Home Posts tagged #udupi (Page 62)

ವಿಧಾನಸಭೆ ಚುನಾವಣಾ ಕಣದಿಂದ ಹಿಂದೆ ಸರಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

ಐದು ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದಾರೆ.ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕ ಹಾಲಾಡಿ `ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಸತತ 5 ಅವಧಿಗೆ ಬಹು ನಿರೀಕ್ಷೆಯೊಂದಿಗೆ ಆಯ್ಕೆ ಮಾಡಿದ ಕ್ಷೇತ್ರದ ಎಲ್ಲ ಜಾತಿ, ಧರ್ಮದ

ಬಿ.ಎಸ್.ವೈ ಭೇಟಿ ಮಾಡಿದ ಕಾರ್ಕಳ ಟಿಕೆಟ್ ಆಕಾಂಕ್ಷಿ ಮಮತಾ ಹೆಗ್ಡೆ

ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿರುವ ಡಾ.ಮಮತಾ ಹೆಗ್ಡೆ ಅವರು ತನ್ನ ಬೆಂಬಲಿಗರೊಂದಿಗೆ ಸೋಮವಾರ ಶಿಕಾರಿಪುರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಪ್ರಾಮಾಣಿಕ ರಾಜಕಾರಣ ಮಾಡ ಬಯಸಿರುವ ತನಗೆ ಕಾರ್ಕಳದಿಂದ ಬಿಜೆಪಿ ಮೂಲಕ ಸ್ಪರ್ಧೆ ಮಾಡಲು ಅವಕಾಶ ನೀಡಬೇಕು ಎಂದು ಮಮತಾ ಹೆಗ್ಡೆ ಅವರು ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಬಿ.ಎಸ್. ವಿಜಯೇಂದ್ರ ಅವರನ್ನು ಕೂಡ ಭೇಟಿ ಮಾಡಿದರು. ಸಚಿವ

ಕಾರ್ಕಳ : ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕೆಲವರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾರ್ಕಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಕಾರ್ಕಳ ಗ್ರಾಮಾಂತರ ಎಸ್‍ಐ ತೇಜಸ್ವಿ ಅವರಿಗೆ ಮನವಿ ಸಲ್ಲಿಸಿತು.ಇತ್ತೀಚೆಗೆ ಕೆಲವು ವ್ಯಕ್ತಿಗಳು ಪತ್ರಕರ್ತರ ಸಂಘ ಮತ್ತು ಪತ್ರಕರ್ತರ ಹೆಸರು ಹೇಳಿ ಹಣ ಸಂಗ್ರಹಿಸುವ, ವಸೂಲಿ ಮಾಡುವ ಹಾಗೂ ಬೆದರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವುದು ಸಂಘದ ಗಮನಕ್ಕೆ ಬಂದಿದೆ. ಯಾವುದೇ

ಚುನಾವಣೆ ಅಕ್ರಮ ತಡೆಗೆ 17 ಕಡೆ ಚೆಕ್ ಪೋಸ್ಟ್, ಈವರೆಗೆ 42 ಲಕ್ಷ ರೂ.ವಶ ಎಸ್ಪಿ ಅಕ್ಷಯ್ ಎಂ. ಎಚ್ ಮಾಹಿತಿ

ಉಡುಪಿ:ಚುನಾವಣಾ ಅಕ್ರಮಗಳು ನಡೆಯದಂತೆ ಹಾಗೂ ವಾಹನಗಳ ವಿಶೇಷ ತಪಾಸಣೆಗಾಗಿ ಜಿಲ್ಲೆಯ 17 ಕಡೆಗಳಲ್ಲಿ ಚೆಕ್‍ಪೆÇೀಸ್ಟ್‍ಗಳನ್ನು ತೆರೆಯಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಎಚ್ ತಿಳಿಸಿದ್ದಾರೆ. ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯೊಳಗೆ ಸಂಚರಿಸುವ ಹಾಗೂ ಹೊರಜಿಲ್ಲೆಗಳ ಸಂಚಾರಗಳ ಮೇಲೆ ನಿಗಾ ಇರಿಸಲು ಈ

ನನಗೆ ಗೆಲುವಿನೊಂದಿಗೆ ವಿದಾಯ ಹೇಳಿ ಸೋಲಿನೊಂದಿಗೆ ಬೇಡ : ವಿನಯಕುಮಾರ್ ಸೊರಕೆ

ನನ್ನ ಕೊನೆಯ ಚುನಾವಣೆ ಇದಾಗಿದ್ದು, ಕ್ಷೇತ್ರದ ಜನತೆ ನನಗೆ ಗೆಲುವಿನ ವಿದಾಯ ಹೇಳಿ.. ಸೋಲಿನೊಂದಿಗೆ ಬೇಡ ಎಂಬುದಾಗಿ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ. ಕಾಪುವಿನಲ್ಲಿ ಅವರು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚುನಾವಣೆಯೆ ನಾನು ನನ್ನ ಅಂತಿಮ ಚುನಾವಣೆ ಎಂದಿದ್ದೆ. ಆದರೆ ನಮ್ಮ ಅತೀಯಾದ ಆತ್ಮವಿಶ್ವಾಸ ನಮಗೆ ಮುಳುವಾಗಿ ನಾನು ಸೋಲು ಕಂಡಿದ್ದೆ. ಸೊಲು ಕಂಡರೂ ನಾನು ಎಲ್ಲೊ ದೂರದ

ಕಾಪು-ಪಡುಬಿದ್ರಿ ಜಾತ್ರೆಗಳಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರಲು ಮನವಿ

ಕಾಪುವಿನಲ್ಲಿ ನಡೆಯುವ ಮಾರಿಪೂಜೆ ಹಾಗೂ ಪಡುಬಿದ್ರಿ ದೇವಳದಲ್ಲಿ ನಡೆಯುವ ರಥೋತ್ಸವ ಸಂದರ್ಭ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ದೇವಳಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಶೆಟ್ಟಿಯವರಿಗೆ ಬಜರಂಗದಳ ಕಾಪು ಪ್ರಖಂಡ ಸದಸ್ಯರು ಮನವಿ ಸಲ್ಲಿಸಿದ್ದಾರೆ. ದೇಶದ ಕಾನೂನನ್ನು ಹಾಗೂ ಹಿಂದೂ ಸನಾತನ ಧರ್ಮದ ಆಚಾರ-ವಿಚಾರಗಳನ್ನು ಗೌರವಿಸದ ಅನ್ಯಧರ್ಮಿಯರಿಗೆ ಜಾತ್ರಾ ಸಂಧರ್ಭದಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡದಂತೆ ಮನವಿಯನ್ನು

ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಎಸ್.ಸಿ ಮತ್ತು ಎಸ್.ಟಿ ಸಮಾವೇಶ

ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಎಸ್.ಸಿ ಮತ್ತು ಎಸ್.ಟಿ ಸಮಾವೇಶ ಬೈಂದೂರು ಮಂಡಲದ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ sc ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಲ, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್,ರಾಜ್ಯ sc ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು, ಜಿಲ್ಲಾ ಪ್ರಧಾನ

ಉಚ್ಚಿಲ: ಓವರ್‌ ಟೇಕ್  ಭರದಲ್ಲಿ ಡಿವೈಡರ್ ಮೇಲೇರಿದ ಬಸ್ಸು: ಆಕ್ರೋಶಿತ ಪ್ರಯಾಣಿಕರಿಂದ ಬಸ್ಸಿನ ಗಾಜು ಪುಡಿ

ಎರಡು ಬಸ್ಸುಗಳ ಓವರ್‌ಟೇಕ್ ಭರದಲ್ಲಿ ಬಸ್ಸೊಂದು ಡಿವೈಡರ್ ಮೇಲೇರಿದ ಘಟನೆ ಉಚ್ಚಿಲ ಸಮಿಪದ ಮೂಳೂರು ವೆಸ್ಟ್‌ಕೋಸ್ಟ್ ನರ್ಸರಿ ಬಳಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಉಡುಪಿ ಕಡೆಯಿಂದ ಮಂಗಳೂರಿನತ್ತ ಚಲಿಸುವ ವಿಶಾಲ್ ಹೆಸರಿನ ಎರಡು ಬಸ್ಸುಗಳು ಓವರ್ಟೇಕ್ ಮಾಡಿಕೊಂಡು ಬಂದು ಮೂಳೂರು ಬಳಿ ಸರ್ವಿಸ್ ರಸ್ತೆಯ ಪಕ್ಕದ ಡಿವೈಡರ್ ಮೇಲೇರಿದೆ.ಘಟನೆಯಿಂದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಪ್ರಯಾಣಿಕರು ಬಸ್ಸಿನ ಕಿಟಕಿ ಗಾಜುಗಳನ್ನು

ಜೈ ಭೀಮ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮ ಶಾಖೆ ಪಡುಬಿದ್ರಿ, ಇದರ ದಶಮಾನೋತ್ಸವ ಅಂಗವಾಗಿ ಮೂರನೇ ವರ್ಷದ ರಾಜ್ಯಮಟ್ಟದ ಜೈ ಭೀಮ್ ಟ್ರೋಫಿ 2023 ಹೆಜಮಾಡಿ ಬಸ್ತಿಪಡ್ಪು ಮೈದಾನದಲ್ಲಿ ಉದ್ಘಾಟನೆಗೊಂಡಿತು. ಅಂಬೇಡ್ಕರ್ ಬಾವಚಿತ್ರಕ್ಕೆ ಹೂ ಹಾರ ಹಾಕುವ ಮೂಲಕ ಜಿಲ್ಲಾ ಶಾಖೆಯ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಉದ್ಘಾಟಿಸಿ ಮಾತನಾಡಿದ ಅವರು, ಅದೇಷ್ಟೋ ಪ್ರತಿಭೆಗಳಿದ್ದರೂ ಅವಕಾಶ ವಂಚಿತವಾಗಿ ಕಮರಿ ಹೋಗುತ್ತಿದೆ. ಆ ನಿಟ್ಟಿನಲ್ಲಿ ಇಂಥಹ ಕ್ರೀಡೆಗಳನ್ನು

ಉಚ್ಚಿಲ : ನಾಮಫಲಕ ಅಳವಡಿಸಿದ್ದರ ವಿರುದ್ಧ ಆಟೋ ಚಾಲಕರ ಗೊಂದಲ ಪೊಲೀಸ್ ಸಮ್ಮುಖದಲ್ಲಿ ನಾಮಫಲಕ ತೆರವು

ಕೆಲ ಅಟೋ ರಿಕ್ಷಾ ಚಾಲಕರು ಅಟೋ ನಿಲ್ದಾಣ ಎಂಬ ನಾಮಫಲಕ ಅಳವಡಿಸಿದರ ವಿರುದ್ಧ ಆಕ್ರೋಶಗೊಂಡ ಉಚ್ಚಿಲ ಅಟೋ ಯೂನಿಯನ್ ಸದಸ್ಯರು ಪ್ರತಿಭಟಿಸಿ ಪೆÇಲೀಸ್ ಸಮುಖದಲ್ಲಿ ಬೋರ್ಡ್ ತೆರವುಗೊಳಿಸಲಾಯಿತು.ಉಚ್ಚಿಲ ಅಟೋ ಯೂನಿಯನ್ ಪ್ರಮುಖರಾದ ಸಿರಾಜ್ ಉಚ್ಚಿಲ ಮಾಹಿತಿ ನೀಡಿ, ಯೂನಿಯನ್‍ಗೆ ಸೇರದ ಕೆಲವು ಮಂದಿ ಹಾಗೂ ನೆರೆಯ ಊರಿನ ಕೆಲವು ಅಟೋ ಚಾಲಕರು ಸೇರಿ ಯಾವುದೇ ಪರವಾನಗೆ ಪಡೆಯದೆ ಏಕಾಏಕಿ ಮಹಾಲಕ್ಷ್ಮೀ ದೇವಳದ ಬಳಿಯ ಫುಟ್ ಫಾತ್ ನಲ್ಲಿ ಬೊರ್ಡ್ ನೆಟ್ಟಿದ್ದು, ಈ ಬಗ್ಗೆ