Home Posts tagged #v4news karnataka (Page 239)

ಸಹಕಾರಿ ಕ್ಷೇತ್ರದಲ್ಲಿ ರಂಗನಾಥ ಶೆಟ್ಟಿ ಸಾಧನೆ ಅನುಕರಣೀಯ: ಶ್ರೀ ಚಂದ್ರಶೇಖರ ಸ್ವಾಮೀಜಿ

ಮುಲ್ಕಿ:ಗ್ರಾಮೀಣ ಪ್ರದೇಶದ ಸಹಕಾರಿ ಕ್ಷೇತ್ರದಲ್ಲಿ ಜನಸೇವೆ ಮೂಲಕ ರಂಗನಾಥ ಶೆಟ್ಟಿಯವರ ಸಾಧನೆ ಅನುಕರಣೀಯ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು. ಅವರು ಮುಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಪ್ರಕೋಷ್ಠದ ಸಂಚಾಲಕರಾಗಿ ಆಯ್ಕೆಯಾದ

ರಾಜ್ಯ ಬಿಜೆಪಿ ಸರ್ಕಾರದಲ್ಲಿ ರೆಡ್ಡಿ ಜನಾಂಗದ  ನಿರ್ಲಕ್ಷ್ಯ: 2 ವರ್ಷಗಳಿಂದ ರಾಜಕೀಯ ಅಧಿಕಾರ ನೀಡದೇ ಇರುವುದಕ್ಕೆ ಆಕ್ರೋಶ 

ಬೆಂಗಳೂರು: ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಮಹತ್ವದ ಕೊಡುಗೆ ನೀಡಿರುವ ರೆಡ್ಡಿ ಜನಾಂಗಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ಮಾನ ಹಾಗೂ ರಾಜಕೀಯ ಅವಕಾಶಗಳನ್ನು ನೀಡದೇ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ರೆಡ್ಡಿ ಜನ ಸಂಘ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು. ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ ರೆಡ್ಡಿ ಸಮುದಾಯ ಸುಮಾರು 60 ಲಕ್ಷಕ್ಕೂ ಹೆಚ್ಚಿದ್ದು, ಸಚಿವ ಸಂಪುಟದಲ್ಲಿ

ನಾನು ಕೇಳಿದ ಖಾತೆ ನೀಡಿಲ್ಲ : ಸಚಿವ ಆನಂದ್ ಸಿಂಗ್ ಅಸಮಾಧಾನ

ಬಳ್ಳಾರಿ: ರಾಜ್ಯದ ನೂತನ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಖಾತೆ ಹಂಚಿಕೆ ಬೆನ್ನಲ್ಲೆ ಗಣಿನಾಡಿನ ಸಚಿವ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕೇಳಿದ ಖಾತೆ ಕೊಟ್ಟಿಲ್ಲ , ಕೊಟ್ಟರೆ ಸರಿ ಇಲ್ಲದಿದ್ದರೆ ಶಾಸಕನಾಗಿಯಷ್ಟೇ ಮುಂದುವರೆಯುವೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ನಾನು ಕೇಳಿದ ಖಾತೆಯನ್ನು ನೀಡಿಲ್ಲ. ಇದು ನನಗೆ ಮಾಡಿದ ಅವಮಾನ ಎನ್ನಲ್ಲ. ನನಗೆ ನಿರಾಸೆಯಾಗಿದೆ

ಬೋರ್‍ವೆಲ್ ಕೊರೆಸುವ ವಾಹನ ಬಂದು ರಸ್ತೆ ಹಾಳಾಗಿದೆ ಎಂಬ ಆರೋಪ : ವ್ಯಕ್ತಿಯೋರ್ವರಿಗೆ ಕಲ್ಲಿನಿಂದ ಹೊಡೆದು ಹಲ್ಲೆ

ಬಂಟ್ವಾಳ: ಬೊರೆವೆಲ್ ಕೊರೆಸುವ ವಾಹನ ಬಂದು ರಸ್ತೆ ಹಾಳಾಗಿದೆ ಎಂದು ಆರೋಪಿಸಿ ವ್ಯಕ್ತಿಯೊರ್ವರಿಗೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಲ್ಲದೆ ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿದ ಘಟನೆ ಸಂಗಬೆಟ್ಟು ಗ್ರಾಮದ ಅಳಿಕೆ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಅಲ್ವಿನ್ ರಿಚರ್ಡ್ ಫಲೇರಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳೀಯ ನಿವಾಸಿ ಅನಿಲ್ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.ರಿಚರ್ಡ್ ಫಲೇರಾ ತನ್ನ ತಂದೆಯಿಯೊಂದಿಗೆ ಅಳಿಕೆ ಎಂಬಲ್ಲಿ

ನೂತನ ಸಚಿವರಿಗೆ ಖಾತೆ ಹಂಚಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಸೇರ್ಪಡೆಗೊಂಡ ಸಚಿವರಿಗೆ ಇದೀಗ ಖಾತೆಗಳನ್ನು ಹಂಚಲಾಗಿದೆ.  ಸುನಿಲ್ ಕುಮಾರ್ ಅವರಿಗೆ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಅರಗ ಜ್ಞಾನೇಂದ್ರ ಅವರಿಗೆ ಗೃಹಖಾತೆ  ಬಿ.ಸಿ.ನಾಗೇಶ್ -ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶ್ರೀರಾಮುಲು- ಸಾರಿಗೆ ಮತ್ತು ಎಸ್ಟಿ ಕಲ್ಯಾಣ ಮುರುಗೇಶ್ ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಪ್ರಭುಚೌಹಾಣ್- ಪಶುಸಂಗೋಪನೆ ಎಸ್ಟಿ ಸೋಮಶೇಖರ್ –

ಮಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ: ಪೊಲೀಸರಿಂದ ತಪಾಸಣೆ

ಕೊರೋನ ಹೆಚ್ಚಳ ಭೀತಿಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಲಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಹಾಗೂ ಜನ ಸಂಚಾರ ವಿರಳವಾಗಿದೆ. ದಿನಸಿ, ತರಕಾರಿ, ಮಾಂಸ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು, ಬೀದಿ ಬದಿ ವ್ಯಾಪಾರಕ್ಕೆ ಬೆಳಗ್ಗೆ 5 ರಿಂದ ಮಧ್ಯಾಹ್ನ 2ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಆದರೆ ಗ್ರಾಹಕರ ಸಂಖ್ಯೆ ವಿರಳವಾಗಿದೆ. ಅಗತ್ಯ ವಸ್ತುಗಳ ಸಾಗಾಟದ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ಆಟೊ ರಿಕ್ಷಾಗಳು

ವೀಕೆಂಡ್ ಕರ್ಪ್ಯೂಗೆ ಬಂಟ್ವಾಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ

ಕೋವಿಡ್ 3ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಘೋಷಿಸಿದ ವೀಕೆಂಡ್ ಕರ್ಪ್ಯೂಗೆ ಬಂಟ್ವಾಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಟ್ಟುನಿಟ್ಟಿನ ಕರ್ಪ್ಯೂ ಪಾಲನೆಯಾಗದ ಹಿನ್ನಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು, ಸರಕಾರಿ ಅಂಗಡಿ, ಬಸ್, ಕಾರು, ರಿಕ್ಷಾ ಸಹಿತ ಖಾಸಗಿ ವಾಹನಗಳ ಸಂಚಾರ ಎಂದಿನಂತೆಯೇ ಇತ್ತು. ಕೆಲವೊಂದು ಅಂಗಡಿ, ಕಚೇರಿಗಳು ಸ್ವಯಂ ಪ್ರೇರಿತರಾಗಿ ಬಂದ್ ಗೊಳಿಸಿ ವೀಕೆಂಡ್ ಕರ್ಪ್ಯೂಗೆ ಬೆಂಬಲ ನೀಡಿದ್ದಾರೆ. ಮೆಡಿಕಲ್,

ನ್ಯಾನೋ ವಿಜ್ಞಾನ ಮತ್ತು ನ್ಯಾನೊ ತಂತ್ರಜ್ಞಾನದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತು ಅಂತರಾಷ್ಟ್ರೀಯ ವಿಚಾರ ಸಮ್ಮೇಳನ

ಜಿ.ಹೆಚ್‌.ಎಸ್‌. ರಸ್ತೆ: ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ವತಿಯಿಂದನ್ಯಾನೊ ವಿಜ್ಞಾನಮತ್ತು ನ್ಯಾನೊತಂತ್ರಜ್ಞಾನದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತ ವಿಚಾರಸಮ್ಮೇಳನವನ್ನು ನಗರದ ಜಿ.ಹೆಚ್.‌ಎಸ್‌.ನಲ್ಲಿರುವಹೋಟೇಲ್‌ ಶ್ರೀನಿವಾಸ್‌ನಲ್ಲಿ (ಆನ್‌ಲೈನ್‌ ವೇದಿಕೆಯಮೂಲಕ) ಆಯೋಜಿಸಲಾಯಿತು. ಈ ವಿಚಾರಸಮ್ಮೇಳನವನ್ನು ಸಿಂಗಾಪುರದ ನ್ಯಾಶನಲ್‌ ಯೂನಿವರ್ಸಿಟಿಯಫ್ರೆಂಗ್ ನಿರ್ದೇಶಕಡಾ ಸೀರಾಮ್ ರಾಮಕೃಷ್ಣ ಅವರು

ಯಾವ ಖಾತೆ ನೀಡಿದರೂ ನಿಭಾಯಿಸುತ್ತೇನೆ : ಮಂಗಳೂರಿನಲ್ಲಿ ಸಚಿವ ಸುನೀಲ್ ಕುಮಾರ್ ಹೇಳಿಕೆ

ಮಂಗಳೂರು: ಯಾವ ಖಾತೆ ನೀಡಿದರೂ ನಿಭಾಯಿಸುತ್ತೇನೆ ಎಂದು ನೂತನವಾಗಿ ಸಚಿವರಾಗಿ ಆಯ್ಕೆಯಾದ ಸುನೀಲ್ ಕುಮಾರ್ ಹೇಳಿದರು.ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಂಗಳೂರಿಗೆ ಬಂದ ಅವರಿಗೆ ಕಾವೂರು ಜಂಕ್ಷನ್ ನಲ್ಲಿ ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜ ನೇತೃತ್ವದಲ್ಲಿ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ, ಕೊರೊನಾ ಮೂರನೇ ಹಂತದ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಇಂದು ಸಂಜೆ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ