Home Posts tagged V4News (Page 24)

ಮಧ್ಯ ಪ್ರದೇಶ:ಎಲ್ಲರಿಗೂ ಎರಡು ಲಾಡು, ನನಗೆ ಒಂದು ಮುಖ್ಯಮಂತ್ರಿಗಳಿಗೆ ಸಾಮಾನ್ಯನಿಂದ ದೂರು

ಮಧ್ಯ ಪ್ರದೇಶದಲ್ಲಿ ಹಂಚಿದ ಲಾಡು ಪೊಟ್ಟಣದಲ್ಲಿ ಎಲ್ಲರಿಗೂ ಎರಡು ಲಾಡು ಸಿಕ್ಕರೆ, ಒಬ್ಬ ಸಾಮಾನ್ಯನಿಗೆ ಒಂದು ಲಾಡು ಸಿಕ್ಕಿತ್ತು. ಆತನು ಮುಖ್ಯಮಂತ್ರಿಗಳ ಸಹಾಯವಾಣಿಯಲ್ಲಿ ದೂರು ಸಲ್ಲಿಸಿದ; ಪಂಚಾಯತ್ ಒಂದು ಕಿಲೋ ಸಿಹಿ ತಪ್ಪು ದಂಡ ಕೊಟ್ಟಿತು.ಈ ಘಟನೆಯು ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯಲ್ಲಿಸ್ವಾತಂತ್ರ‍್ಯ ದಿನಾಚರಣೆಯಂದು ನಡೆದಿದೆ. ಕಮಲೇಶ್ ಕುಶ್ವಾಹನಿಗೆ ಮಾತ್ರ

ಪಡುಬಿದ್ರಿ : ಯುವವಾಹಿನಿ ಪಡುಬಿದ್ರಿ ಘಟಕದ 2025-26ನೇ ಸಾಲಿನ ಪದಗ್ರಹಣ

ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕದ 2025-26ನೇ ಸಾಲಿನ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾ ನಿಧಿ ವಿತರಣೆ ಕಾರ್ಯಕ್ರಮ ಆ. 24 ಆದಿತ್ಯವಾರ ಮಧ್ಯಾಹ್ನ ಗಂಟೆ 2 ಕ್ಕೆ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಜರಗಲಿದೆ. ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷೆ ಶಶಿಕಲಾ ಯಶೋಧರ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮವನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಕಣ್ಣಂಗಾರು

ಮೂಡುಬಿದಿರೆ: ದೊಡ್ಮನೆ ಫ್ರೆಂಡ್ಸ್ ಬೆದ್ರ ಇವರ ಹೊಸ ಲೋಗೋ ಬಿಡುಗಡೆ ಕಾರ್ಯಕ್ರಮ

ಮೂಡುಬಿದಿರೆ: ದೊಡ್ಮನೆ ಫ್ರೆಂಡ್ಸ್ ಬೆದ್ರ ಇವರ ಹೊಸ ಲೋಗೋ ಬಿಡುಗಡೆ ಕಾರ್ಯಕ್ರಮ ಮೂಡಬಿದಿರೆಯ ಶ್ರೀ ಗೌರಿ ದೇವಸ್ಥಾನದಲ್ಲಿ ನಡೆಯಿತು. ತಂಡದ ಹೊಸ ಲೋಗೋವನ್ನು ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡುಬಿದರೆ ಇವರು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, 9 ವರ್ಷಗಳಿಂದ ದೊಡ್ಮನೆ ಫ್ರೆಂಡ್ಸ್ ತಂಡವು ಸ್ವಚ್ಛತಾ ಕಾರ್ಯಕ್ರಮ, ಚಂದ್ರಶೇಖರ

ನದಿಗಳು ಇಲ್ಲದ ಪ್ರಪಂಚದ ಅತಿ ದೊಡ್ಡ ದೇಶ

ಜಗತ್ತಿನಲ್ಲಿ ನದಿಗಳು ಇಲ್ಲದ ಅತಿ ದೊಡ್ಡ ದೇಶವಾಗಿದೆ ಸೌದಿ ಅರೇಬಿಯಾ. ಬಾವಿ, ಒಯಸಿಸ್ ಸಾಕಾಗದ ಕಾಲವಿದು.ನದಿಗಳು ಇಲ್ಲದ ದೇಶಗಳು ಈಗ ಕುಡಿಯುವ ನೀರಿಗೆ ಡಿಸಾಲಿನೇಶನ್ ಎಂಬ ಉಪ್ಪುಕಳೆ ತಂತ್ರಜ್ಞಾನವನ್ನು ನಂಬಿವೆ. ಕೆಳಗಿನವುಗಳೆಲ್ಲ ನದಿಗಳು ಇಲ್ಲದ ದೇಶಗಳಾಗಿವೆ.ಸೌದಿ ಅರೇಬಿಯಾ 70 ಶೇಕಡಾ ಕುಡಿಯುವ ನೀರನ್ನು ಉಪ್ಪು ಕಳೆ ಮೂಲಕ ಪಡೆಯುತ್ತದೆ. ಅತಿ ಹೆಚ್ಚು ಎಂದರೆ 70 ಶೇಕಡಾ ಉಪ್ಪು ಕಳೆ ತಂತ್ರಜ್ಞಾನದ ಮೂಲಕ ಕುಡಿಯುವ ನೀರು ಪಡೆಯುವ ದೇಶ ಕತಾರ್.ಯುಎಇ- ಅರಬ್

ಉಳ್ಳಾಲ : ಬೈಕ್ ಢಿಕ್ಕಿ ಹೊಡೆದು ಗಂಭೀರಗೊಂಡಿದ್ದ ಪಾದಚಾರಿ ಸಾವು

ಹೆದ್ದಾರಿ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು ಎಂಬಲ್ಲಿ ನಡೆದಿದೆ. ಕುಂಪಲ ಚೇತನ ನಗರ ನಿವಾಸಿ ಲೋಕೇಶ್ (48)ಮೃತ ವ್ಯಕ್ತಿ. ತೊಕ್ಕೊಟ್ಟಿನ ವಾಣಿಜ್ಯ ಸಂಕೀರ್ಣವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಲೋಕೇಶ್ ಅವರು ಆ.15 ರ ಸಂಜೆ ರಾತ್ರಿ ಪಾಳಿ ಕೆಲಸಕ್ಕೆ ತೆರಳುವಾಗ ಕಾಪಿಕಾಡು ಎಂಬಲ್ಲಿ ಹೆದ್ದಾರಿ

ಹಣ್ಣಿನಲ್ಲಿ ಇಂಡೋನೇಶಿಯಾ ಸೋಲಿಸಿದ ಮಲೇಶಿಯಾ

ನೆಪೆಲಿಯಂ ಲೆಪ್ಪೆಸಿಯಂ ಎಂಬ ರಾಂಬುಟಾನ್ ಹಣ್ಣು ಜಾಗತಿಕವಾಗಿ ಅರ್ಧಕ್ಕರ್ಧ ಇಂಡೋನೇಶಿಯಾದಲ್ಲಿ ಬೆಳೆಯುತ್ತಿತ್ತು; ಆ ಸ್ಥಾನವನ್ನು ಈಗ ತಾಯ್‍ಲ್ಯಾಂಡ್ ಕಸಿದುಕೊಂಡಿದೆ.ರಾಂಬುಟಾನ್ ಮೂಲ ಕೊಂಗಣ ಎಂದರೆ ಆಗ್ನೇಯ ಏಶಿಯಾ. ಅರಬ್ ವ್ಯಾಪಾರಿಗಳು ನಡುಗಾಲದಲ್ಲಿ ಇದನ್ನು ಆಫ್ರಿಕಾದ ಜಾಂಜಿಬಾರ್ ಮೊದಲಾದ ಕಡೆಗೆ ಒಯ್ದರು. ಕಳೆದ ಶತಮಾನದಲ್ಲಿ ನಡುವಣ ಅಮೆರಿಕದ ದೇಶಗಳಿಗೆ ಈ ಉಷ್ಣವಲಯದ ಹಣ್ಣಿನ ಬೆಳೆ ವಿಸ್ತರಿಸಿದೆ. ದಶಕದ ಹಿಂದಿನವರೆಗೆ ಇಂಡೋನೇಶಿಯಾ ಮುಂದಿತ್ತು. ಕಳೆದೊಂದು

ಬಹರೀಕ್‍ನ ದಾಕಿಯಾ ಗ್ರಾಮ:ಐದರ ಹುಡುಗನ ಹಿಡಿದ ಮೊಸಳೆ ಬಡಿದು ಹೋರಾಡಿದ ಮಹಿಳೆ ಮಗನನ್ನು ಉಳಿಸಿಕೊಂಡ ವನಿತೆ

ಉತ್ತರ ಪ್ರದೇಶ ರಾಜ್ಯದ ಬಹರೀಕ್‍ನ ದಾಕಿಯಾ ಗ್ರಾಮದಲ್ಲಿ ಹುಡುಗನೊಬ್ಬನನ್ನು ಹಿಡಿದ ಮೊಸಳೆಯ ಜೊತೆಗೆ ಹೋರಾಡಿ ಮಹಿಳೆಯೊಬ್ಬಳು ಮಗನನ್ನು ರಕ್ಷಿಸಿಕೊಂಡ ಸಾಹಸಗಾತೆ ನಡೆದಿದೆ.ದಾಕಿಯಾ ಗ್ರಾಮದ ವೀರೂ ಎಂಬ ಬಾಲಕನು ಕಾಲುವೆಯ ಪಕ್ಕದಲ್ಲಿ ಆಟವಾಡುತ್ತಿದ್ದ. ಆಗ ಹಾರಿ ಬಂದ ಮೊಸಳೆಯೊಂದು ಐದರ ಆ ಹುಡುಗನ್ನು ಲಬಕ್ಕ ಹಿಡಿದು ನೀರಿಗೆ ಎಳೆಯಿತು. ಹುಡುಗ ಕೂಗಿಕೊಂಡಾಗ ತಾಯಿ ಮಾಯಾ ಓಡಿ ಬಂದಿದ್ದಾಳೆ. ಏಳು ಅಡಿ ಉದ್ದದ ಮೊಸಳೆಯನ್ನ ಹಿಡಿದು ಗುದ್ದಿದ ಮಹಿಳೆ ಮಾಯಾ ಅದರ

ನಟಿಗೆ ಶಾಸಕರೊಬ್ಬರಿಂದ ಕೆಟ್ಟ ಸಂದೇಶ ಮಲಯಾಳಂ ನಟಿ ರಿನಿ ಜಾರ್ಜ್ ದೂರುಕಾಂಗ್ರೆಸ್ಸನ್ನು ಗುರಿ ಮಾಡಿ ದೂರಿದ ಬಿಜೆಪಿ

ಶಾಸಕರೊಬ್ಬರು ತನಗೆ ಪೋಲಿ ಸಂದೇಶ ಕಳುಹಿಸಿದ್ದಾರೆಂದು ಮಲಯಾಳಂ ನಟಿ ರಿನಿ ಜಾರ್ಜ್ ಅವರು ಆನ್‍ಲೈನ್ ಸಂದರ್ಶನದಲ್ಲಿ ಮಾಡಿರುವ ಆರೋಪ ವೈರಲ್ ಆಗಿದೆ; ಬಿಜೆಪಿಯು ಕಾಂಗ್ರೆಸ್‍ನತ್ತ ಬೊಟ್ಟು ಮಾಡಿದೆ.ರಿನಿ ಜಾರ್ಜ್ ಅವರ ವೈರಲ್ ಆಗಿರುವ ಆನ್‍ಲೈನ್ ಇಂಟರ್‍ವ್ಯೂ ಪ್ರಕಾರ ಆ ಶಾಸಕ, ತಾರಾ ಹೋಟೆಲಿನಲ್ಲಿ ರೂಮ್ ಕಾದಿರಿಸಿ ಕಾಯುವೆ, ಬರಬೇಕು ಎಂದು ಹೇಳಿರುವುದಾಗಿಯೂ ವಿವರಿಸಲಾಗಿದೆ. ರಿನಿ ಜಾರ್ಜ್ ಆ ಶಾಸಕರ ಹೆಸರು ಇಲ್ಲವೇ ಯಾವ ಪಕ್ಷಕ್ಕೆ ಸೇರಿದವರು ಎಂದು ಹೇಳಲು

ಹಾಸನ ಜಿಲ್ಲೆ:ಚಂದನಹಳ್ಳಿಯಲ್ಲಿ ಅಸಂಬದ್ಧ ಬಂಧ,ಮದುವೆಯಾದವನ ಸಂಗ ಒಲ್ಲದ ಮಹಿಳೆ ಕೆರೆಗೆ ವಾಹನ ನುಗ್ಗಿಸಿ ಒಲ್ಲದವಳ ಕೊಲೆ

ಕರ್ನಾಟಕದ ಹಾಸನ ಜಿಲ್ಲೆಯ ಚಂದನಹಳ್ಳಿಯಲ್ಲಿ ವಿವಾಹಿತನೊಬ್ಬನು ಮಹಿಳೆಯೊಬ್ಬಳ ಸಂಗ ಬಯಸಿದ್ದು, ಆಕೆ ನಿರಾಕರಿಸಿದಳೆಂದು ಕೆರೆಗೆ ವಾಹನ ನುಗ್ಗಿಸಿ ಆಕೆಯನ್ನು ಸಾಯಿಸಿರುವುದು ತಿಳಿದು ಬಂದಿದೆ.ಆರೋಪಿ ರವಿ ಮದುವೆಯಾಗಿರುವ ವ್ಯಕ್ತಿ. ಆತ ಬಯಸಿ ಆತನಿಂದ ಸಾವು ಕಂಡವಳು ತಿಳಿದವಳೇ ಆದ 32ರ ಶ್ವೇತಾ. ಗಂಡನಿಂದ ಬೇರಾಗಿರುವ ಶ್ವೇತಾ ತನ್ನ ಹೆತ್ತವರೊಂದಿಗೆ ಬದುಕುತ್ತಿದ್ದಳು. ಕಳೆದ ಕೆಲವು ತಿಂಗಳುಗಳಿಂದ ರವಿ ಆಕೆಯ ಬೆನ್ನು ಹತ್ತಿದ್ದ. ನನ್ನ ಲಿವಿಂಗ್ ಸಂಗಾತಿಯಾಗು.

ಮೂಡುಬಿದಿರೆ:ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾಟರ್ ಬೆಡ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಇದರ ಜನ ಮಂಗಳ ಕಾರ್ಯಕ್ರಮ ದಡಿಯಲ್ಲಿ ಕಡಂದಲೆ ಗ್ರಾಮದ ವಿಕಲಚೇತನ ಕೀರ್ತಿಕಾ ಅವರಿಗೆ ವಾಟರ್ ಬೆಡ್ ನ್ನು ತಾಲೂಕಿನ ಯೋಜನಾಧಿಕಾರಿ ಧನಂಜಯ ಅವರು ವಿತರಿಸಿದರು.ಒಕ್ಕೂಟದ ಪದಾಧಿಕಾರಿ ಸುಶೀಲ ಹಾಗೂ ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ವಿದ್ಯಾ ಹಾಗೂ ಸೇವಾಪ್ರತಿನಿಧಿ ವಸಂತಿ ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು