ಮೂಡುಬಿದಿರೆ : ಭಾರತೀಯ ಜನತಾಪಾರ್ಟಿ ಯುವಮೋರ್ಚಾ ಮೂಲ್ಕಿ ಮೂಡುಬಿದಿರೆ ಮಂಡಲದ ವತಿಯಿಂದ ದರೆಗುಡ್ಡೆಯ ಸಿರಿಸಂಪದ ಫಾರ್ಮ್ನಲ್ಲಿ ಜು.3ರಂದು ಕೆಸರ್‍ಡೊಂಜಿ ಕಮಲದಿನ ಎಂಬ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಮಂಡಲಾಧ್ಯಕ್ಷ ಸುನಿಲ್ ಆಳ್ವ ತಿಳಿಸಿದರು. ಬಿಜೆಪಿ ಕಛೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಮತ್ತು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಕುದ್ರೋಳಿ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಕುದ್ರೋಳಿಯ 6 ವಿದ್ಯಾರ್ಥಿಗಳಿಗೆ ಕುದ್ರೋಳಿಯ ಫಾತಿಮಾ ಇಸ್ಲಾಮಿಕ್ ಸೆಂಟರ್‍ನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಆಯಿಷಾ ಸಫಾ ಅವರ ಪವಿತ್ರ ಕುರ್ ಆನ್ ಪಠಣದೊಂದಿಗೆ ಆರಂಭಗೊಂಡಿತು. ನಂತರ ಎಸ್ ಐ ಓ ಮಂಗಳೂರು ನಗರ ಅಧ್ಯಕ್ಷರಾದ
ಭಟ್ಕಳ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಇದೀಗ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿದೆ.ಪುರಸಭಾ ಕಾರ್ಯಾಲಯದ ಕಟ್ಟಡದಲ್ಲಿ ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಸೋಮವಾರ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪುರಸಭೆ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿದ ನಂತರ ಸೋಮವಾರ ಪುರಸಭೆ ಎದುರು ನಾಮಫಲ ಅಳವಡಿಸಲು ಗುತ್ತಿಗೆದಾರ ಸಿದ್ದತೆ
ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದ ಗೇಟಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಬೀಗ ಜಡಿದಿದ್ದಾರೆ. ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಒಣಕಸ ಮಾತ್ರ ಹಾಕಬೇಕು ಎನ್ನುವ ಸೂಚನೆಯನ್ನು ತಿರಸ್ಕರಿಸಿ ಹಸಿ ತ್ಯಾಜ್ಯಗಳನ್ನು ಹಾಕಿದ್ದ ಪರಿಣಾಮ ತ್ಯಾಜ್ಯಗಳು ಮಳೆ ನೀರಿಗೆ ಕೊಳೆತು ದುರ್ನಾತ ಬೀರಿ ಪರಿಸರವನ್ನು ಕಲುಷಿತಗೊಳಿಸಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ತಪ್ಪಿದ್ದಲ್ಲಿ ಜಿಲ್ಲಾಧಿಕಾರಿ
ರಾಜಸ್ಥಾನದ ಉದಯಪುರದಲ್ಲಿ ಹಿಂದು ಯುವಕನ ಶಿರಚ್ಛೇದ ಘಟನೆ ಮಾನವೀಯತೆಗೆ ಸವಾಲಾದ ಪ್ರಕರಣ. ಕೃತ್ಯದ ಹಿಂದೆ ವ್ಯವಸ್ಥಿತ ಸಂಚಿದೆ, ಭಯೋತ್ಪಾದಕ ಕೃತ್ಯ. ದೇಶದಲ್ಲಿ ಐಸಿಸ್, ತಾಲಿಬಾನ್ ಮಾನಸಿಕತೆ ತಲೆ ಎತ್ತುತ್ತಿರುವುದಕ್ಕೆ ಇದು ನಿದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿ ಕಾರಿದ್ದಾರೆ. ಇದೇ ಮಾದರಿಯ ಹತ್ಯೆ ಶಿವಮೊಗ್ಗದಲ್ಲೂ ನಡೆದಿತ್ತು. ಹಿಂದು ಕಾರ್ಯಕರ್ತ ಹರ್ಷನ ಕತ್ತು ಕೊಯ್ದು ಅದರ ವಿಡಿಯೋವನ್ನು ಆತನ ಸೋದರಿಗೆ ಕಳಿಸಲಾಗಿತ್ತು.
ನಗರದ ಪಂಪ್‍ವೆಲ್ ಬಸ್ಸು ನಿಲುಗಡೆಯಾಗುವ ಸಮೀಪದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಳಗಡೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಚಿಮ್ಮುತ್ತಿದೆ.ಬಿರುಕು ಬಿಟ್ಟಿರುವ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ರಸ್ತೆಯಲ್ಲೆಲ್ಲಾ ಹರಿದಾಡುತ್ತಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಯ ಕೆಳಭಾಗದಲ್ಲಿರುವ ನೀರು ಸರಬರಾಜಿನ ಪೈಪ್ ಒಡೆದಿದ್ದರಿಂದ ರಸ್ತೆ ಮಧ್ಯೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ.ಪಂಪ್‍ವೆಲ್ ಮೇಲ್ಸೇತುವೆಯ
ಮಂಗಳೂರಿನ ಬೈಕಂಪಾಡಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪ್ರತಿಷ್ಠಿತ ಕಂಪನಿಯಾದ ಓಶಿಮಾ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್‍ನ ವೆಲ್ಡಿಂಗ್ ಎಲೆಕ್ಟ್ರೋಡ್ ಮತ್ತು ಇನ್ವರ್ಟರ್ ಬ್ಯಾಟರಿ ತಯಾರಕರು ಬೈಕಂಪಾಡಿಯ ಕೆನರಾಇಂಡಸ್ಟ್ರೀಸ್ ಅಸೋಸಿಯೇಶನ್‍ನಲ್ಲಿ, ತನ್ನ ಕಂಪನಿಯ ರಾಯಭಾರಿಯನ್ನು ಪರಿಚಯಿಸುವ ಹಾಗೂ ಪ್ರಚಾರ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು
ಮಾಧ್ಯಮಲೋಕದಲ್ಲಿ ಮತ್ತೊಂದು ಹೊಸ ಬದಲಾವಣೆಯ ಡಿಜಿಟಲ್ ಕ್ರಾಂತಿ ಶುರುವಾಗಿದ್ದು ಗೊತ್ತೇಯಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ. ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಡಿಜಿಟಲ್ ಮಾಧ್ಯಮ ಮಿತ್ರರ ಸಭೆಯಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಅಸ್ಥಿತ್ವಕ್ಕೆ ಬಂದಿದೆ. ಈ ಮೀಡಿಯಾ ಫೊರಂ ನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರಾದ ಸಮೀವುಲ್ಲಾ
ಮಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿದ ಅವರು, ಮತದಾರರಿಗೆ ಹಾಗೂ ಖರ್ಚಿಗೆ ಒಂದೇ ಒಂದು ರೂಪಾಯಿ ಖರ್ಚು ಮಾಡಿದೇ ಗೆದ್ದಂತಹ ಅಭ್ಯರ್ಥಿ ಅಂದರೆ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಎಂದು ಹೇಳಲು ಸಂತೋಷಪಡುತ್ತೇನೆ. ಇದು ನೈಜ ಮತದಾರರ ಗೆಲುವು ಅಂತ ನನಗೆ ಅನಿಸುತ್ತೆ. ಮತ್ತು ಇದು ಬಿಜೆಪಿ ಪಕ್ಷದ ಪ್ರತಿ
ಕೆಲ ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸುಳ್ಯದ ಅವಿನಾಶ್ ಬಸ್ ಗಳ ಮಾಲಕ ನಾರಾಯಣ ರೈ (73) ಕಳೆದ ರಾತ್ರಿ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.ಮಾನಸಿಕವಾಗಿ ತೀವ್ರ ನೊಂದಿದ್ದರೆನ್ನಲಾಗಿದೆ. ಕಳೆದ ರಾತ್ರಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯದ ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯ ಇಲ್ಲದಂತಹ


















