Home Posts tagged #v4news karnataka (Page 94)

ಉಡುಪಿ : ಬೈಕ್‍ಗೆ ಲಾರಿ ಢಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಬೈಕ್ಕೊಂದಕ್ಕೆ ಲಾರಿಯೊಂದು ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉದ್ಯಾವರದಲ್ಲಿ ನಡೆದಿದೆ. ಮೃತ ವ್ಯಕ್ತಿ ಕಟಪಾಡಿ ಸರ್ಕಾರಿ ಗುಡ್ಡೆ ಮೂಡಬೆಟ್ಟು ನಿವಾಸಿ ಹೂವಿನ ವ್ಯಾಪಾರಿ ಮಹಮ್ಮದ್ ರಫೀಕ್ ಬಾವ(35), ವಿವಾಹಿತರಾಗಿದ್ದ ಇವರು ಒಂದು ಮಗುವಿನ ತಂದೆ, ಕಟಪಾಡಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಇವರು ದ್ವಿಚಕ್ರ ವಾಹನದಲ್ಲಿ

ತೊಕ್ಕೊಟ್ಟು – ಕುಂಪಲ ಬೈಪಾಸ್ : ಸರ್ವೀಸ್ ರಸ್ತೆಗೆ ಒತ್ತಾಯ : ತೀವ್ರ ಹೋರಾಟಕ್ಕೆ ನಿರ್ಧಾರ

ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ನಿಂದ ಕುಂಪಲ ಬೈಪಾಸ್ ತನಕ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವಂತೆ ಸಾರ್ವಜನಿಕ ಹೋರಾಟ ಸಮಿತಿಯು ಆಗ್ರಹಿಸಿದೆ. ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯ ಸಭೆಯು ಸೋಮವಾರ ಸಂಜೆ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಸಮಿತಿಯ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹೊರಾಟ ಸಮಿತಿಯ ಸಭೆಯಲ್ಲಿ ಸರ್ವ ಪಕ್ಷಗಳ ಮುಖಂಡರು

ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾಗಿ ಮಯೂರ್ ಉಳ್ಳಾಲ್ ಆಯ್ಕೆ

ಮಂಗಳೂರು . ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ 2022- 2024 ರ ಅವಧಿಗೆ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅರ್ಹವಾಗಿಯೇ ಅವಿರೋಧವಾಗಿ ಮಯೂರ್ ಉಳ್ಳಾಲ್ಆಯ್ಕೆಯಾಗಿದ್ದಾರೆ. ಕುಲಾಲ ಸಮಾಜದ ಏಳಿಗೆಗೆ ಹತ್ತುಹಲವಾರು ಚಿಂತನೆ ,ಯೋಜನೆ, ಯೋಚನೆಗಳನ್ನು ಹೊಂದಿರುವ ಮಯೂರ್ ಉಳ್ಳಾಲ್ . ಸಂಘದ ಆಡಳಿತದಲ್ಲಿರುವ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಮತ್ತು ಶ್ರೀ ದೇವಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದಾರೆ

ಸರಕಾರಿ ಆಸ್ಪತ್ರೆಯ ಎದುರುಗಡೆ ಕಾರಲ್ಲಿ ಮೃತದೇಹ ಪತ್ತೆ

ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ ನಿಂತಿರುವ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಪೆರಾಜೆಯ ಪೆರಂಗಜೆ ಗೌರೀಶ ಎಂಬ ಯುವಕನದೆಂದು ಗೊತ್ತಾಗಿದೆ.4 ದಿನಗಳ ಹಿಂದೆ ಗುರುವಾರ ದಿನ ಸಂಜೆ ಗೌರೀಶ ಕಾರಲ್ಲಿ ಬಂದು ಸರಕಾರಿ ಆಸ್ಪತ್ರೆಯ ಎದುರಿನ ಜಾಗದಲ್ಲಿ ಕಾರು ಪಾರ್ಕ್ ಮಾಡಿದ್ದನೆಂದೂ, ವಿಪರೀತ ಕುಡಿತದ ಪರಿಣಾಮವಾಗಿ ಶುಕ್ರವಾರ ದಿನ ಮೃತಪಟ್ಟಿರಬೇಕೆಂದೂ ಶಂಕಿಸಲಾಗಿದೆ.ಶವ ಬಾತುಕೊಂಡಿದ್ದು ವಾಸನೆ ಬರತೊಡಗಿದ ಹಿನ್ನಲೆಯಲ್ಲಿ ಆದಿತ್ಯವಾರ ಬೆಳಿಗ್ಗೆ

ಕಾರ್ಮಿಕ ವರ್ಗವಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ – ಎಸ್ ವರಲಕ್ಷ್ಮಿ

ಸಮಾಜದಲ್ಲಿ ಸಂಪತ್ತು ಸ್ರಷ್ಠಿಸುವ ಕಾರ್ಮಿಕ ವರ್ಗ ಮಾತ್ರವೇ ದೇಶದ ಆರ್ಥಿಕ ವ್ಯವಸ್ಥೆಯನ್ನು ಮುಂದಕ್ಕೊಯ್ಯುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ.ಆದರೆ ದೇಶವನ್ನಾಳುವ ನರೇಂದ್ರ ಮೋದಿ ಸರಕಾರವು ಕಾರ್ಮಿಕ ವರ್ಗವನ್ನು ನಗಣ್ಯ ಮಾಡಿ ಇಡೀ ಆರ್ಥಿಕ ವ್ಯವಸ್ಥೆಯನ್ನು ದೇಶದ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆದು, ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುವ ಮೂಲಕ ಕಾರ್ಮಿಕ ವರ್ಗವನ್ನೇ ಇನ್ನಿಲ್ಲವಾಗಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ. ದೇಶದ ಕಾರ್ಮಿಕ

ವೆಸ್ಟ್ ಕೋಸ್ಟ್ ಮೋಟರ್ಸ್‍ನಲ್ಲಿ ದೀಪಾವಳಿ ಧಮಾಕ

ದ್ವಿಚಕ್ರ ವಾಹನದಲ್ಲಿಯೇ ಹೆಸರುವಾಸಿಯಾಗಿರುವ ಮಂಗಳೂರಿನ ವೆಸ್ಟ್ ಕೋಸ್ಟ್ ಮೋಟರ್ಸ್‍ನಲ್ಲಿ ದ್ವಿಚಕ್ರ ಖರೀದಿದಾರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಧಮಾಕ, ವಿಶೇಷ ಆಕರ್ಷಕ ಬಹುಮಾನಗಳನ್ನು ನೀಡುತ್ತಿದ್ದಾರೆ. ಪ್ರತಿವಾರ ಲಕ್ಕಿ ಡ್ರಾ ನಡೆಯಲಿದ್ದು ವಿಜೇತರಿಗೆ ಇಯರ್ ಪೋಡ್ಸ್ ಸಿಗಲಿದೆ, ಅದರ ಜೊತೆಗೆ ಬೈಕ್ ಖರೀದಿದಾರರಿಗೆ ಬಂಪರ್ ಡ್ರಾ ನಡೆಯಲಿದ್ದು, ವಿಜೇತರಿಗೆ ನಲ್ವತ್ತು ಇಂಚಿ ನ ಎಲ್‍ಇಡಿ ಟಿವಿ, ಸ್ಮಾರ್ಟ್ ವಾಚ್, ಮೊಬೈಲ್ ಫೋನ್

ಡಿ 21ರಿಂದ 27 ರವರೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಭಾರತ್ ಸ್ಕೌಟ್ಸ್-ಗೈಡ್ಸ್

ಭಾರತ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಮತ್ತು ದ.ಕ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್‍ನ ಸಾಂಸ್ಕøತಿಕ ಜಾಂಬೂರಿ-2022 ಕಾರ್ಯಕ್ರಮ ಡಿಸೆಂಬರ್ 21 ರಿಂದ 27ರ ವರೆಗೂ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ

ಅಕ್ಟೋಬರ್ 14 ಮತ್ತು 15ರಂದು ಆಳ್ವಾಸ್ ಪ್ರಗತಿ-2022, ಬೃಹತ್ ಉದ್ಯೋಗ ಮೇಳ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ ಅಕ್ಟೋಬರ್ 14 ಮತ್ತು 15 ರಂದು ಮೂಡಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿ, ಕಳೆದ 11 ವರ್ಷಗಳಿಂದ ಉದ್ಯೋಗ ಮೇಳವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಇದು 12ನೇ ವರ್ಷದ ಉದ್ಯೋಗ ಮೇಳವನ್ನು

ಬೆಳ್ಳಾರೆಯಲ್ಲಿ ವೇದಾಮೃತ ಚಿಕಿತ್ಸಾಲಯ ಆರಂಭ

ಸುಳ್ಯ ತಾಲೂಕಿನ ಬೆಳ್ಳಾರೆಯ ಕೆಳಗಿನ ಪೇಟೆ ಸಿ.ಎ.ಬ್ಯಾಂಕಿನ ಹತ್ತಿರ ಹರ್ಷ ಕಾಂಪ್ಲೆಕ್ಸ್ ನಲ್ಲಿ ಡಾ| ಕಾವ್ಯಾ ಜೆ.ಎಚ್ ಅವರ ವೇದಾಮೃತ ಆಯುರ್ವೇದ ಚಿಕಿತ್ಸಾಲಯವು ಅ.10 ರಂದು ಇಂದು ಶುಭಾರಂಭಗೊಂಡಿದೆ ವೇದಾಮೃತ ಚಿಕಿತ್ಸಾಲಯದಲ್ಲಿ ಪ್ರಮುಖವಾಗಿ ಸೋರಿಯಾಸಿಸ್, ಏಕ್ಸಿಮಾ, ಮೊಡವೆ ಮುಂತಾದ ಚರ್ಮರೋಗಗಳು, ರುಮಾಟೈಡ್ ಆರ್ಥ್ರೈಟಿಸ್, ಆಸ್ಟಿಯೋ ಆರ್ಥ್ರೈಟಿಸ್, ಕತ್ತುನೋವು, ಸೊಂಟನೋವು, ಮಂಡಿನೋವು, ಪಾರ್ಶ್ವವಾಯು, ಬೆಲ್ಸ್ ಪಾಲ್ಸಿ, ಮಸ್ಕ್ಯುಲರ್ ದಿಸ್ಟ್ರೋಫಿ,

ಮೀನಿನ ನೀರು ಚೆಲ್ಲಿಕೊಂಡು ಹೋಗುತ್ತಿದ್ದ ವಾಹನಗಳಿಗೆ ದಂಡ

ಮೀನು ಸಾಗಾಟ ವಾಹನಗಳು ಹೆದ್ದಾರಿ ಎಲ್ಲೆಡೆ ಮೀನಿನ ನೀರನ್ನು ಚೆಲ್ಲಿಕೊಂಡು ಹೋಗುತ್ತಿದ್ದ ವಾಹನಗಳನ್ನು ಉಚ್ವಿಲದಲ್ಲಿ ತಡೆದ ಪೊಲೀಸರು ದಂಡ ವಿಧಿಸಿದ್ದಾರೆ.ಕೇರಳ ರಾಜ್ಯದಲ್ಲಿ ಹೆದ್ದಾರಿಯಲ್ಲಿ ಮೀನಿನ ನೀರು ಚೆಲ್ಲಿಕೊಂಡು ಹೋಗುವ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಯಲ್ಲಿ ಇರುವುದರಿಂದ ಅಲ್ಲಿ ಯಾವುದೇ ಕಾರಣಕ್ಕೆ ಹೆದ್ದಾರಿಗೆ ಚೆಲ್ಲದ ಮೀನಿನ ನೀರು ಇಲ್ಲಿ ಮಾತ್ರ ಯಾವುದೇ ಲಂಗು ಲಗಾಮು ಇಲ್ಲದೆ ಹೆದ್ದಾರಿಗೆ ಚೆಲ್ಲಿಕೊಂಡು ಹೋಗುವುದರಿಂದ ಪಾದಚಾರಿಗಳು