Home Posts tagged #v4news karnataka (Page 13)

ಜೈ ಭೀಮ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮ ಶಾಖೆ ಪಡುಬಿದ್ರಿ, ಇದರ ದಶಮಾನೋತ್ಸವ ಅಂಗವಾಗಿ ಮೂರನೇ ವರ್ಷದ ರಾಜ್ಯಮಟ್ಟದ ಜೈ ಭೀಮ್ ಟ್ರೋಫಿ 2023 ಹೆಜಮಾಡಿ ಬಸ್ತಿಪಡ್ಪು ಮೈದಾನದಲ್ಲಿ ಉದ್ಘಾಟನೆಗೊಂಡಿತು. ಅಂಬೇಡ್ಕರ್ ಬಾವಚಿತ್ರಕ್ಕೆ ಹೂ ಹಾರ ಹಾಕುವ ಮೂಲಕ ಜಿಲ್ಲಾ ಶಾಖೆಯ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಉದ್ಘಾಟಿಸಿ ಮಾತನಾಡಿದ ಅವರು, ಅದೇಷ್ಟೋ

ವಿಟ್ಲ: ಬೋರುವೆಲ್ ಲಾರಿ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಓರ್ವ ಸಾವು: ಕಾಶಿಮಠ ದಲ್ಲಿ ಘಟನೆ

ವಿಟ್ಲ: ಬೋರ್ ವೆಲ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ವಿಟ್ಲದ ಕಾಶಿಮಠದಲ್ಲಿ ನಡೆದಿದೆ. ಉಕ್ಕುಡ ಆಲಂಗಾರು ನಿವಾಸಿ ರಂಜಿತ್(20) ಮೃತಪಟ್ಟವರು. ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ತೆರಳುತ್ತಿದ್ದ ಬೈಕ್ ಗೆ ಎದುರಿನಿಂದ ಬಂದ ಬೋರ್ ವೆಲ್ ಲಾರಿ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಅಪಾಯದಿಂದ ಪಾರಾಗಿದ್ದಾರೆ. ಸ್ತಳಕ್ಕೆ ವಿಟ್ಲ ಪೆÇಲೀಸರು ಭೇಟಿ ನೀಡಿದ್ದಾರೆ

ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷರಾಗಿ ಸುಧಾಕರ ಪೂಂಜ, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಪೂಜಾರಿ ಚೇಳಾರ್

ಸುರತ್ಕಲ್ : ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಸುರತ್ಕಲ್ ಘಟಕ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ವಹಿಸಿದ್ದರು. ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸುಧಾಕರ ಎಸ್ ಪೂಂಜ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಹಾಬಲ ಪೂಜಾರಿ ಕಡಂಬೋಡಿ

ಬ್ರಹ್ಮರಕೋಟ್ಲು ಟೋಲ್‍ಗೇಟ್ ಅವ್ಯವಸ್ಥೆ ವಿರುದ್ಧ ಆಕ್ರೋಶ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ರಹ್ಮರಕೋಟ್ಲು ಟೋಲ್ ಗೇಟ್ ಅವ್ಯವಸ್ಥೆ ಹಾಗೂ ಬಂಟ್ವಾಳ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಎಸ್.ಡಿ.ಪಿ.ಐ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಎಸ್.ಡಿ.ಪಿ.ಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ , ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಇಲ್ಯಾಸ್ ತುಂಬೆ ತಿಳಿಸಿದ್ದಾರೆ. ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ

ದೇಶದಲ್ಲಿ ಅತಿ ದೊಡ್ಡ ಕೃತಕ ಅಂಗಾಂಗ ಜೋಡಣಾ ಶಿಬಿರ

ಬೆಂಗಳೂರು, ; ದೇಶಾದ್ಯಂತ ದಿವ್ಯಾಂಗರು, ವಿಶೇಷ ಚೇತನರು, ಅವಕಾಶ ವಂಚಿತರ ಶ್ರೇಯೋಭಿವೃದ್ಧಿಗಾಗಿ ಭಾರತದಾದ್ಯಂತ 38 ವರ್ಷಗಳಿಂದ ನಿರಂತರವಾಗಿ ಉದಾತ್ತ ಸೇವೆ ಸಲ್ಲಿಸುತ್ತಿರುವ ನಾರಾಯಣ್ ಸೇವಾ ಸಂಸ್ಥಾನ್ ಬೆಂಗಳೂರಿನಲ್ಲಿ ಮಾ. 19 ರಂದು ದೇಶದಲ್ಲಿಯೇ ಅತಿ ದೊಡ್ಡ ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ ಆಯೋಜಿಸಿದೆ. ಒಂದೇ ದಿನ 593 ಮಂದಿಗೆ ಕೃತಕ ಅಂಗಾಂಗ, ಕ್ಯಾಲಿಪರ್ ಗಳನ್ನು ಜೋಡಿಸಿ ದಿವ್ಯಾಂಗರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಲಾಗುತ್ತಿದೆ ಎಂದು ನಾರಾಯಣ್ ಸೇವಾ

ಮಾ.22ರಿಂದ ನಗರದಲ್ಲಿ ‘ಸ್ಟ್ರೀಟ್ ಫುಡ್ ಫಿಯೆಸ್ಟಾ’

ಮಂಗಳೂರು: ಮಂಗಳೂರಿನ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಾಯೋಜಕತ್ವದಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ದಕ್ಷಿಣ ಶಾಸಕ ವೇದವ್ಯಾಸ್ಕಾ ಮತ್ ನೇತೃತ್ವದಲ್ಲಿ ‘ಸ್ಟ್ರೀಟ್ ಫುಡ್ ಫಿಸ್ಟಾ’ (ಬೀದಿಬದಿ ಆಹಾರೋತ್ಸವ) ಮಾ.22ರಿಂದ 26ರ ವರೆಗೆ ನಡೆಯಲಿದೆ ಎಂದು ಸಂಘಟನಾ ಸಮಿತಿ ಮಾರ್ಗದರ್ಶಕ ಯತೀಶ್ ಬೈಕಂಪಾಡಿ ಹೇಳಿದರು. ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಜೆ 5ರಿಂದ ರಾತ್ರಿ 11ರವರೆಗೆ ಕರಾವಳಿ ಉತ್ಸವ

ರಬ್ಬರ್ ಟ್ಯಾಪಿಂಗ್ ಕತ್ತಿ ಎದೆಯೊಳಗೆ ಹೊಕ್ಕಿ ಮಹಿಳೆಸಾವು

ಕಡಬ : ರಬ್ಬರ್ ಟ್ಯಾಪಿಂಗ್ ಕತ್ತಿಯ ರೂಪದಲ್ಲಿ ಬಂದ ಸಾವು ಮಹಿಳೆಯನ್ನು ಬಲಿಪಡೆದ ಘಟನೆ ಕಡಬ ತಾಲೂಕಿನ ಎಡಮಂಗಲದಲ್ಲಿ ಮಾ.17ರಂದು ನಡೆದಿದೆ. ಎಡಮಂಗಲ ಗ್ರಾಮದ ಬಳಕ್ಕಬೆ ನಿವಾಸಿ ಶಿವರಾಮ ಎಂಬವರ ಪತ್ನಿ ಗೀತಾ(37 ವ.) ಎಂಬವರು ಬೆಳ್ಳಂಬೆಳಗ್ಗೆ 6.30 ಗಂಟೆ ಹೊತ್ತಿಗೆ ತನ್ನ ಗಂಡನ ಜೊತೆ ತಮ್ಮದೇ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದರು. ಟ್ಯಾಪಿಂಗ್ ಮಾಡುತ್ತಾ ಹೋಗುತ್ತಿದ್ದಾಗ ಇಳಿಜಾರು ಪ್ರದೇಶದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಬೀಳುವಾಗ

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕೌಡಿಕಳಿ ಆಯ್ಕೆ : ತೆಲಿಕೆದ ತೆನಾಲಿ ತಂಡದ ಸುನಿಲ್ ನೆಲ್ಲಿಗುಡ್ಡೆ ಪ್ರಧಾನ ನಟನೆಯ ಸಿನಿಮಾ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ತೆಲಿಕೆದ ತೆನಾಲಿ ಬಿರುದಾಂಕಿತ ಸುನಿಲ್ ನೆಲ್ಲಿಗುಡ್ಡೆ ಇವರ ಪ್ರಧಾನ ನಟನೆಯ ಕೊಡವ ಭಾಷೆಯ ಕೌಡಿಕಳಿ ಚಲನಚಿತ್ರ ಬೆಂಗಳೂರಿನಲ್ಲಿ ನಡೆಯಲಿರುವ 2023ನೇ ಸಾಲಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಭಾರತ ಚಲನಚಿತ್ರ ವಿಭಾಗದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಮೊಟ್ಟ ಮೊದಲ ಕೊಡವ ಸಿನಿಮಾ ಎಂಬ ಹೆಗ್ಗೆಳಿಕೆಗೂ ಪಾತ್ರವಾಗಿದೆ. ಕೌಡಿಕಳಿ ಸಿಂಚನ ಪೊನ್ನಪ್ಪ ನಿರ್ದೇಶನದ

ಉಚ್ಚಿಲ : ನಾಮಫಲಕ ಅಳವಡಿಸಿದ್ದರ ವಿರುದ್ಧ ಆಟೋ ಚಾಲಕರ ಗೊಂದಲ ಪೊಲೀಸ್ ಸಮ್ಮುಖದಲ್ಲಿ ನಾಮಫಲಕ ತೆರವು

ಕೆಲ ಅಟೋ ರಿಕ್ಷಾ ಚಾಲಕರು ಅಟೋ ನಿಲ್ದಾಣ ಎಂಬ ನಾಮಫಲಕ ಅಳವಡಿಸಿದರ ವಿರುದ್ಧ ಆಕ್ರೋಶಗೊಂಡ ಉಚ್ಚಿಲ ಅಟೋ ಯೂನಿಯನ್ ಸದಸ್ಯರು ಪ್ರತಿಭಟಿಸಿ ಪೆÇಲೀಸ್ ಸಮುಖದಲ್ಲಿ ಬೋರ್ಡ್ ತೆರವುಗೊಳಿಸಲಾಯಿತು.ಉಚ್ಚಿಲ ಅಟೋ ಯೂನಿಯನ್ ಪ್ರಮುಖರಾದ ಸಿರಾಜ್ ಉಚ್ಚಿಲ ಮಾಹಿತಿ ನೀಡಿ, ಯೂನಿಯನ್‍ಗೆ ಸೇರದ ಕೆಲವು ಮಂದಿ ಹಾಗೂ ನೆರೆಯ ಊರಿನ ಕೆಲವು ಅಟೋ ಚಾಲಕರು ಸೇರಿ ಯಾವುದೇ ಪರವಾನಗೆ ಪಡೆಯದೆ ಏಕಾಏಕಿ ಮಹಾಲಕ್ಷ್ಮೀ ದೇವಳದ ಬಳಿಯ ಫುಟ್ ಫಾತ್ ನಲ್ಲಿ ಬೊರ್ಡ್ ನೆಟ್ಟಿದ್ದು, ಈ ಬಗ್ಗೆ

ಭ್ರಷ್ಟಾಚಾರ ಮಾಡಿದ್ದರೆ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧ : ಅಭಯಚಂದ್ರ ಜೈನ್ ಗೆ ಶಾಸಕ ಕೋಟ್ಯಾನ್ ಸವಾಲು

ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ನನ್ನನ್ನು ಟಾರ್ಗೆಟ್ ಮಾಡಿ ಏಕವಚನ ಉಪಯೋಗಿಸಿ ಮಾತನ್ನಾಡಿರುವುದು ಹಿರಿಯರಾದ ಅವರಿಗೆ ಶೋಭೆ ತರುವಂತದಲ್ಲ.ತಾನು 500 ಕೋ.ಭ್ರಷ್ಟಾಚಾರ ಮಾಡಿದ್ದೇನೆಂದು ಅವರು ಆರೋಪಿಸುತ್ತಿದ್ದಾರೆ ಆದರೆ ನಾನು 500 ಅಲ್ಲ ರೂ 5 ಕೋ.ಭ್ರಷ್ಟಾಚಾರ ಮಾಡಿದ್ದರೂ ಧರ್ಮಸ್ಥಳ ಅಥವಾ ಹನುಮಂತ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧ ಜೈನ್ ಅವರು ಆ ಕ್ಷೇತ್ರಗಳಿಗೆ ಬಂದು ಪ್ರಮಾಣ ಮಾಡಲು ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದ್ದಾರೆ. ಅವರು ಬಿಜೆಪಿ