Home Posts tagged #udupi (Page 9)

ಉಡುಪಿ: ನೇತ್ರಜ್ಯೋತಿ ಕಾಲೇಜಿನಲ್ಲಿ ವಿಶ್ವಪರಿಸರ ದಿನಾಚರಣೆ

ಉಡುಪಿಯ ಪ್ರತಿಷ್ಠಿತ ನೇತ್ರಜ್ಯೋತಿ ಕಾಲೇಜಿನಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ವಿದ್ಯಾರ್ಥಿಗಳಿಗೆ ಗಿಡ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಉಡುಪಿಯ ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀ ಶಿವಾನಂದ ರವರು ಮಾತನಾಡಿ, ವಿಶ್ವಪರಿಸರ ದಿನಾಚರಣೆಯ ಉದ್ದೇಶ, ಪರಿಸರ ರಕ್ಷಣೆ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರದ

ಉಡುಪಿ : ನೂತನ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಂ ಶಂಕರ್ ರವರಿಗೆ ಕರ್ನಾಟಕ ಪತ್ರಕರ್ತರ ಸಂಘ (ರಿ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಗೌರವ

ಕರ್ನಾಟಕ ಪತ್ರಕರ್ತರ ಸಂಘ (ರಿ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯವರಾಗಿರುವ ಶ್ರೀ ಹರಿರಾಂ ಶಂಕರ್ ಅವರನ್ನು ಜಿಲ್ಲೆಗೆ ಸ್ವಾಗತಿಸುವ ಮೂಲಕ ಗೌರವಿಸಲಾಯಿತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಯನ್ನು ಬಲಪಡಿಸಿ ಶಾಂತಿ ಕಾಪಾಡುವಂತೆ, ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಬೇಕೆಂದು ಕರ್ನಾಟಕ ಪತ್ರಕರ್ತರ ಸಂಘ ದ ವತಿಯಿಂದ ವಿನಂತಿಸಲಾಯಿತು.ಕರ್ನಾಟಕ ಪತ್ರಕರ್ತರ ಸಂಘ ದ ಜಿಲ್ಲಾಧ್ಯಕ್ಷರಾದ ಕಿರಣ್ ಪೂಜಾರಿ,

ಮುಂಡಾಲ ಸಮಾಜ ಸೇವಾ ಟ್ರಸ್ಟ್ ರಚನೆ

ಹತ್ತನೇ ತೋಕೂರು ಗ್ರಾಮದ ಶ್ರೀ ಓಂಕಾರೇಶ್ವರೀ ನಗರದಲ್ಲಿ ಮುಂಡಾಳ ಸಮಾಜ ಸಂಘಟನೆ ಹಾಗೂ ಸಮಾಜಭವನದ ಕಟ್ಟಡ ರಚನೆ ಬಗ್ಗೆ ಮುಲ್ಕಿ ಹೋಬಳಿ ಒಂಬತ್ತು ಮಾಗಣೆಯ ಎಲ್ಲಾ ಮುಂಡಾಲ ಧಾರ್ಮಿಕ ಮುಖಂಡರ ಸಾಮಾಜಿಕ ಮುಂದಾಳುಗಳ ಸಭೆಯು ಶ್ರೀ ಓಂಕಾರೇಶ್ವರೀ ಮಂದಿರದ ಅಧ್ಯಕ್ಷರಾದ ಶ್ರೀ ಸದಾಶಿವ ಕುಂದರ್ ರವರ ಅಧ್ಯಕ್ಷತೆಯಲ್ಲಿ ನಡೆದು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗುವಂತೆ ಮೂಲ್ಕಿ ಹೋಬಳಿಯ ಮುಂಡಾಲ ಸಮಾಜ ಸೇವಾ ಟ್ರಸ್ಟನ್ನು ರಚಿಸಲಾಯಿತು.ಟ್ರಸ್ಟ್ ನ ಅಧ್ಯಕ್ಷರಾಗಿ

ಉಡುಪಿ :918 ಕನ್ನಡ ಕಿರುಚಿತ್ರದ ಪೋಸ್ಟರ್ ಬಿಡುಗಡೆ

ಉಡುಪಿ ಮಣಿಪಾಲದ ಪ್ರತಿಭಾವಂತ ಯುವ ಕಲಾವಿದರು ಅಭಿನಯಿಸಿರುವ ಶ್ರೀ ತುಕಾರಾಮ ಬಾಯಾರು ನಿರ್ದೇಶನದ ವಿಭಿನ್ನ ಶೈಲಿಯ ಪ್ರೇಮಕಥೆಯುಳ್ಳ 918 ಎಂಬ ಕನ್ನಡ ಕಿರುಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಉದಯಕುಮಾರ್ ಆಚಾರ್ಯ ಬಾಯಾರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ನಾಯಕ ನಟರಾಗಿ ಸಂದೇಶ್ ಆಚಾರ್ಯ, ನಾಯಕಿ ಕವಿತಾ, ಗಿರೀಶ್ ಆಚಾರ್ಯ ಉಡುಪಿ, ಸೂರಜ್ ಆಚಾರ್ಯ ಉಡುಪಿ, ಗುರುಪ್ರಸಾದ್ ಆಚಾರ್ಯ ಹೊಸನಗರ, ವರ್ಷಿಣಿ ವೈ ಅಮೀನ್ ಮಣಿಪಾಲ, ವೈಷ್ಣವಿ ಖಾರ್ವಿ ಮುಂತಾದವರು

ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ತಡೆಗಟ್ಟುವ ಉದ್ದೇಶದಿಂದ ಆರೋಪಿಗಳ ಬಂಧನ

ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿರುವ ಆರೋಪಿಗಳ ಬಗ್ಗೆ ಕಡಿವಾಣ ಹಾಕಲು ಹಾಗೂ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ತಡೆಗಟ್ಟುವ ಉದ್ದೇಶದಿಂದ ಪದೇ ಪದೇ ಪ್ರಕರಣಗಳಲ್ಲಿ ಭಾಗಿಯಾಗಿರುವ ಜಿಲ್ಲೆಯ ಹಲವು ಠಾಣೆಯಲ್ಲಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ವಿರುದ್ದ ಪಿಟ್ ಎನ್.ಡಿ.ಪಿ.ಎಸ್ ಕಾಯಿದೆ ಅಡಿಯಲ್ಲಿ ಕೃಷ್ಣ ಆಚಾರಿ @ ಕೃಷ್ಣ(43), ಕೊಳಲಗಿರಿ ಉಪ್ಪೂರು ಗ್ರಾಮ, ಬ್ರಹ್ಮಾವರದ ಅಬ್ದುಲ್‌ ಜಬ್ಬಾರ್‌ @ ಜಬ್ಬಾರ್‌ (27),

ಶಯದೇವಿಸುತೆ ಮರವಂತೆಯವರ ಮುಡಿಗೇರಿದ ಅಂತರಾಷ್ಟ್ರೀಯ ಗೌರವ ಡಾಕ್ಟರೇಟ್ ಪದವಿ

ವಿವಿಧ ಹಲವಾರು ಕ್ಷೇತ್ರದಲ್ಲಿನ ಗಣನೀಯ ಸಾಧನೆಯನ್ನು ವಿಶೇಷ ಮಾನದಂಡದ ಆಧಾರದ ಮೇಲೆ ಪರಿಗಣಿಸಿ ಶಯದೇವಿಸುತೆ ಮರವಂತೆ(ಜ್ಯೋತಿ ಜೀವನ್‌ಸ್ವರೂಪ್) ಅವರಿಗೆ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ಮಹೋನ್ನತ ಗೌರವ ಡಾಕ್ಟರೇಟ್ ಪದವಿಯನ್ನು ಇತ್ತೀಚೆಗಷ್ಟೇ ಮಾರ್ಚ್-01ರಂದು ನವದೆಹಲಿಯಲ್ಲಿ ನೀಡಿ ಗೌರವಿಸಿ ಪುರಸ್ಕರಿಸಿತು. ಈ ಸಂದರ್ಭದಲ್ಲಿ, ನವದೆಹಲಿಯ ಕಲ್ರಾ ಹಾಸ್ಪಿಟಲ್‌ನ ಸಿಇಓ

ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಸಪರಿವಾರ ದೇವರು ಹಾಗೂ ದೈವಗಳ ದೇವಸ್ಥಾನ ಪಡುವರಿ ನೂತನ ದೇಗುಲಗಳ ಲೋಕಾರ್ಪಣೆ

ಇತಿಹಾಸ ಪ್ರಸಿದ್ಧ ಬೈಂದೂರು ತಾಲೂಕಿನ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಸಪರಿವಾರ ದೇವರು ಹಾಗೂ ದೈವಗಳ ದೇವಸ್ಥಾನ ಪಡುವರಿನೂತನ ದೇಗುಲಗಳ ಲೋಕಾರ್ಪಣೆ ಹಾಗೂ ದೇವರು, ದೈವಗಳ ಪುನ‌ರ್ ಪ್ರತಿಷ್ಠಾ ಮಹೋತ್ಸವ ದಿನಾಂಕ 04-05-2025ನೇ ರವಿವಾರದಿಂದ 06-05-2025ನೇ ಮಂಗಳವಾರದವರೆಗೆ ಸಂಭ್ರಮದಲ್ಲಿ ನಡೆಯಲಿದೆ. ದಿನಾಂಕ 4-05-2025ರ ಸಂಜೆ 4-00 ಗಂಟೆಯಿಂದ ತಂತ್ರಿಗಳ ಸ್ವಾಗತ. ವಾಸ್ತು ತಜ್ಞರಾದ ಶ್ರೀ ಮಂಜುನಾಥ ಭಟ್ ಬೈಲ್‌ಕೆರೆ ಉಡುಪಿ ಹಾಗೂ ದೇವಸ್ಥಾನ

ಕಾರ್ಕಳ: ಉದ್ಯಮಿ ಆತ್ಮಹತ್ಯೆ

ಕಾರ್ಕಳ: ಉದ್ಯಮಿಯೋರ್ವ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ಉಡುಪಿ ಜಿಲ್ಲೆಯ ಕಾರ್ಕಳದ ದೂಪದಕಟ್ಟೆ ಎಂಬಲ್ಲಿ ಬೆಳಕಿಗೆ ಬಂದಿದೆ. ಮೂಲತಃ ಕಾರ್ಕಳದವರಾದ ಮಂಗಳೂರು ನಿವಾಸಿ ಉದ್ಯಮಿ ದಿಲೀಪ್ ಎನ್. ಆರ್. ಶೂಟ್ ಮಾಡಿಕೊಂಡವರು. ಮಂಗಳೂರಿನಲ್ಲಿ ವಾಸವಿದ್ದ ಅವರು ನಿನ್ನೆ ರಾತ್ರಿ ಅಲ್ಲಿಂದ ಕಾರಿನಲ್ಲಿ ಹೊರಟವರು ನಿಟ್ಟೆ ದೂಪಕಟ್ಟೆಯ ನವೋದಯ ಪ್ರಾಪರ್ಟಿಸ್ ಮುಂಭಾಗ ಕಾರಿನಲ್ಲೇ ವಿಷ ಸೇವಿಸಿ ತಮ್ಮಲ್ಲಿದ್ದ ಗನ್ ಮೂಲಕ ಶೂಟ್ ಮಾಡಿಕೊಂಡು

ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡನೀಯ- ಪ್ರಸಾದ್ ರಾಜ್ ಕಾಂಚನ್

ಜಮ್ಮು- ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ಕೃತ್ಯ ಖಂಡನೀಯ ಮತ್ತು ಹೇಯ. ಈ ದಾಳಿಯಲ್ಲಿ ಇಬ್ಬರು ಕರ್ನಾಟಕದವರು ಸೇರಿದಂತೆ 28 ಜನ ಪ್ರವಾಸಿಗರು ಬಲಿಯಾಗಿರುವುದು ಅತೀವ ನೋವು ತಂದಿದೆ. ಉಗ್ರರ ಹೇಯ ಕೃತ್ಯವನ್ನು ಉಡುಪಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಕಟುವಾಗಿ ಖಂಡಿಸಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದಿರುವುದು ಕೇವಲ ಉಗ್ರರ ದಾಳಿಯಲ್ಲ. ಅದು ಮನುಷ್ಯತ್ವದ ವಿರುದ್ಧದ ದಾಳಿ, ಈ ನೆಲದ ಅಸ್ಮಿತೆಯ ಮೇಲಿನ ದಾಳಿ. ಈ ದಾಳಿಯ ಹಿಂದಿನ

V4 ನ್ಯೂಸ್ ವರದಿಗಾರ ಕೆ.ಎಂ. ಖಲೀಲ್‌ ಅವರಿಗೆ  ‘ಮಾಧ್ಯಮ ರತ್ನ ಪ್ರಶಸ್ತಿ’

ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆಗಾಗಿ ವಿ4 ನ್ಯೂಸ್‌ನ ವರದಿಗಾರ ಕೆ.ಎಂ. ಖಲೀಲ್ ಅವರು ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕವಿತಾ ಮೀಡಿಯಾ ಸೋರ್‍ಸ್ ಪ್ರೈವೆಟ್ ಲಿಮಿಟೆಡ್ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿವಾಹಿನಿ ವತಿಯಿಂದ ಏ.27ರಂದು ಕೊಪ್ಪಳದಲ್ಲಿ ಕರುನಾಡ ಸಂಭ್ರಮ ಕಿರು ಚಿತ್ರೋತ್ಸವ ಸೀಸನ್-02ರಲ್ಲಿ ನಾಡು, ನುಡಿ, ಸಂಸ್ಕೃತಿಕ ಝೇಂಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸುಮಾರು 20 ವರ್ಷಗಳಿಂದ ಮಂಗಳೂರಿನ ಪ್ರತಿಷ್ಠಿತ