

ಪಡುಬಿದ್ರಿ : ಸ್ಕೂಟರ್‌ಗೆ ಪಿಕ್ ಅಪ್ ಢಿಕ್ಕಿ: ಸ್ಕೂಟರ್ ಸವಾರ ಗಂಭೀರ

ಪಡುಬಿದ್ರಿ ಸೇತುವೆ ಬಳಿ ಸ್ಕೂಟರ್ ವೊಂದಕ್ಕೆ ಪಿಕಪ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡವರು ಪಲಿಮಾರು ಶಾಂಭವಿ ಕಂಪೌಂಡು ನಿವಾಸಿ ವಿಜಯ ಪೂಜಾರಿ(68) ನಿವೃತ್ತ ಸರಕಾರಿ ಉದ್ಯೋಗಿಯಾಗಿದ್ದು, ಉಡುಪಿಯಿಂದ ಮರಳಿ ಮನೆಗೆ ಬರುತ್ತಿದ್ದ ಇವರು ಸೇತುವೆ ಬಳಿ ಬರುತ್ತಿರುವ ಸಂದರ್ಭ ಅದೇ ಕಡೆಯಿಂದ ಬಂದ ಪಿಕಪ್ ಡಿಕ್ಕಿಯಾಗಿದೆ. ಸವಾರ ಎಸೆಯಲ್ಪಟ್ಟರೆ  ಸ್ಕೂಟರ್

ಬೈಂದೂರು ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಾಸ್ಥಾನ: ವಾರ್ಷಿಕ ಶ್ರೀ ಮನ್ಮಹಾ ರಥೋತ್ಸವ

ಬೆಳಿಗ್ಗೆ ಗಂಟೆ 7-00ಕ್ಕೆ, ಪ್ರಾತಃಕಾಲ ಪೂಜೆ, ನಿತ್ಯಬಲಿ, ರಥಶುದ್ಧಿ ಹೋಮ, ಶತರುದ್ರಾಭಿಷೇಕ ಶತರುದ್ರಾಭಿಷೇಕದ ಸೇವಾಕರ್ತರು : ಶ್ರೀಮತಿ ಶೀಲಾ & ಶ್ರೀ ಜಯಶೀಲ ಶೆಟ್ಟಿ ಮತ್ತು ಮಕ್ಕಳು, ಘಟಪ್ರಭಾ, ಹಾಗೂ ರಥಬಲಿ, ಕ್ಷೇತ್ರಪಾಲ ಬಲಿ ,ರಥಾರೋಹಣ, ಶ್ರೀ ಮನ್ಮಹಾರಥೋತ್ಸವಮಹಾಅನ್ನಸಂತರ್ಪಣೆ ಸೇವಾಕರ್ತರು ಶ್ರೀಮತಿ ಶಾಂತ ಮತ್ತು ಶ್ರೀ ಕೃಷ್ಣ ಗಾಣಿಗ ಮತ್ತು ಮಕ್ಕಳು ಅಡಿಗಳಹಿತ್ತು, ಹೇರಂಜಾಲು. ಮಧ್ಯಾಹ್ನ 3ಗಂಟೆಗೆ ವಾದ್ಯಗೋಷ್ಠಿ, ಚಂಡೆವಾದನ ಸಂಜೆ 5-30ಕ್ಕೆ

ನಾಗೂರಿನ ಶ್ರೀ ವೀರ ಹನುಮಾನ್ ದೇವಸ್ಥಾನ, ಶ್ರೀ ಶನೇಶ್ವರ ಸ್ವಾಮಿ ದೇವಳ : ಹನುಮ ಜಯಂತಿ

ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ನಾಗೂರಿನ ಶ್ರೀ ವೀರ ಹನುಮಾನ್ ದೇವಸ್ಥಾನ ಮತ್ತು ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾ.30ರ ಶ್ರೀ ರಾಮನವಮಿಯಂದು ಪ್ರಾರಂಭಗೊಂಡು, ಏಪ್ರಿಲ್ 6ರ ವರೆಗೆ ಹನುಮಾನ್ ಜಯಂತಿ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರದಿಂದ ನಡೆಯಿತು. ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ, ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ

ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ :ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಆಗ್ರಹ

ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡಿನಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ವಿಪಕ್ಷ ಸದಸ್ಯರು ಪುರಸಭೆಯಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿ ಮುಖ್ಯಾಧಿಕಾರಿಯವರನ್ನು ಆಗ್ರಹಿಸಿದರು, ವಾರ್ಡ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯನ್ನು ಗುರುತಿಸಿ ಸಮರ್ಪಕ ವಿತರಣೆಗೆ ಕ್ರಮ ಜರುಗಿಸಲಾಗುವುದು ಮತ್ತು ಅಗತ್ಯವಿರು ಸ್ಥಳಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಭರವಸೆಯನ್ನು

ಕಾಂಗ್ರೆಸ್ : ಉಡುಪಿಯಲ್ಲಿ ಪ್ರಸಾದ್ ರಾಜ್ ಕಾಂಚಾನ್‌‌ಗೆ ಟಿಕೆಟ್

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಹಳೆ ಮೊಳಗಿಸಿರುವ ಕಾಂಗ್ರೆಸ್​, ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ .ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಇಂದು 42 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.ಉಡುಪಿ ವಿಧಾನ ಸಭೆ ಕ್ಷೇತ್ರದಲ್ಲಿ ಪ್ರಸಾದ್ ರಾಜ್ ಕಾಂಚಾನ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ನಿರೀಕ್ಷೆಯಂತೆ ಮೊಗವೀರರಿಗೆ ಕಾಂಗ್ರೆಸ್ ಮಣೆ ಹಾಕಿದೆ.ಪ್ರಸಾದ್ ರಾಜ್ ಈಗಾಗಲೇ ಪಕ್ಷದ ಪ್ರಚಾರ