Home Posts tagged #v4news karnataka (Page 37)

ನಾರಾಯಣ ಗುರು ಅಭಿವೃದ್ಧಿ ನಿಗಮ ಚುನಾವಣೆಯ ಗಿಮಿಕ್ : ಸತ್ಯಜಿತ್ ಸುರತ್ಕಲ್

ಚುನಾವಣೆಗೆ ಎರಡು ತಿಂಗಳು ಇರುವಾಗ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದಾರೆ. ಈಗಲಾದರೂ ಮಾಡಿದ್ದಕ್ಕೆ ರಾಜ್ಯ ಸರ್ಕಾರ ಮತ್ತು ಇದಕ್ಕಾಗಿ ಹೋರಾಟ ಮಾಡಿದವರಿಗೆ ಅಭಿನಂದನೆ ಹೇಳುತ್ತೇವೆ. ಆದರೆ ಈ ಹೊತ್ತಿನಲ್ಲಿ ಅಭಿವೃದ್ಧಿ ನಿಗಮ ಘೋಷಿಸಿ ಇದರ ಲಾಭ ಈಗ ಸಮುದಾಯಕ್ಕೆ ಸಿಗಲು ಸಾಧ್ಯವಿಲ್ಲ. ಇದೊಂದು ಚುನಾವಣೆಗೆ ಮೆಟ್ಟಿಲು ಅನ್ನುವ ರೀತಿ ಮಾಡಿದ್ದಾರಷ್ಟೇ

ಬಹರೈನ್ : ಫೆ.24ರಂದು ಕೋಟಿ ಚೆನ್ನಯ ತುಳು ಯಕ್ಷಗಾನ ಪ್ರದರ್ಶನ

ಬಹರೈನ್ ಅನಿವಾಸಿ ಬಿಲ್ಲವ ಸಮುದಾಯವಾದ “ಬಹರೈನ್ ಬಿಲ್ಲವಾಸ್ ” ಯಕ್ಷ ದುನಿಪು -2023″ಎನ್ನುವಂತಹ ತುಳು ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಯಕ್ಷಗಾನ ಪ್ರದರ್ಶನ ಫೆಬ್ರವರಿ 24ರ ಶುಕ್ರವಾರದಂದು ಸಂಜೆ 5 ಘಂಟೆಗೆ ಸರಿಯಾಗಿ ಮಾನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಜರುಗಲಿರುವುದು. “ಯಕ್ಷ ದುನಿಪು -2023” ಕಾರ್ಯಕ್ರಮದಲ್ಲಿ ಇಲ್ಲಿನ ಯಕ್ಷ ಕಲಾವಿದರು ಹಾಗು ನಾಡಿನ ಜನಪ್ರಿಯ ಅತಿಥಿ ಕಲಾವಿದರುಗಳ

ಉಳ್ಳಾಲ ನಗರಸಭೆಯ 2023-24ನೇ ಸಾಲಿನ ಬಜೆಟ್ : ನಗರಸಭೆಯ ಸದಸ್ಯರ ನಡುವೆ ನೂಕಾಟ, ತಳ್ಳಾಟ

ಉಳ್ಳಾಲ: ಉಳ್ಳಾಲ ನಗರಸಭೆಯ 2023-24 ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು ಬಜೆಟ್‍ನ್ನು ವಿರೋಧಿಸಿದ ಜೆಡಿಎಸ್ ಕೌನ್ಸಿಲರ್‍ಗಳು ಕಿವಿಗೆ ಹೂವಿಟ್ಟು ಆಡಳಿತ ರೂಢ ಕಾಂಗ್ರೆಸನ್ನು ಅಣಕಿಸಿದ್ದಾರೆ. ಕಳೆದ ರಾಜ್ಯ ಬಜೆಟ್ ಮಂಡನೆ ವೇಳೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸದನದಲ್ಲಿ ಕಿವಿಗೆ ಹೂ ಇಟ್ಟು ಬಿಜೆಪಿ ಸರಕಾರವನ್ನ ಅಣಕಿಸಿ ಗಮನ ಸೆಳೆದಿದ್ದರು.ಕಾಂಗ್ರೆಸ್ ಅಸ್ತ್ರವನ್ನೇ ಇದೀಗ ಜೆಡಿಎಸ್ ನ ಉಳ್ಳಾಲ ನಗರ ಸದಸ್ಯರು ಬಳಸಿ ಆಡಳಿತರೂಢ ಕಾಂಗ್ರೆಸ್

ಮಾರುತಿ ಟ್ರೋಫಿ – ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದ ಪ್ರಕೃತಿ ನ್ಯಾಶ್ ಬೆಂಗಳೂರು

ಮಂಗಳೂರು-ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಮಾಜ ಸೇವಾ ನಿರತ ಸಂಸ್ಥೆ “ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್(ರಿ) ಮೊಗವೀರ ಪಟ್ಣ ಉಳ್ಳಾಲ ಇವರ ಆಶ್ರಯದಲ್ಲಿ,ಅಗಲಿದ ಮಿತ್ರರ ಸ್ಮರಣಾರ್ಥ ಮತ್ತು 35 ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾದ ಅಖಿಲ ಭಾರತ ಮಟ್ಟದ ಹೊನಲು ಬೆಳಕಿನ “ಮಾರುತಿ ಟ್ರೋಫಿ-2023” ಪ್ರಶಸ್ತಿ ಪ್ರಕೃತಿ ನ್ಯಾಶ್ ತಂಡ ಜಯಿಸಿದೆ. ಫೈನಲ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಾನ್ಸನ್

ಫೆ.24 : ತಲಪಾಡಿಯಲ್ಲಿ ನಿರ್ಮಿಸಲಾದ ಸಮಗ್ರ ಚೆಕ್‍ಪೋಸ್ಟ್ ಉದ್ಘಾಟನೆ

ಮಂಜೇಶ್ವರ: ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಕಾಸರಗೋಡು ವಿಭಾಗದ ತಲಪ್ಪಾಡಿಯಲ್ಲಿ ಜಿಲ್ಲಾ ಗಡಿಯಲ್ಲಿ ನಿರ್ಮಿಸಲಾದ ಸಮಗ್ರ ಚೆಕ್ ಪೋಸ್ಟ್ ಕಟ್ಟಡವನ್ನು ಫೆಬ್ರವರಿ 24 ರಂದು ಬೆಳಿಗ್ಗೆ 10 ಗಂಟೆಗೆ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸಚಿವ ಎ.ಕೆ.ಸಶೀಂದ್ರನ್ ಉದ್ಘಾಟಿಸಲಿದ್ದಾರೆ. ರಾಜ್ಯ ಸರ್ಕಾರದ 100 ದಿನಗಳ ಕ್ರಿಯಾ ಚಟುವಟಿಕೆಗಳ ಕಾರ್ಯಕ್ರಮದ ಭಾಗವಾಗಿ ಕಟ್ಟಡ ಲೋಕಾರ್ಪಣೆಯಾಗುತ್ತಿದೆ. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಸಂಸದ ರಾಜ್

ಎಂ.ಎಸ್. ರಕ್ಷಾ ರಾಮಯ್ಯಗೆ ಏಐಸಿಸಿ ಸದಸ್ಯತ್ವ

ಬೆಂಗಳೂರು, : ಯುವ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಅವರನ್ನು ಏಐಸಿಸಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ನೇಮಕ ಮಾಡಿದ್ದಾರೆ. ಈ ಕುರಿತು ಏಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಯುವ ಕಾಂಗ್ರೆಸ್ ವಿಭಾಗದಿಂದ ರಕ್ಷಾ ರಾಮಯ್ಯ ಅವರಿಗೆ ಏಐಸಿಸಿಯಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗಿದ್ದು, ಯುವ ಸಮೂಹಕ್ಕೆ ಆದ್ಯತೆ ನೀಡಲಾಗಿದೆ

ತಲಪಾಡಿ : ನೀರು ಪೂರೈಕೆಗೆ ಒತ್ತಾಯಿಸಿ ಕಾಂಗ್ರೆಸ್ ಮನವಿ

ತಲಪಾಡಿ : ನೀರಿಲ್ಲದೇ ಸಂಕಷ್ಟ ಅನುಭವಿಸುತ್ತಿರುವ ತಲಪಾಡಿ ಗ್ರಾಮಕ್ಕೆ ಕೂಡಲೇ ಕುಡಿಯುವ ನೀರು ಪೂರೈಕೆ ಆರಂಭಿಸುವಂತೆ ಒತ್ತಾಯಿಸಿ ತಲಪಾಡಿ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದು ಉಳ್ಳಾಲ ತಹಶೀಲ್ದಾರ್ ಮತ್ತು ತಲಪಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಗ್ರಾಮದ ಕೆಲವೆಡೆಗೆ ಬಟ್ಟಪಾಡಿ ಪ್ರದೇಶದಿಂದ ನೀರಿನ ಪೈಪ್ ಲೈನ್ ಇದ್ದರೂ ನೀರು ಸರಬರಾಜು ಆಗುತ್ತಿಲ್ಲ. ಪೈಪ್ ಲೈನ್ ಇಲ್ಲದಿರುವ ಕೆಸಿ ರೋಡ್, ಪಳ್ಳ, ಪೂಮಣ್ಣು, ಕೆಸಿ ನಗರ, ಶಾಂತಿ

ಬಂಟ ಸಮುದಾಯದವರಿಗೆ ದೇವರೇ ಗುರು : ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ

ಮೂಡುಬಿದಿರೆ: ಬಂಟ ಸಮುದಾಯವು ಪರೋಪಕಾರ ದಂತಹ ದೊಡ್ಡ ಗುಣವನ್ನು ಹೊಂದಿದೆ. ಗುರುಪೀಠವಿಲ್ಲದೇ ಬಂಟ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ಇಂದು ಪ್ರಗತಿ ಸಾಧಿಸಿದೆ, ಸಮುದಾಯದ ಹಿರಿಯರು ಗುರುಪೀಠಕ್ಕೆ ಹೋರಾಡದೆ ಬಂಟರ ಸಂಘ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದರೆ ಸಮುದಾಯದ ಅಭಿವೃದ್ಧಿ ಸಾಧ್ಯ. ಈ ಸಮುದಾಯವು ಗುರುಪೀಠಕ್ಕೆ ಹೆಚ್ಚಿನ ಆದ್ಯತೆ ನೀಡದೆ ಹಿರಿಯರು ತೋರಿದ ಹಾದಿಯಲ್ಲೇ ಮುಂದೆ ಸಾಗಬೇಕು,ದೇವರನ್ನೇ ಗುರುವನ್ನಾಗಿ ಕಾಣಬೇಕು ಎಂದು ಕೇಮಾರು

ಬೈಂದೂರು ಲಾವಣ್ಯ (ರಿ) ಇದರ 46ನೇ ವಾರ್ಷಿಕೋತ್ಸವ

ಬೈಂದೂರು ಇಲ್ಲಿನ ಲಾವಣ್ಯ ರಿ ಇದರ 46ನೇ ವಾರ್ಷಿಕೋತ್ಸವ ಅಂಗವಾಗಿ ರಂಗ ಪಂಚಮಿ 2023 ನಾಟಕೋತ್ಸವ ಹಾಗೂ ಯಕ್ಷಗಾನ ಉದ್ಘಾಟನಾ ಸಮಾರಂಭ ಬೈಂದೂರು ಶಾರದಾ ವೇದಿಕೆ ಸೋಮವಾರ ಸಂಜೆ ನಡೆಯಿತು. ಬೈಂದೂರು ಯು.ಬಿ.ಎಸ್ ಶೈಕ್ಷಣಿಕ ಶಿಕ್ಷಣ ಸಮೂಹ ಸಂಸ್ಥೆಯ ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ನಂದಗೋಕುಲ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಅವರು ಶುಭಾಶಂಸನೆಗೈದರು ಲಾವಣ್ಯ ರಿ ಬೈಂದೂರು ಅಧ್ಯಕ್ಷ ಬಿ. ನರಸಿಂಹ

ಫೆ. 22-25,ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ-ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮ

ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ವೇ| ಮೂ| ಬೆಟ್ಟಿಗೆ ವೆಂಕಟರಾಜ ತಂತ್ರಿಗಳ ನೇತೃತ್ವದಲ್ಲಿ ಫೆ. ೨೨ರಿಂದ ಮೊದಲ್ಗೊಂಡು ಫೆ. ೨೫ರವರೆಗೆ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಶ್ರೀಕ್ಷೇತ್ರದಲ್ಲಿ ನಡೆಸಿದ